Home
ಸುದ್ದಿಜಾಲ

ಪಾಕಿಸ್ತಾನದಿಂದ ಇದೆಂಥಾ ಕುತಂತ್ರ.. ನಿಮ್ಮಲ್ಲಿಯೂ ಈ ಅಪ್ಲಿಕೇಶನ್‌ ಇದ್ದರೆ ಕೂಡಲೇ ಡಿಲೀಟ್‌ ಮಾಡಿ!

ಪಾಕಿಸ್ತಾನ ಮೂಲದ ಹ್ಯಾಕರ್‌ ಭಾರತದ ನಾಗರೀಕರ ಡೇಟಾ ಕದಿಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಸಾಮಾನ್ಯ ಕಾಪ್ರಾರಾಟ್ ಮೊಬೈಲ್ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಅನ್ನು ಹರಡುವುದಕ್ಕಾಗಿ ಯುಟ್ಯೂಬ್‌ ಅನ್ನು ಹೋಲುವ ನಕಲಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೌದು, ಪಾಕಿಸ್ತಾನಿ ಹ್ಯಾಕರ್‌ಗಳು ಭಾರತದ ಪ್ರಜೆಗಳ ಡೇಟಾ ಕದಿಯಲು ನಕಲಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ಬಳಕೆದಾರರ ಗೌಪ್ಯ ಮಾಹಿತಿ ಕದಿಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅದರಂತೆ ಈಟಿ-ಫಿಶಿಂಗ್ ಗುರಿಗಳ ವಿರುದ್ಧ ಕಣ್ಗಾವಲುಗಾಗಿ ಕ್ಯಾಪ್ರಾರಾಟ್ ಟೂಲ್‌ಸೆಟ್ ಅನ್ನು ಬಳಸಲಾಗಿದೆ ಎನ್ನಲಾಗಿದೆ. ಹಾಗಾದ್ರೆ ಪಾಕಿಸ್ತಾನಿ ಮೂಲದ ಹ್ಯಾಕರ್‌ಗಳು ಯಾವೆಲ್ಲಾ ಅಪ್ಲಿಕೇಶನ್‌ಗಳ ಮೂಲಕ ಡೇಟಾ ಕದಿಯುತ್ತಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಕಿಸ್ತಾನದಿಂದ ಇದೆಂಥಾ ಕುತಂತ್ರ.. ಈ ಅಪ್ಲಿಕೇಶನ್‌ ಇದ್ದರೆ ಕೂಡಲೇ ಡಿಲೀಟ್‌ ಮಾಡಿ

ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪು ಭಾರತದ ಮಿಲಿಟರಿ ಮತ್ತು ರಾಜತಾಂತ್ರಿಕ ಸಿಬ್ಬಂದಿಯನ್ನು ಗುರಿಯಾಗಿಸಲು ಹೆಸರುವಾಸಿಯಾಗಿದೆ. ಇದಕ್ಕಾಗಿ CapraRAT ಅನ್ನು ಸೋಂಕು ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿರುವ ನಾಗರೀಕರ ಡೇಟಾದ ಮೇಲೆ ಆಕ್ರಮಣಕಾರರು ಕಂಟ್ರೋಲ್‌ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಇನ್ನು CapraRAT ಎಂಬುದು Android ಫ್ರೇಮ್‌ವರ್ಕ್ ಆಗಿದ್ದು, ಇದು ಮತ್ತೊಂದು ಅಪ್ಲಿಕೇಶನ್‌ನ ಒಳಗೆ RAT ಫೀಚರ್ಸ್‌ಗಳನ್ನು ಹೈಡ್‌ ಮಾಡಲಿದೆ. ಅಂದರೆ ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನ ಹೊರಗಡೆಯಿಂದ ಡೌನ್‌ಲೋಡ್‌ ಮಾಡುವಂತೆ ಪ್ರೇರೆಪಿಸುತ್ತಾರೆ. ಇದಕ್ಕಾಗಿ ಬಳಕೆದಾರರಿಗೆ ಹಲವು ರೀತಿಯ ಆಮಿಷಗಳನ್ನು ಹುಟ್ಟಿಸುತ್ತಾರೆ. ನೀವು ಒಂದು ಭಾರಿ ಈ ಅಪ್ಲಿಕೇಶನ್‌ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಸಂಪೂರ್ಣ ನಿಯಂತ್ರಣ ಹ್ಯಾಕರ್‌ಗಳ ಕೈನಲ್ಲಿ ಇರಲಿದೆ.

ಪಾಕಿಸ್ತಾನಿ ಹ್ಯಾಕರ್‌ಗಳು ಹರಡುತ್ತಿರುವ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ
* com.Base.media.service
* com.moves.media.tubes
* com.videos.watchs.share

ಈ ಅಪ್ಲಿಕೇಶನ್‌ಗಳು ಹೇಗೆ ನಿಮ್ಮ ಡೇಟಾವನ್ನು ಟ್ರ್ಯಾಕ್‌ ಮಾಡಲಿವೆ
* ನಿಮ್ಮ ಮೊಬೈಲ್‌ನಲ್ಲಿ ಮೈಕ್ರೊಫೋನ್ ಮೂಲಕ ಸೆಲ್ಫಿ ಮತ್ತು ರಿಯರ್‌ ಕ್ಯಾಮೆರಾ ಮೂಲಕ ನಿಮಗೆ ತಿಳಿಯದಂತೆ ರೆಕಾರ್ಡ್‌ ಮಾಡುತ್ತಿರುತ್ತವೆ.
* SMS ಮತ್ತು ಮಲ್ಟಿಮೀಡಿಯಾ ಸಂದೇಶದ ವಿಷಯಗಳನ್ನು, ಕರೆ ದಾಖಲೆಗಳನ್ನು ಸ್ಟೋರೇಜ್‌ ಮಾಡಿಕೊಳ್ಳಲಿವೆ
* ಫೋನ್ ಕರೆಗಳನ್ನು ಪ್ರಾರಂಭಿಸಿದಾಗ ಟ್ರ್ಯಾಕ್‌ ಮಾಡಲಿ
* ಸ್ಕ್ರೀನ್ ಕ್ಯಾಪ್ಚರ್‌ಗಳನ್ನು ತೆಗೆದುಕೊಳ್ಳಲಿದೆ
* GPS ಮತ್ತು ನೆಟ್‌ವರ್ಕ್‌ನಂತಹ ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಅತಿಕ್ರಮಿಸಲಿದೆ
* ಫೋನ್‌ನ ಫೈಲ್‌ಸಿಸ್ಟಮ್‌ನಲ್ಲಿ ಫೈಲ್‌ಗಳನ್ನು ಮಾರ್ಪಡಿಸಲಿದೆ.

ಹ್ಯಾಕರ್‌ಗಳಿಂದ ರಕ್ಷಣೆ ಪಡೆಯುವುದು ಹೇಗೆ?
ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಧಿಕೃತವಾಗಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್‌ ಮಾಡಿ. ಇತರೆ ಥರ್ಡ್‌ ಪಾರ್ಟಿ ಸ್ಟೋರ್‌ಗಳಿಂದ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಲು ಹೋಗಬೇಡಿ. ಅಲ್ಲದೆ ಅಪರಿಚಿತರು ಕಳುಹಿಸುವ ಅಪ್ಲಿಕೇಶನ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ.

ಈ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ಖಾತೆಗೆ ಇಂತಿಷ್ಟು ಹಣ ಬರಲಿದೆ. ಈ ಅಪ್ಲಿಕೇಶನ್‌ ಅನ್ನು ಪ್ರಮೋಷನ್‌ ಮಾಡಿದರೆ ನಿಮಗೆ ಹಣ ಸಿಗಲಿದೆ ಎಂಬೆಲ್ಲಾ ಮಾತುಗಳಿಗೆ ಮರುಳಾಗಬೇಡಿ. ವಂಚಕರು ಕಳುಹಿಸುವ ಈ ರೀತಿಯ ಸಂದೇಶಗಳನ್ನು ಕ್ಲಿಕ್‌ ಮಾಡಿದಾಗ ಬರುವ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಿದರೆ ನಿಮ್ಮ ಇಡೀ ಫೋನ್‌ನ ನಿಯಂತ್ರಣ ಹ್ಯಾಕರ್‌ಗಳ ಕೈನಲ್ಲಿರಲಿದೆ ಅನ್ನೊದನ್ನ ಮರೆಯಬೇಡಿ. ಆದರಿಂದ ನೀವು ಯಾವುದೇ ಅಪರಿಚಿತ ವ್ಯಕ್ತಿಗಳು ಕಳುಹಿಸುವ ಸಂದೇಶ, ಅಪ್ಲಿಕೇಶನ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿದೆ.

Best Mobiles in India

English summary
Pakistan-linked hacker is reportedly using 3 malicious apps to target android Users in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+