ದೊಡ್ಡ ಬದಲಾವಣೆ! PAN 2.0 ಯೋಜನೆಗೆ ಕೇಂದ್ರ ಒಪ್ಪಿಗೆ; ಇನ್ಮುಂದೆ QR ಕೋಡ್ ಅಗತ್ಯ!
ಇಲ್ಲಿ ಕೇಳಿ..! ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್‌ನಲ್ಲಿ ದೊಡ್ಡ ಬದಲಾವಣೆ ತಂದಿದೆ. ಹೌದು, ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ (PAN Card) ಬಹಳ ಮುಖ್ಯ. ತೆರಿಗೆದಾರರ ಗುರುತಿಗಾಗಿ ಮುಂಚೂಣಿಗೆ ಬಂದ ಪ್ಯಾನ್ ಕಾರ್ಡ್ ಇನ್ಮುಂದೆ ಕ್ಯೂಆರ್ (QR Code PAN Card) ಕೋಡ್‌ನೊಂದಿಗೆ ಬರಲಿದೆ. ಈ ಮೂಲಕ ತೆರಿಗೆದಾರರ ಡಿಜಿಟಲ್ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸುಮಾರು 1,435 ಕೋಟಿ ಮೌಲ್ಯದ ಪ್ಯಾನ್ 2.0 ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹೌದು, ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಪ್ಯಾನ್ 2.0 ಅನ್ನು ಅನುಮೋದಿಸಿದೆ. ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದೇ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದರು. ಇದು ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ (QR) ಹೊಂದಿರುತ್ತದೆ. ಈ ಕ್ಯೂಆರ್ ಕೋಡ್ ಸುರಕ್ಷಿತವಾಗಿರುತ್ತದೆ. ಏನಿದರ ಉದ್ದೇಶ? ತಿಳಿಯೋಣ ಬನ್ನಿ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಎಲ್ಲ ಮಾಹಿತಿಯನ್ನು ಪಡೆಯಬಹುದು. ಈಗ ಈ ಕ್ಯೂಆರ್ ಕೋಡ್ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಕಾಣಿಸುತ್ತದೆ. PAN 2.0 ನಲ್ಲಿರುವ ಕ್ಯೂಆರ್ ಕೋಡ್ ನಕಲಿ ಪ್ಯಾನ್ ಕಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಪ್ಯಾನ್ ಕಾರ್ಡ್ ಪರಿಶೀಲನೆ ಸುಲಭವಾಗುತ್ತದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಹಿತಿಯನ್ನು ನೇರವಾಗಿ ಪರಿಶೀಲಿಸಬಹುದು. ನೀವು ಮೊಬೈಲ್ ಅಪ್ಲಿಕೇಶನ್ ಅಥವಾ ಪೋರ್ಟಲ್ ಮೂಲಕ ಸ್ಕ್ಯಾನ್ ಮಾಡಬಹುದು. ತಕ್ಷಣವೇ ಮಾಹಿತಿಯನ್ನು ಪಡೆಯಬಹುದು.
PAN 2.0 ಯೋಜನೆ ಉದ್ದೇಶ ಏನು?
PAN 2.0 ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂ. ಮೀಸಲಿಟ್ಟಿದೆ. ಇದರ ಮುಖ್ಯ ಉದ್ದೇಶವೆಂದರೆ, ಸರ್ಕಾರಿ ಇಲಾಖೆಗಳ ಎಲ್ಲ ಡಿಜಿಟಲ್ ವ್ಯವಸ್ಥೆಗಳಲ್ಲಿ ಪ್ಯಾನ್ ಕಾರ್ಡ್ ಮುಖ್ಯ ಗುರುತಿಸುವಿಕೆಯಾಗಿ ಬಳಸುವುದು. ಪ್ಯಾನ್ 2.0 ಯೋಜನೆಯು ಡಿಜಿಟಲ್ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಎಲ್ಲಾ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ.
ಉಚಿತ ಕ್ಯೂಆರ್ ಕೋಡ್ ಪ್ಯಾನ್ ಕಾರ್ಡ್
ಪ್ಯಾನ್ 2.0 ಯೋಜನೆ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಪ್ಯಾನ್ 2.0 ಯೋಜನೆಯಡಿ ಕ್ಯೂಆರ್ ಕೋಡ್ ಹೊಂದಿರುವ ಹೊಸ ಪ್ಯಾನ್ ಕಾರ್ಡ್ ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸುಲಭವಾಗಿ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಸೇವೆಗಳ ವಿತರಣೆಯನ್ನೂ ತ್ವರಿತಗೊಳಿಸಬಹುದು ಮತ್ತು ಗುಣಮಟ್ಟವೂ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ಹೊಸ ಪ್ಯಾನ್ ಕಾರ್ಡ್ ಹೇಗಿರಲಿದೆ?
ಹಳೆಯ ಪ್ಯಾನ್ ಕಾರ್ಡ್‌ಗಿಂತ ಹೊಸ ಕಾರ್ಡ್ ಹೆಚ್ಚು ಭಿನ್ನವಾಗಿರುತ್ತದೆ. ಹೊಸ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಇದು ಪೇಪರ್‌ಲೇನ್ ಅಂದರೆ, ಆನ್‌ಲೈನ್ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕ್ಯೂಆರ್ ಕೋಡ್ ಹೆಸರು, ಹುಟ್ಟಿದ ದಿನಾಂಕ, ಪ್ಯಾನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಎನ್‌ಕ್ರಿಪ್ಟ್ ಮಾಡಿದ ರೂಪದಲ್ಲಿ ಒಳಗೊಂಡಿರುತ್ತದೆ. ಪ್ರಮುಖ ವಿಷಯವೆಂದರೆ, ನೀವು ಇದಕ್ಕಾಗಿ ಪ್ರತ್ಯೇಕ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ನೀವು ಕ್ಯೂಆರ್ ಕ್ಯೂಆರ್ ಕೋಡ್‌ನೊಂದಿಗೆ ಪ್ಯಾನ್‌ಗಾಗಿ ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಇದು ಹೆಚ್ಚು ಸುರಕ್ಷಿತವಾಗಿರುತ್ತದೆ.
ಪ್ಯಾನ್ ಕಾರ್ಡ್ ಏಕೆ ಬೇಕು?
ಆದಾಯ ತೆರಿಗೆ ಇಲಾಖೆಯು (IT) ನೀಡುವ 10 ಅಂಕಿಯ ಆಲ್ಫಾನ್ಯೂಮರಿಕ್ ಗುರುತಿನ ಚೀಟಿಯೇ ಪ್ಯಾನ್ ಕಾರ್ಡ್ ಆಗಿದೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಸಂಖ್ಯೆಯ ಮೂಲಕ ನಿಮ್ಮ ಆನ್‌ಲೈನ್ ಅಥವಾ ಹಣಕಾಸಿನ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ.


Click it and Unblock the Notifications








