Home
ಸುದ್ದಿಜಾಲ

ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸಲು ಇಂದೇ ಕೊನೆ ದಿನ! ತಪ್ಪಿದರೆ ಏನಾಗಲಿದೆ ಗೊತ್ತಾ?

ಆಧಾರ್‌ ಸಂಖ್ಯೆಯೊಂದಿಗೆ ನಿಮ್ಮ ಪ್ಯಾನ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿಸಲು ಇಂದು (ಜೂನ್ 30) ಕೊನೆದಿನವಾಗಿದೆ. ಇಂದು ನಿಗಧಿತ ಸಮಯದೊಳಗೆ ನೀವು ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸದಿದ್ದರೆ ನಿಮ್ಮ ಪ್ಯಾನ್‌ ನಿಷ್ಕ್ರೀಯವಾಗಲಿದೆ. ಪ್ಯಾನ್‌ ಆಧಾರ್‌ಗೆ ನೀಡಿದ್ದ ಡೆಡ್‌ಲೈನ್‌ ಇಂದಿಗೆ ಕೊನೆಯಾಗಲಿದ್ದು, ಪ್ಯಾನ್‌ ಬಳಕೆದಾರರು ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯವಾಗಿದೆ.

ಹೌದು, ಕೇಂದ್ರ ಆದಾಯ ತೆರಿಗೆ ಇಲಾಖೆ ಆಧಾರ್‌ ಪ್ಯಾನ್‌ ಲಿಂಕ್‌ಗೆ ನೀಡಿದ್ದ ಗಡುವು ಇಂದು ಕೊನೆಯಾಗಲಿದೆ. ಆದರಿಂದ ಈ ದಿನ ಮುಗಿಯುವುದರೊಳಗೆ ನೀವು ನಿಮ್ಮ ಪ್ಯಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಿಸಿಬಿಡಿ. ಇಲ್ಲದಿದ್ದರೆ ಯಾವುದೇ ಸೂಚನೆಯಿಲ್ಲದೆ ಜುಲೈ 1, 2023 ರಿಂದ ನಿಮ್ಮ ಪ್ಯಾನ್‌ ನಿಷ್ಕ್ರಿಯಗೊಳ್ಳುತ್ತದೆ. ಹಾಗಾದ್ರೆ ಆಧಾರ್‌ ಪ್ಯಾನ್‌ಗೆ ನೀಡಿದ್ದ ಗಡುವು ಏನು? ಇದರಿಂದಾಗುವ ಲಾಭ ಏನು ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸಲು ಇಂದೇ ಕೊನೆ ದಿನ! ತಪ್ಪಿದರೆ ಏನಾಗಲಿದೆ ಗೊತ್ತಾ?

ಇಂದು ಮಧ್ಯರಾತ್ರಿಯೊಳಗೆ ನಿಮ್ಮ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿಸದೆ ಹೋದರೆ ನಿಮ್ಮ ಪ್ಯಾನ್​ ಕಾರ್ಡ್​ ನಿಷ್ಕ್ರಿಯವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್‌ ವಹಿವಾಟು ಸೇರಿದಂತೆ ಹಲವು ಆರ್ಥಿಕ ವಿಚಾರಗಳಲ್ಲಿ ನೀವು ಹಿನ್ನಡೆ ಅನುಭವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಈ ಹಿಂದೆ ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್​ ಮಾಡುವವರಿಗೆ 500ರೂ ದಂಡವನ್ನು ಪಾವತಿಸುವಂತೆ ಹೇಳಿತ್ತು. ಸದ್ಯ ಪ್ರಸ್ತುತ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1,000 ರೂ ದಂಡ ಪಾವತಿಸಬೇಕಿದೆ.

ಒಂದು ವೇಳೆ ನೀವು ಇಂದು ನಿಗಧಿತ ಸಮಯಕ್ಕೆ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿಸದೆ ಹೋದರೆ ಹತ್ತು ಸಾವಿರ ರೂ. ದಂಡಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಐಟಿ ಇಲಾಖೆ ಹೇಳಿದೆ. ಬ್ಯಾಂಕಿಂಗ್‌ ಸೇರಿದಂತೆ ಆರ್ಥಿಕ ವಲಯದಲ್ಲಿ ನಡೆಯುವ ವಹಿವಾಟುಗಳಿಗೆ ಪ್ಯಾನ್ ಒಂದು ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸಲಿದೆ. ಇದೇ ಕಾರಣಕ್ಕೆ ಪ್ಯಾನ್‌ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್‌ ಮಾಡಿಸುವುದಕ್ಕೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ನಿರ್ದೇಶನವನ್ನು ನೀಡಿತ್ತು ಅನ್ನೊದು ಗಮನಿಸಬೇಕಾದ ಅಂಶವಾಗಿದೆ.

ಇನ್ನು ಹಿಂದಿನ ಘಟನೆಗಳನ್ನು ಗಮನಿಸುವುದಾದರೆ ಮಾರ್ಚ್ 2022 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಟಿಸಿದ್ದ ಸುತ್ತೋಲೆಯಲ್ಲಿದ್ದ ಮಾಹಿತಿ ಪ್ರಕಾರ, ಆದಾಯ ತೆರಿಗೆ ಕಾಯಿದೆಯು ಜುಲೈ 1, 2017 ಕ್ಕೆ PAN ಅನ್ನು ನಿಗದಿಪಡಿಸಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆ ತಿಳಿಸುವುದು ಕಡ್ಡಾಯವಾಗಿದೆ. ಇದೇ ಕಾರಣಕ್ಕೆ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಿಸುವುದು ಅತಿ ಅವಶ್ಯಕವಾಗಿದೆ.

ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸಲು ಇಂದೇ ಕೊನೆ ದಿನ! ತಪ್ಪಿದರೆ ಏನಾಗಲಿದೆ ಗೊತ್ತಾ?

ಯಾರಿಗೆಲ್ಲಾ ಪ್ಯಾನ್ ಅನ್ನು ಆಧಾರ್‌ ಲಿಂಕ್ ಕಡ್ಡಾಯವಿಲ್ಲ?
* ಎಂಭತ್ತು ವರ್ಷ ಮೇಲ್ಪಟ್ಟವರಿಗೆ ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯವಲ್ಲ.
* ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನಿವಾಸಿ ಭಾರತೀಯರು.
* ಭಾರತದ ಪ್ರಜೆ ಆಗಿಲ್ಲದವರು ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯವಲ್ಲ.

ಪ್ಯಾನ್ ಆಧಾರ್ ಲಿಂಕ್ ಮಾಡಿಸದಿದ್ದರೆ ಪರಿಣಾಮವೇನು?
ಇಂದು ನೀವು ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸದೆ ಹೋದರೆ ನಿಮ್ಮ ಪ್ಯಾನ್ ನಿಷ್ಕೀಯವಾಗಲಿ. ಈ ರೀತಿಯ ಪ್ಯಾನ್‌ ಬಳಸಿಕೊಂಡು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಬಾಕಿ ಇರುವ ರಿಟರ್ನ್‌ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಜೊತೆಗೆ ನಿಮ್ಮ ಪ್ಯಾನ್‌ ನಿಷ್ಕ್ರೀಯವಾಗಿದ್ದರೆ ತೆರಿಗೆ ಪಾವತಿಸುವಾಗ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆ ಬರಲಿದೆ. ಇದರೊಂದಿಗೆ ನಿಮ್ಮ ಬ್ಯಾಂಕ್‌ ವಹಿವಾಟು ಸೇರಿದಂತೆ ಹಣಕಾಸಿನ ವಹಿವಾಟು ನಡೆಸುವಾಗ ತೊಂದರೆ ಎದುರಾಗಲಿದೆ.

ಆಧಾರ್ ಜೊತೆಗೆ ಪ್ಯಾನ್‌ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ( http://www.incometax.gov.in.) ಆಧಾರ್‌ ಪ್ಯಾನ್‌ ಲಿಂಕ್‌ ಮಾಡುವುದಕ್ಕಾಗಿ ಆಯ್ಕೆಯನ್ನು ನೀಡಲಾಗಿದೆ. ಇದನ್ನು ಕ್ಲಿಕ್‌ ಮಾಡಿ ನಂತರ ಬರುವ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಪ್ಯಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಬಹುದು.

Best Mobiles in India

English summary
PAN and Aadhaar linking deadline ends today!..what can happen if you don’t
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+