ಪ್ಯಾನ್ ಆಧಾರ್ ಲಿಂಕ್ ಮಾಡಲು ಮತ್ತೆ ಮೂರು ತಿಂಗಳ ಅವಕಾಶ ನೀಡಿದ ಸರ್ಕಾರ!
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ನೀಡಲಾಗಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ಸಾಕಷ್ಟು ಟ್ರೆಂಡ್‌ನಲ್ಲಿದ್ದ ವಿಚಾರಕ್ಕೆ ಇನ್ನಷ್ಟು ದಿನಗಳ ಗಡುವು ನೀಡಲಾಗಿದೆ. ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಕಡ್ಡಾಯ ವಿಚಾರ ಮೂರು ವರ್ಷಗಳಿಂದಲೂ ಇದ್ದರೂ ಸಹ ಇತ್ತೀಚಿಗೆ ತುಂಬಾ ಪರವಿರೋದ ಕೇಳಿ ಬರುತ್ತಿದೆ.
ಹೌದು, ಸಾಕಷ್ಟು ಪರ ವಿರೋದಗಳಿಗೆ ಗುರಿಯಾಗಿದ್ದ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಇನ್ನಷ್ಟು ಗಡುವನ್ನು ನೀಡಲಾಗಿದೆ. ಇದೇ ಮಾರ್ಚ್ 31ರಂದು ಕೊನೆಯಾಗಬೇಕಿದ್ದ ಗಡುವನ್ನು ಮುಂದಿನ ಜೂನ್ 30, 2023 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ ಪ್ಯಾನ್ ಆಧಾರ್ ಲಿಂಕ್ ದಿನಾಂಕವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿರುವುದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೇಶದಲ್ಲಿ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಹೇಳಿದೆ. ಅಲ್ಲದೆ ಇದಕ್ಕಾಗಿ ಹಲವು ಗಡುವುಗಳನ್ನು ನಿಗದಿಪಡಿಸಿ ವಿಸ್ತರಣೆ ಮಾಡುತ್ತಲೇ ಬಂದಿದೆ. ಆದರೆ ಈ ಭಾರಿ ಯಾವುದೇ ಗಡುವು ವಿಸ್ತರಣೆ ಮಾಡುವುದಿಲ್ಲ. ಇದೇ ಮಾರ್ಚ್ 31ರಂದು ಗಡುವು ಕೊನೆಯಾಗಲಿದೆ. ಕೂಡಲೇ ಒಂದು ಸಾವಿರ ರೂ ದಂಡ ಪಾವತಿಸುವ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡಿಸಿ ಎಂದು ಹೇಳಲಾಗಿತ್ತು.
ಆದರೆ ಇದೇ ಮಾರ್ಚ್ 31ರಂದು ಗಡುವು ಮುಕ್ತಾಯ ಮಾಡುವುದರ ಬಗ್ಗೆ ದೇಶದಲ್ಲಿ ಸಾಕಷ್ಟು ಪರ ವಿರೋದ ಚರ್ಚೆ ನಡೆದಿತ್ತು. ಅಲ್ಲದೆ ಒಂದು ಸಾವಿರ ರೂ. ದಂಡ ಪಾವತಿಸುವುದರ ಬಗ್ಗೆ ಕೂಡ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದಲ್ಲದೆ ಗಡುವು ದಿನಾಂಕ ಮುಗಿದ ನಂತರ ಹತ್ತು ಸಾವಿರ ದಂಡ ಪಾವತಿಸಬೇಕಾಗುತ್ತದೆ ಎಂಬ ವದಂತಿ ಕೂಡ ದೇಶವಾಸಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಇದೆಲ್ಲವನ್ನು ಗಮನಿಸಿರುವ ಸರ್ಕಾರ ಮತ್ತೆ ಮೂರು ತಿಂಗಳ ಗಡುವು ವಿಸ್ತರಣೆ ಮಾಡಿದೆ. ಇದೀಗ ದೇಶವಾಸಿಗಳು ತಮ್ಮ ಪ್ಯಾನ್ ಆಧಾರ್ ಲಿಂಕ್ ಅನ್ನು ಸೂಕ್ತವಾದ ಮಾಹಿತಿಯೊಂದಿಗೆ ಲಿಂಕ್ ಮಾಡಿಸಲು ಅವಕಾಶ ಸಿಗಲಿದೆ.

ಹಾಗೇ ನೋಡಿದ್ರೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಅಡಿಯಲ್ಲಿ, ಜುಲೈ 1, 2017 ರಂದು ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆದೇಶ ನೀಡಲಾಗಿತ್ತು. ಅಲ್ಲದೆ ಇದಕ್ಕಾಗಿ ಸಾಕಷ್ಟು ಕಲಾವಕಾಶವನ್ನು ನೀಡಲಾಗಿತ್ತು. ಇದರೊಂದಿಗೆ ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಮಾಡಿಸುವುದು ಉಚಿತವಾಗಿತ್ತು. ಆದರೆ ಇದೀಗ ಸಾವಿರ ರೂ ದಂಡ ಪಾವತಿಸುವುದು ಅನಿವಾರ್ಯವಾಗಿದೆ.
ಒಂದು ವೇಳೆ ನಿಗಧಿತ ದಿನಾಂಕದಲ್ಲಿ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡದೇ ಹೋದರೆ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳಲಿದೆ. ಪ್ರಸ್ತುತ ಇಲ್ಲಿಯವರೆಗೆ ದೇಶದಲ್ಲಿ 51 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ!
ನಿಮ್ಮ ಪ್ಯಾನ್-ಆಧಾರ್ ಅನ್ನು ನೀವು ಆನ್‌ಲೈನ್‌ನಲ್ಲಿ ಲಿಂಕ್ ಮಾಡಬಹುದು ಅಥವಾ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ 567678 ಅಥವಾ 56161 ಗೆ ಎಸ್‌ಎಮ್‌ಎಸ್ ಕಳುಹಿಸುವ ಮೂಲಕ ಆದಾಯ ತೆರಿಗೆ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ತಡವಾದ ಶುಲ್ಕವನ್ನು ಪಾವತಿಸುವ ಮೂಲಕ ಎರಡು ಗುರುತಿನ ಪುರಾವೆಗಳನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಬಹುದು. ಅದಕ್ಕಾಗಿ ಈ ಮುಂದಿನ ಕ್ರಮಗಳನ್ನು ಅನುಸರಿಸಿ.

* incometax.gov.in/iec/foportal ಗೆ ಭೇಟಿ ನೀಡಿ
* 'Quick Links' ವಿಭಾಗಕ್ಕೆ ಹೋಗಿ, ಸ್ಕ್ರಾಲ್ ಮಾಡಿ ಮತ್ತು 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
* 'I validate my Aadhaar Details' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಿ.
* 'ಮುಂದುವರಿಸಿ' ಕ್ಲಿಕ್ ಮಾಡಿ.
* ಈಗ ಪ್ರಕ್ರಿಯೆಯನ್ನು ಮೌಲ್ಯೀಕರಿಸಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ.
* ದಂಡ ಶುಲ್ಕವನ್ನು ಪಾವತಿಸಿದ ನಂತರ ನಿಮ್ಮ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ.


Click it and Unblock the Notifications








