Pan Card: ಪ್ಯಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೀರಾ? ಅಪ್ಲಿಕೇಶನ್ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!
ನೀವು ಪ್ಯಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದು, ಇನ್ನು ಕೂಡ ನಿಮಗೆ ಪ್ಯಾನ್ ಕಾರ್ಡ್ (Pan Card) ಸಿಕ್ಕಿಲ್ಲವೇ. ಪ್ಯಾನ್‌ಕಾರ್ಡ್ ಅರ್ಜಿ ಏನಾಗಿದೆ, ನಿಮ್ಮ ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಹೇಗಿದೆ ಅದನ್ನ ತಿಳಿದುಕೊಳ್ಳಲು ಏನು ಮಾಡಬೇಕು ಅನ್ನೊ ಗೊಂದಲದಲ್ಲಿದ್ದೀರಾ? ಇದಕ್ಕಾಗಿ ನೀವು ಚಿಂತಿಸಬೇಕಿಲ್ಲ, ನಿಮ್ಮ ಪ್ಯಾನ್‌ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸುವುದಕ್ಕೆ ಹಲವು ಮಾರ್ಗಗಳಿವೆ.
ಹೌದು, ಪ್ಯಾನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದು, ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಟ್ರ್ಯಾಕ್ ಮಾಡಬೇಕಿದ್ದರೆ ಹಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಇದರ ಮೂಲಕ ನಿಮ್ಮ ಪ್ಯಾನ್‌ಕಾರ್ಡ್ ಅಪ್ಲಿಕೇಶನ್ ಏನಾಗಿದೆ, ನಿಮ್ಮ ಪ್ಯಾನ್‌ಕಾರ್ಡ್ ಇದೀಗ ಎಲ್ಲಿದೆ ಅನ್ನೊ ವಿವರ ತಿಳಿಯಬಹುದು. ಹಾಗಾದ್ರೆ ನಿಮ್ಮ ಪ್ಯಾನ್‌ಕಾರ್ಡ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನ್‌ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸುವುದು ಯಾಕೆ ಅತ್ಯಗತ್ಯ?
ಪ್ಯಾನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಅಂತಾ ತಿಳಿಯುವ ಮುನ್ನ ಯಾಕೆ ಚೆಕ್ ಮಾಡುವುದು ಅವಶ್ಯವಾಗಿದೆ ಅನ್ನೊದನ್ನ ಮೊದಲು ತಿಳಿದುಕೊಳ್ಳಬೇಕಿದೆ. ನಿಮ್ಮ ಪ್ಯಾನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದರಿಂದ ಸಂಬಂಧಿತ ಅಧಿಕಾರಿಗಳಿಂದ ಸುಗಮ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿದೆ ಅನ್ನೊದು ಖಚಿತವಾಗಲಿದೆ. ಅಲ್ಲದೆ ಅಪ್ಲಿಕೇಶನ್‌ನ ಪ್ರಗತಿಯನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ನಿಮಗೆ ಪ್ಯಾನ್ ಕಾರ್ಡ್ ಯಾವಾಗ ಕೈ ಸೇರಲಿದೆ ಅನ್ನೊದು ತಿಳಿಯಲಿದೆ.
ಇದಲ್ಲದೆ ಅಪ್ಲಿಕೇಶನ್ ಸ್ಟೇಟಸ್ ಸಮಯದಲ್ಲಿ ನಿಮ್ಮ ಪ್ಯಾನ್‌ಕಾರ್ಡ್ ಅಪ್ಲಿಕೇಶನ್‌ನಲ್ಲಿ ಏನಾದ್ರು ದೋಷವಾಗಿದೆಯಾ ಅನ್ನೊದನ್ನ ತಿಳಿಯಲು ಸಾಧ್ಯವಾಗಲಿದೆ. ಇದರಿಂದ ಸಾಧ್ಯವಾದಷ್ಟು ಬೇಗ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು. ಇನ್ನು ನಿಮ್ಮ ಪ್ಯಾನ್‌ಕಾರ್ಡ್ ಸಿದ್ದವಾದ ನಂತರ ಅದರ ಪ್ರಕ್ರಿಯೆಯ ಹಂತಗಳ ಕುರಿತು ಅಪ್ಡೇಟ್ ಅನ್ನು ಪಡೆದುಕೊಳ್ಳು ಸಾದ್ಯವಾಗಲಿದೆ.
ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
ಆನ್‌ಲೈನ್ ಪೋರ್ಟಲ್ ಮೂಲಕ ಸ್ಟೆಟಸ್ ಚೆಕ್ ಮಾಡಲು ಹೀಗೆ ಮಾಡಿ
* ಮೊದಲಿಗೆ ಅಧಿಕೃತ NSDL ಅಥವಾ UTIITSL ವೆಬ್‌ಸೈಟ್‌ಗೆ ಭೇಟಿ ನೀಡಿ
* ನಂತರ ಪ್ಯಾನ್ ಕಾರ್ಡ್ ಸ್ಟೇಟಸ್‌ಗೆ ಸೂಕ್ತವಾದ ಆಯ್ಕೆಯನ್ನು ಆರಿಸಿ.
* ಇದರಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ (ಸ್ವೀಕಾರ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆ)
* ನಂತರ ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ
* ಇದೀಗ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ವೀಕ್ಷಿಸಬಹುದು.
SMS ಮೂಲಕ ನಿಮ್ಮ ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಲು ಹೀಗೆ ಮಾಡಿ!
ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವ ಅತಿ ಸುಲಭವಾದ ವಿಧಾನವೆಂದರೆ ಅದು ಎಸ್‌ಎಂಎಸ್ ಸೇವೆಯಾವಿದೆ. ನೀವು 57575 ಸಂಖ್ಯೆಗೆ ಟೆಕ್ಸ್ಟ್ ಮೆಸೇಜ್ ಕಳುಹಿಸಬೇಕಾಗುತ್ತದೆ. ಇನ್ನು ಈ ಸಂದೇಶವು 'NSDLPAN' ಕೋಡ್ ಅನ್ನು ಹೊಂದಿರಬೇಕು, ಇದಕ್ಕಾಗಿ ನೀವು ಅರ್ಜಿ ಸಲ್ಲಿಕೆಯ ನಂತರ ಪಡೆದ 15-ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಅನುಸರಿಸಬೇಕಾಗುತ್ತದೆ. ಹೀಗೆ ನೀವು ಸಂದೇಶ ಕಳುಹಿಸಿದ ನಂತರ ನಿಮಗೆ ಅರ್ಜಿಯ ಸ್ಟೇಟಸ್ ಬಗ್ಗೆ ಸಂದೇಶ ಬರಲಿದೆ.

ಫೋನ್ ಕರೆ ಮೂಲಕ ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!
ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ತಿಳಿಯುವುದಕ್ಕಾಗಿ ನೀವು 020-27218080 ಸಂಖ್ಯೆಗೆ 7:00 a.m ಮತ್ತು 11:00 p.m. ನಡುವೆ ಕರೆ ಮಾಡಬಹುದು. ನಂತರ ಅರ್ಜಿದಾರರು ಸಂಬಂಧಿತ 15-ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಕಾಲ್ ಸೆಂಟರ್ ಪ್ರತಿನಿಧಿಗೆ ನೀಡುವ ಮೂಲಕ ಅಪ್ಲಿಕೇಶನ್‌ನ ಸ್ಟೇಟಸ್ ತಿಳಿದುಕೊಳ್ಳಬಹುದಾಗಿದೆ.


Click it and Unblock the Notifications








