PAN Card: ಪ್ಯಾನ್‌ಕಾರ್ಡ್ ಕಳೆದುಹೋಗಿದೆ ಅಂತಾ ಚಿಂತಿಸಬೇಡಿ! ತಕ್ಷಣ ಈ ಕೆಲಸ ಮಾಡಿ!
ಯಾವುದೇ ಹಣಕಾಸಿನ ವಹಿವಾಟುಗಳನ್ನು ನಡೆಸಬೇಕಾದರೂ ಪ್ಯಾನ್‌ಕಾರ್ಡ್ ಕಡ್ಡಾಯವಾಗಿದೆ. ಅಲ್ಲದೆ ಪ್ಯಾನ್‌ಕಾರ್ಡ್ ಅನ್ನು ನಿಮ್ಮ ಗುರುತಿನ ಚೀಟಿಯಾಗಿ ಕೂಡ ಬಳಸಬಹುದಾಗಿದೆ. ಇದರಿಂದ ಪ್ಯಾನ್‌ಕಾರ್ಡ್ ಅನ್ನು ಪ್ರತಿಯೊಬ್ಬರೂ ಹೊಂದುವುದಕ್ಕೆ ಬಯಸುತ್ತಾರೆ. ಒಂದು ವೇಳೆ ನಿಮ್ಮ ಪ್ಯಾನ್‌ಕಾರ್ಡ್ ಕಳೆದುಹೋದರೆ ಏನು ಮಾಡುವುದು ಎನ್ನುವ ಪ್ರಶ್ನೆ ಸಹಜವಾಗಿ ಬರಲಿದೆ.
ಹೌದು, ಪ್ಯಾನ್‌ಕಾರ್ಡ್ (PAN Card) ಕಳೆದು ಹೋದರೆ ಏನು ಮಾಡುವುದು ಎನ್ನುವ ಆತಂಕ ಎಲ್ಲರಿಗೂ ಇದೆ. ಹಾಗಂತ ನೀವು ಹೊಸ ಪ್ಯಾನ್‌ಕಾರ್ಡ್‌ಗೆ ಮತ್ತೆ ಅರ್ಜಿ ಹಾಕುವುದಕ್ಕೆ ಆಗೋದಿಲ್ಲ. ಬದಲಿಗೆ ನೀವು ಪ್ಯಾನ್‌ಕಾರ್ಡ್‌ನ ಡುಪ್ಲಿಕೇಟ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದ್ರೆ ಡುಪ್ಲಿಕೇಟ್ ಪ್ಯಾನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ಒರಿಜಿನಲ್ ಪ್ಯಾನ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಬಳಕೆದಾರರು ಆದಾಯ ತೆರಿಗೆ ಇಲಾಖೆಯಿಂದ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಪ್ಯಾನ್‌ಕಾರ್ಡ್ ಕಳೆದುಹೋಗಿರುವುದರ ಬಗ್ಗೆ ಮಾಹಿತಿ ನೀಡುವ ಮೂಲಕ ಡುಪ್ಲಿಕೇಟ್ ಕಾರ್ಡ್ ಪಡೆಯಲು ಸಾಧ್ಯವಾಗಲಿದೆ. ಇನ್ನು ಈ ಡುಪ್ಲಿಕೇಟ್ ಪ್ಯಾನ್‌ಕಾರ್ಡ್ 10-ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಹೊಂದಿರುವ ಒರಿಜಿನಲ್ ಪ್ಯಾನ್ ಕಾರ್ಡ್‌ನ ನಿಖರವಾದ ಪ್ರತಿರೂಪವಾಗಿರುತ್ತದೆ.

ಡುಪ್ಲಿಕೇಟ್ ಪ್ಯಾನ್ ಕಾರ್ಡ್‌ಗೆ ಯಾವಾಗ ಅರ್ಜಿ ಸಲ್ಲಿಸಬಹುದು?
* ಒರಿಜಿನಲ್ ಕಾರ್ಡ್ ಕಳೆದು ಹೋದಾಗ ಡುಪ್ಲಿಕೇಟ್ ಪ್ಯಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು
* ಒರಿಜಿನಲ್ ಪ್ಯಾನ್ ಕಾರ್ಡ್ misplaced ಆಗಿದ್ದಾಗಲೂ ಅರ್ಜಿ ಸಲ್ಲಿಸಬಹುದು
* ಇಲ್ಲವೇ ನಿಮ್ಮ ಒರಿಜಿನಲ್ ಕಾರ್ಡ್‌ಗೆ Damage ಆಗಿದ್ದರೂ ಸಹ ಅರ್ಜಿ ಸಲ್ಲಿಸಬಹುದು
ಪ್ಯಾನ್ ಕಾರ್ಡ್ ರೀಪ್ರಿಂಟ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ
* ಮೊದಲಿಗೆ ಪ್ಯಾನ್ ಸೇವಾ ಪೋರ್ಟಲ್ www.pan.utiitsl.com ತೆರೆಯಿರಿ
* ನಂತರ ತೆರೆಯುವ ಪೇಜ್‌ನಲ್ಲಿ ಕಾಣಿಸಿಕೊಳ್ಳುವ ನಿಯಮಗಳು ಮತ್ತು ಷರತ್ತುಗಳನ್ನು ಓದಿ
* ಇದೀಗ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಕ್ಲಿಕ್ ಮಾಡಿ
* ಇದಕ್ಕಾಗಿ ನಿಮ್ಮ ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಭರ್ತಿ ಮಾಡಿ
* ಇಲ್ಲಿ ಗುರುತಿಸಲಾಗುವ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
* ನಂತರ ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
* ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ
* ಇದೀಗ ನಿಮಗೆ ಪ್ಯಾನ್ ಕಾರ್ಡ್ ರಿಪ್ರಿಂಟ್‌ಗಾಗಿ ಅರ್ಜಿ ಸಲ್ಲಿಸಿರುವ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
* ಇದನ್ನು ನೀವು ಭವಿಷ್ಯದ ಬಳಕೆಗಾಗಿ ಸೇವ್ ಮಾಡಿಕೊಳ್ಳುವುದು ಉತ್ತಮ.
* ಇದರಿಂದ ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.

ಡುಪ್ಲಿಕೇಟ್ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
* ಗುರುತಿನ ಪುರಾವೆಗಾಗಿ ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಇತ್ಯಾದಿ
* ವಿಳಾಸದ ಪುರಾವೆಗಾಗಿ ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್,ಇತ್ಯಾದಿ
* ಜನ್ಮ ದಿನಾಂಕದ ಪುರಾವೆಗಾಗಿ ಸ್ವಯಂ-ದೃಢೀಕರಿಸಿದ ಪ್ರತಿ (ಆಧಾರ್, ವೋಟರ್ ಐಡಿ,ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಇತ್ಯಾದಿ)
* ಒರಿಜಿನಲ್ ಪ್ಯಾನ್ ಕಾರ್ಡ್‌ನ ಸ್ವಯಂ-ದೃಢೀಕರಿಸಿದ ಪ್ರತಿ
ಈ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವಾಗ ಅಗತ್ಯವಿದ್ದು, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಲ್ಲಿ ಅರ್ಜಿಯನ್ನು ಸ್ವೀಕರಿಸಿದ 2 ವಾರಗಳಲ್ಲಿ ನಕಲಿ ಪ್ಯಾನ್ ಅನ್ನು ನೀಡಲಾಗುತ್ತದೆ.


Click it and Unblock the Notifications








