Home
ಸುದ್ದಿಜಾಲ

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ರೆಫ್ರಿಜರೇಟರ್‌! ಬಜೆಟ್‌ ಸ್ನೇಹಿ ಬೆಲೆ!

ಇತ್ತೀಚಿನ ದಿನಗಳಲ್ಲಿ ಮೇಡ್‌ ಇನ್‌ ಇಂಡಿಯಾ ಹೋಮ್‌ ಅಪ್ಲೈಯನ್ಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದಕ್ಕೆ ಅನುಗುಣವಾಗಿ ಹಲವು ಬ್ರ್ಯಾಂಡ್‌ಗಳು ಕೂಡ ಮೇಡ್‌ ಇನ್‌ ಇಂಡಿಯಾ ಪ್ರಾಡಕ್ಟ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಪ್ಯಾನಾಸೋನಿಕ್‌ ಕಂಪೆನಿ ಕೂಡ ಎರಡು ಹೊಸ ಮೇಡ್‌ ಇನ್‌ ಇಂಡಿಯಾ ರೆಫ್ರಿಜರೇಟರ್‌ಗಳನ್ನು ಪರಿಚಯಿಸಿದೆ.

ಹೌದು, ಪ್ಯಾನಾಸೋನಿಕ್ ಎರಡು ಹೊಸ ಸರಣಿಯ ರೆಫ್ರಿಜರೇಟರ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ರೆಫ್ರಿಜರೇಟರ್‌ಗಳು ಹೊಸ ಪ್ರೈಮ್ ಕನ್ವರ್ಟಿಬಲ್ ಸರಣಿ ಆಗಿದ್ದು, ಕೆಳಭಾಗದಲ್ಲಿ ಮೌಂಟೆಡ್ ಫ್ರೀಜರ್ ಅನ್ನು ಒಳಗೊಂಡಿದೆ. ಇದು ಬಜೆಟ್ ಸ್ನೇಹಿ ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳನ್ನು ಕಾಂಪ್ಯಾಕ್ಟ್ ಗಾತ್ರದಲ್ಲಿ ಬರಲಿವೆ. ಹಾಗಾದ್ರೆ ಈ ಎರಡು ಹೊಸ ರೆಫ್ರಿಜರೇಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ರೆಫ್ರಿಜರೇಟರ್‌! ಬಜೆಟ್‌ ಸ್ನೇಹಿ ಬೆಲೆ!

ಪ್ಯಾನಾಸೋನಿಕ್ ಪ್ರೈಮ್ ಕನ್ವರ್ಟಿಬಲ್ ರೆಫ್ರಿಜರೇಟರ್‌ ಫೀಚರ್ಸ್‌ ಹೇಗಿದೆ?
ಪ್ಯಾನಾಸೋನಿಕ್‌ ಪರಿಚಯಿಸಿರುವ ಪ್ರೈಮ್ ಕನ್ವರ್ಟಿಬಲ್ ರೆಫ್ರಿಜರೇಟರ್‌ಗಳು ಎರಡು-ಬಾಗಿಲಿನ ವಿನ್ಯಾಸವನ್ನು ಹೊಂದಿವೆ. ಇದು ಕನ್ವರ್ಟಿಬಲ್ ಮಾದರಿಯಾಗಿರುವುದರಿಂದ, ಫ್ರೀಜರ್ ಯೂನಿಟ್‌ ಅನ್ನು ತಾಜಾ ವಲಯವಾಗಿಯೂ ಬಳಸುವುದಕ್ಕೆ ಅವಕಾಶವಿದೆ. ಇನ್ನು ಫ್ರಿಜ್ ಟಿಫಿನ್ ಫ್ರೆಶ್, ಪ್ರೊ-ಮ್ಯಾರಿನೇಟ್, ಇನ್‌ಸ್ಟಾ ಫ್ರೆಶ್ ಮತ್ತು ಪ್ರೊ ಚಿಲ್ ಎನ್ನುವ ನಾಲ್ಕು ವಿಭಿನ್ನ ಕೂಲಿಂಗ್ ಮೋಡ್‌ಗಳನ್ನು ನೀಡುತ್ತದೆ.

ಇನ್ನು ಪ್ಯಾನಾಸೋನಿಕ್ ರೆಫ್ರಿಜರೇಟರ್ ಯೂನಿಟ್‌ ಮೇಲೆ 3-ವರ್ಷದ ವಾರಂಟಿ ಮತ್ತು ಕಂಪ್ರೆಸರ್‌ನಲ್ಲಿ 10-ವರ್ಷದ ವಾರಂಟಿಯನ್ನು ನೀಡುತ್ತಿದೆ. ಸದ್ಯ ಪ್ಯಾನ್ಸೋನಿಕ್ ಪ್ರೈಮ್ ಕನ್ವರ್ಟಿಬಲ್ ರೆಫ್ರಿಜರೇಟರ್ ಡೈಮಂಡ್ ಬ್ಲ್ಯಾಕ್ ಕಲರ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ. ಇದರ ಬ್ಯಾಕ್ ಪ್ಯಾನೆಲ್ ಅನ್ನು ಬಳಸುವಾಗ ಫ್ರಿಜ್ ಬಾಗಿಲುಗಳು ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಪ್ರೀಮಿಯಂ ಮೆಟಾಲಿಕ್ ಫಿನಿಶ್ ನೀಡಲಿವೆ.

ಪ್ಯಾನಾಸೋನಿಕ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ 260 ಲೀಟರ್ ಮಾಡೆಲ್‌ ಫೀಚರ್ಸ್‌ ಹೇಗಿದೆ?
ಪ್ಯಾನಾಸೋನಿಕ್‌ ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳನ್ನು ಮಾರುಕಟ್ಟೆಯ ಅಗತ್ಯತೆಗಳಿಗೆ ತಕ್ಕಂತೆ ಕಾಂಪ್ಯಾಕ್ಟ್ ಗಾತ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ರೆಫ್ರಿಜರೇಟರ್‌ಗಳು 260 ಲೀಟರ್‌ಗಳ ಸಾಮರ್ಥ್ಯವನ್ನು ಹೊಂದಿದ್ದು, ಏಕ-ಬಾಗಿಲಿನ ವಿನ್ಯಾಸವನ್ನು ಹೊಂದಿವೆ. ಇನ್ನು ಈ ರೆಫ್ರಿಜರೇಟರ್‌ನ ಎಲ್ಲಾ ಭಾಗಗಳಲ್ಲಿ ಗರಿಷ್ಠ ತಂಪಾಗಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸರೌಂಡ್ ಏರ್‌ಫ್ಲೋ ಕೂಲಿಂಗ್ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಇದಲ್ಲದೆ ಪ್ಯಾನಾಸೋನಿಕ್‌ನ ಫ್ರಾಸ್ಟ್-ಫ್ರೀ ಸರಣಿಯ ರೆಫ್ರಿಜರೇಟರ್‌ಗಳು ಘಟಕಕ್ಕೆ 1-ವರ್ಷದ ವಾರಂಟಿಯನ್ನು ಸಹ ನೀಡಲಾಗಿದೆ. ಇವು ಎಲೆಕ್ಟ್ರಿಕ್ ಗ್ರೇ, ಓಷನ್ ಬ್ಲೂ ಮತ್ತು ಫ್ಲೋರಲ್ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಪ್ಯಾನಾಸೋನಿಕ್ ಪ್ರೈಮ್ ಕನ್ವರ್ಟಿಬಲ್ ರೆಫ್ರಿಜರೇಟರ್‌ಗಳು: ಬೆಲೆ ಮತ್ತು ಲಭ್ಯತೆ
ಪ್ಯಾನಾಸೋನಿಕ್‌ ಕಂಪೆನಿ ಪರಿಚಯಿಸಿರುವ ಹೊಸ ಪ್ರೈಮ್ ಕನ್ವರ್ಟಿಬಲ್ ರೆಫ್ರಿಜರೇಟರ್‌ಗಳು ಎರಡು ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಇದರಲ್ಲಿ 357 ಲೀಟರ್ ಮಾದರಿಯ ಬೆಲೆ 55,490ರೂ.ಆಗಿದೆ. ಇದರ 401 ಲೀಟರ್ ಮಾದರಿಯ ಬೆಲೆ 63,490 ರೂ. ಆಗಿದೆ. ಈ ಎರಡೂ ರೆಫ್ರಿಜರೇಟರ್‌ಗಳನ್ನು ಪ್ಯಾನಾಸೋನಿಕ್ ಆನ್‌ಲೈನ್ ಸ್ಟೋರ್, ಅಮೆಜಾನ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು.
ಇನ್ನು ಪ್ಯಾನಾಸೋನಿಕ್‌ ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ ಸರಣಿಯು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ರೆಫ್ರಿಜರೇಟರ್ ಗಳು 260 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರ ಬೆಲೆ 23,490 ರೂ. ಆಗಿದೆ. ಈ ಬಜೆಟ್ ಸ್ನೇಹಿ ರೆಫ್ರಿಜರೇಟರ್‌ಗಳು ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಲು ಲಭ್ಯವಿದೆ.

ಇದಲ್ಲದೆ ಪ್ಯಾನಾಸೋನಿಕ್‌ ಕಂಪೆನಿಯು ಹೊಸ ರೆಫ್ರಿಜರೇಟರ್‌ಗಳನ್ನು ಖರೀದಿಸುವವರಿಗೆ ಎಕ್ಸ್‌ಚೇಂಜ್‌ ಆಫರ್‌ ಅನ್ನು ಸಹ ನೀಡುತ್ತಿದೆ. ಎಕ್ಸ್‌ಚೇಂಜ್‌ ಮಾಡುವ ಡಿವೈಸ್‌ನ ಗುಣಮಟ್ಟ ಹಾಗೂ ಅದರ ಮಾರುಕಟ್ಟೆಯ ಮೌಲ್ಯದ ಮೇಲೆ ನಿಮ್ಮ ಆಫರ್‌ ನಿರ್ಧಾರವಾಗಲಿದೆ.

Best Mobiles in India

English summary
Panasonic Brand Launches Made-in-India Convertible Refrigerators: Price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+