ಪ್ಯಾನಸೋನಿಕ್ ಎಲುಗಾ C ಡ್ಯುಯಲ್ ಕ್ಯಾಮೆರಾ ಹೊಂದಿರುವ ಬಜೆಟ್ ಬೆಲೆಯ ಫೋನ್..!

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿರುವ ಪ್ಯಾನಸೋನಿಕ್ ಕಂಪನಿಯೂ ಹೊಸದಾಗಿ ಬಿಜಿಲ್ ಲೈಸ್ ವಿನ್ಯಾಸದ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ಎಲುಗಾ C ಸದ್ಯ ತೈವಾನ್ ನಲ್ಲಿ ಬಿಡುಗಡೆಯಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.12,900 ಗಳಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ಯಾನಸೋನಿಕ್ ಎಲುಗಾ C ಡ್ಯುಯಲ್ ಕ್ಯಾಮೆರಾ ಹೊಂದಿರುವ ಬಜೆಟ್ ಬೆಲೆಯ ಫೋನ್..!

ಪ್ಯಾನಸೋನಿಕ್ ಎಲುಗಾ C ಸ್ಮಾರ್ಟ್ ಫೋನ್ ಎರಡು ಪ್ರಮುಖ ವಿಶೇಷತೆಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ಒಂದು ಬೆಜಿಲ್ ಲೈನ್ಸ್ ವಿನ್ಯಾಸ ಮತ್ತೊಂದು ಡ್ಯುಯಲ್ ಹಿಂಬದಿಯ ಕ್ಯಾಮೆರಾ. ಈ ಎರಡು ಆಯ್ಕೆಗಳು ಎಲುಗಾ C ಸ್ಮಾರ್ಟ್ ಫೋನ್ ಘನತೆಯನ್ನು ಹೆಚ್ಚಿಸಿದೆ ಎನ್ನಲಾಗಿದೆ.

ಈ ಸ್ಮಾರ್ಟ್ ಫೋನ್ ನಲ್ಲಿ 5.5 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು ಬೆಜಿಲ್ ಲೈಸ್ ಆಗಿದ್ದು, ಅತೀ ತೆಳಗೆ ಇದೆ ಎನ್ನಲಾಗಿದೆ. ಫುಲ್ ಸ್ಕ್ರಿನ್ ಡಿಸ್ ಪ್ಲೇ ಇದ್ದಾಗಿದ್ದು, 16:9 ಅನುಪಾತದಿಂದ ಕೂಡಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಬ್ಯಾಕಪ್ ಗಾಗಿ 3000mAh ಬ್ಯಾಟರಿಯನ್ನು ಸಹ ನೋಡಬಹುದಾಗಿದೆ.

ಪ್ಯಾನಸೋನಿಕ್ ಎಲುಗಾ C ಸ್ಮಾರ್ಟ್ ಫೋನಿನಲ್ಲಿ ವೇಗದ ಕಾರ್ಯಚರಣೆಗೆ 1.5GHz ಮಿಡಿಯಾ ಟೆಕ್ MT6750T ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ 256GB ವರೆಗೂ ಮೆಮೊರಿ ವಿಸ್ತರಿಕೊಳ್ಳಬಹುದಾಗಿದೆ.

ಅಮೇಜಾನ್ ನಲ್ಲಿ ಮಾತ್ರ ದೊರೆಯಲಿದೆ ಹಾನರ 7X : ಡಿಸೆಂಬರ್ 7 ರ 12:00 PM ಗೆ ಶುರುವಾಗಲಿದೆ ಸೇಲ್ಅಮೇಜಾನ್ ನಲ್ಲಿ ಮಾತ್ರ ದೊರೆಯಲಿದೆ ಹಾನರ 7X : ಡಿಸೆಂಬರ್ 7 ರ 12:00 PM ಗೆ ಶುರುವಾಗಲಿದೆ ಸೇಲ್

ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 13MP + 5MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗ ಹೋಮ್ ಬಟನ್ ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಅಲ್ಲದೇ 4G VoLTE ಸಪೋರ್ಟ್ ಮಾಡಲಿದದೆ, ಈ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ.

Best Mobiles in India

Read more about:
English summary
Panasonic Eluga C with a bezel-less display and dual rear cameras has been announced in Taiwan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X