ಪ್ಯಾನಸೋನಿಕ್ ಎಲುಗಾ ಸಿ ಡಿವೈಸ್ ನವೆಂಬರ್ 29 ಕ್ಕೆ ಜಗಜ್ಜಾಹೀರು
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ವಿಷಯದಲ್ಲಿ ಪ್ಯಾನಸೋನಿಕ್ ಹೆಚ್ಚಿನ ಆಸಕ್ತಿಯನ್ನು ಹೊಂದಿದಂತೆ ಕಾಣುತ್ತಿದೆ. ಈ ವರ್ಷ 15 ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಲಾಂಚ್ ಮಾಡಿದೆ ಎಂಬುದಾಗಿ ಹೇಳಿಕೊಂಡಿದೆ. ಇದಕ್ಕೆ ಸೇರ್ಪಡೆ ಎಂಬಂತೆ ಪ್ಯಾನಸೋನಿಕ್‌ನ ಎಲುಗಾ ಫೋನ್‌ಗಳು ಅರ್ಬೊ ಏಐ ಸಹಾಯಕದೊಂದಿಗೆ ಇಂಟಿಗ್ರೇಟೆಟ್ ಆಗಿ ಬಂದಿದೆ.

ಇನ್ನಿತರ ಬ್ರ್ಯಾಂಡ್‌ಗಳು 18:9 ಅನುಪಾತ ಡಿಸ್‌ಪ್ಲೇಗಳೊಂದಿಗೆ ಬಂದಿದ್ದು, ಅಂತಹ ಡಿವೈಸ್ ಅನ್ನು ಬ್ರ್ಯಾಂಡ್ ಘೋಷಿಸಬೇಕಾಗಿದೆ. ಫೋನ್ ರಾಡಾರ್ ತಿಳಿಸಿರುವ ವರದಿಯಂತೆ ತೈವಾನ್‌ನಲ್ಲಿ ಕಂಪನಿ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಸನ್ನಾಹದಲ್ಲಿದೆ.
ವರದಿಯಲ್ಲಿ ತಿಳಿಸಿರುವಂತೆ ಮುಂಬರಲಿರುವ ಸ್ಮಾರ್ಟ್‌ಫೋನ್ ಪ್ಯಾನಸೋನಿಕ್ ಎಲುಗಾ ಸಿ ಎಂಬ ಹೆಸರನ್ನು ಪಡೆದುಕೊಳ್ಳಲಿದೆಯಂತೆ. ಈಗ ಸದ್ಯಕ್ಕೆ ಫೋನ್ ಮೂರು ಸೈಡ್ ಉಳ್ಳ ಎಡ್ಜ್ ಡಿಸ್‌ಪ್ಲೇಯನ್ನು ಪಡೆದುಕೊಳ್ಳಲಿದ್ದು ಆದರೆ ಅನುಪಾತ 18:9 ಅಗಿದೆಯೇ ಎಂಬುದು ತಿಳಿದಿಲ್ಲ. ಇನ್ನು ಕಂಪನಿ ಬಿಡುಗಡೆ ಮಾಡಿರುವ ಚಿತ್ರದ ಆಧಾರದಲ್ಲಿ ನವೆಂಬರ್ 29 ರಂದು ಡಿವೈಸ್ ಜಗಜ್ಜಾಹೀರುಗೊಳ್ಳಲಿದೆ. ಇದರ ವಿನ್ಯಾಸ ನೋಡುತ್ತಿದ್ದಂತೆ ಶಾರ್ಪ್ ಅಕೋಸ್ ಡಿವೈಸ್‌ಗಳ ಮಾದರಿಯಲ್ಲಿದೆ.
ಎಲುಗಾ ಸಿ ಮೂರು ಭಾಗದ ಬೇಜಲ್ ಲೆಸ್ ಡಿಸ್‌ಪ್ಲೇಯನ್ನು ಹೊಂದಲಿದೆ. ಡಿಸ್‌ಪ್ಲೇ ಮತ್ತು ಫಿಸಿಕಲ್ ಹೋಮ್ ಬಟನ್ ಇದರ ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಕೆಳಭಾಗದಲ್ಲಿ ಸೆಲ್ಫಿ ಕ್ಯಾಮರಾ ಇದು ಶ್ಯೋಮಿ ಎಮ್ ಮಿಕ್ಸ್ 2 ನಲ್ಲಿ ಒಂದೇ ರೀತಿಯಾಗಿದೆ.
ಆಂಡ್ರಾಯ್ಡ್ 7 ನಾಗಟ್ ಇದರಲ್ಲಿ ಓಎಸ್ ಆಗಿರಬಹುದೆಂಬುದು ವರದಿಯ ಮಾಹಿತಿಯಾಗಿದ್ದು, ಇನ್ನಿತರ ಮಾಹಿತಿ ತಿಳಿದುಬಂದಿಲ್ಲ. ಇನ್ನು ನವೆಂಬರ್ 29 ರ ಬಿಡುಗಡೆಯಾದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
5000mAh ಬ್ಯಾಟರಿ ಉಳ್ಳ ರೂ 12,490 ರ ಆಫ್‌ಲೈನ್ ವಿಶೇಷ ಮಾಡೆಲ್‌ನೊಂದಿಗೆ ಪ್ಯಾನಸೋನಿಕ್ ಎಲುಗಾ ಎ4 ಲಾಂಚ್ ಅನ್ನು ಘೋಷಿಸಿತ್ತು. ಕೆಲವೇ ದಿನಗಳಲ್ಲಿ ಕಂಪನಿ ಎಲುಗಾ I5 ರೂ 6499 ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಫೋನ್ ಅನ್ನು ಘೋಷಿಸಿತ್ತು.


Click it and Unblock the Notifications








