Home
ಸುದ್ದಿಜಾಲ

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಸರಣಿ ಪರಿಚಯಿಸಿದ ಪ್ಯಾನಾಸೋನಿಕ್‌! ಫೀಚರ್ಸ್‌ ಅದ್ಬುತ!

ಪ್ಯಾನಾಸೋನಿಕ್‌ ಕಂಪೆನಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಬ್ರ್ಯಾಂಡ್‌ ಕ್ರಿಯೆಟ್‌ ಮಾಡಿಕೊಂಡಿದೆ. ತನ್ನ ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಗಮನಸೆಳೆದಿದೆ.ಸದ್ಯ ಇದೀಗ ಭಾರತದಲ್ಲಿ ಹೊಸ ಗೂಗಲ್‌ ಟಿವಿ ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 32, 43, 55, 65 ಮತ್ತು 75 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳನ್ನು ಒಳಗೊಂಡಿದೆ.

ಹೌದು, ಪ್ಯಾನಾಸೋನಿಕ್‌ ಕಂಪೆನಿ ಭಾರತದಲ್ಲಿ ಹೊಸ ಗೂಗಲ್‌ ಟಿವಿ ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಉತ್ತಮ ಆಫ್ಟಿಮೈಸ್ಡ್‌ ಡಿಸ್‌ಪ್ಲೇ, ಸೌಂಡ್‌, ಕನೆಕ್ಟಿವಿಟಿ ಮತ್ತು ಡಿಸೈನ್‌ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಸರಣಿ ಪರಿಚಯಿಸಿದ ಪ್ಯಾನಾಸೋನಿಕ್‌!

ಪ್ಯಾನಾಸೋನಿಕ್ ಗೂಗಲ್ ಟಿವಿಗಳ ವಿಶೇಷತೆ ಏನು?

ಪ್ಯಾನಾಸೋನಿಕ್ ಗೂಗಲ್ ಟಿವಿಗಳು ಬೆಜೆಲ್-ಲೆಸ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಈ ಹೊಸ ಸ್ಮಾರ್ಟ್‌ಟಿವಿಗಳು ಸ್ಲಿಮ್ ವಿನ್ಯಾಸವನ್ನು ಹೊಂದಿದ್ದು ಸೊಗಸಾಗಿ ಕಾಣಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 4K HDR ಸ್ಕ್ರೀನ್ ರೆಸಲ್ಯೂಶನ್‌ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಶ್ರೇಣಿಯು MX850, MX800, MX750, MX740, MX710, ಮತ್ತು MX700 ಅನ್ನು ಒಳಗೊಂಡಿದೆ. ಜೊತೆಗೆ ಮೈಕ್ರೋ ಡಿಮ್ಮಿಂಗ್, 4K ಕಲರ್ ಎಂಜಿನ್ ಅನ್ನು ಬೆಂಬಲಿಸಲಿದೆ.

ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ಆಡಿಯೊ ಟೆಕ್ನಾಲಜೀಸ್ ಆಡಿಯೊ ಬೂಸ್ಟರ್+ ನಿಂದ ಟ್ಯೂನ್ ಮಾಡಲಾದ 20W ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಆಗಿರುವುದರಿಂದ ಕ್ರೋಮಾಕಾಸ್ಟ್‌ ಅನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ ಅನ್ನು ಬೆಂಬಲಿಸಲಿದೆ. ಹಾಗೆಯೇ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ಟಿವಿಯಲ್ಲಿ ಗೂಗಲ್ ಪ್ಲೇ ಸ್ಟೋರ್‌ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು.

ಇನ್ನು ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ eARC ಬೆಂಬಲದೊಂದಿಗೆ HDMI ಪೋರ್ಟ್‌ಗಳನ್ನು ನೀಡಲಿದೆ. ಅಲ್ಲದೆ HDMI 2.1, USB 2.0 ಪೋರ್ಟ್‌ಗಳು, 3.5mm ಆಡಿಯೊ ಜಾಕ್, Wi-Fi ಮತ್ತು ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಜೊತೆಗೆ ಪ್ಯಾನಾಸೋನಿಕ ಈ ಸ್ಮಾರ್ಟ್‌ಟಿವಿಗಳಲ್ಲಿ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, ಯುಟ್ಯೂಬ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗಳನ್ನು ಪ್ರಿಲೋಡ್‌ ಮಾಡಲಾಗಿದೆ. ಇದರ ಸ್ಮಾರ್ಟ್‌ಟಿವಿ ರಿಮೋಟ್‌ನಲ್ಲಿ ಗೂಗಲ್‌ ಅಸಿಸ್ಟೆಂಟ್‌ ಬಟನ್‌ ಅನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಸರಣಿ ಪರಿಚಯಿಸಿದ ಪ್ಯಾನಾಸೋನಿಕ್‌!

ಪ್ಯಾನಾಸೋನಿಕ್ ಗೂಗಲ್ ಟಿವಿಗಳು ಬೆಲೆ ಮತ್ತು ಲಭ್ಯತೆ

ಪ್ಯಾನಾಸೋನಿಕ್ ತನ್ನ ಸ್ಮಾರ್ಟ್ ಟಿವಿ ಶ್ರೇಣಿಯಲ್ಲಿ 20 ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಟಿವಿಗಳ ಬೇಸ್‌ ಮಾಡೆಲ್‌ 32 ಇಂಚಿನ MS550 ರೂಪಾಂತರದ ಆಯ್ಕೆಗೆ 19,990ರೂ.ಗಳ ಮೂಲಕ ಪ್ರಾರಂಭವಾಗಲಿದೆ. ಟಾಪ್-ಎಂಡ್ ರೂಪಾಂತರದ ಆಯ್ಕೆಯು 3,19,990ರೂ. ಬೆಲೆಯಲ್ಲಿ ಬರಲಿದೆ.

ಇದಲ್ಲದೆ ಪ್ಯಾನಾಸೋನಿಕ್‌ ಕ್ಯಾಮೆರಾ ಮಾರುಕಟ್ಟೆಯಲ್ಲಿ ಟಾಪ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು ಇತ್ತೀಚಿಗೆ ಭಾರತದಲ್ಲಿ ಪ್ಯಾನಾಸೋನಿಕ್‌ ಕಂಪೆನಿ ಲುಮಿಕ್ಸ್‌ S5II ಸರಣಿಯಲ್ಲಿ ಲುಮಿಕ್ಸ್‌ S5II ಮತ್ತು ಲುಮಿಕ್ಸ್‌ S5IIX ಕ್ಯಾಮೆರಾಗಳನ್ನು ಪರಿಚಯಿಸಿದೆ. ಇದರಲ್ಲಿ ಲುಮಿಕ್ಸ್‌ S5II ಕ್ಯಾಮೆರಾ 24 ಮೆಗಾಪಿಕ್ಸೆಲ್‌ 35mm ಫುಲ್‌-ಫ್ರೇಮ್ CMOS ಸೆನ್ಸಾರ್‌ ಹೊಂದಿದೆ. ಇದು ಸ್ಟೆಪ್ಸ್‌ ಡಿಟೆಕ್ಷನ್‌ ಆಟೋ-ಫೋಕಸ್ ಸಿಸ್ಟಮ್ ಜೊತೆಗೆ ಹೈ-ಬಿಟ್ ರೇಟ್ ವೀಡಿಯೊ ರೆಕಾರ್ಡಿಂಗ್‌ಗಾಗಿ ಸುಮಾರು 2x ವೇಗದ ಸಿಗ್ನಲ್ ಪ್ರೊಸೆಸಿಂಗ್‌ನೊಂದಿಗೆ ಬರಲಿದೆ. ಇದಲ್ಲದೆ ಈ ಹೊಸ ಇಮೇಜಿಂಗ್ ಎಂಜಿನ್ ಅನ್ನು ಕ್ಯಾಮೆರಾದಲ್ಲಿ ತರಲು ಲೈಕಾದೊಂದಿಗೆ ಸಹಭಾಗಿತ್ವವನ್ನು ಕೂಡ ಹೊಂದಿದೆ.

Best Mobiles in India

English summary
Panasonic Google TVs have been officially launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+