ಪ್ಯಾನಾಸೋನಿಕ್‌ ಕಂಪೆನಿಯಿಂದ 4K 60P ವೃತ್ತಿಪರ ಕ್ಯಾಮ್‌ಕಾರ್ಡರ್‌ ಬಿಡುಗಡೆ!

|

ನಿಮಗೆಲ್ಲಾ ಗೊತ್ತಿರುವಂತೆ ಕ್ಯಾಮೆರಾ ಪ್ರಪಂಚ ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಮುಂದುವರೆದಂತೆ ಹಲವು ಹೊಸ ಮಾದರಿಯ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಬ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಕ್ಯಾಮೆರಾಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಪ್ಯಾನಾಸೋನಿಕ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಪ್ಯಾನಾಸೋನಿಕ್‌ ಕಂಪೆನಿ ಹೊಸ ಕ್ಯಾಮ್‌ ಕಾರ್ಡರ್‌ ಅನ್ನು ಬಿಡುಗಡೆ ಮಾಡಿದೆ.

ಜಪಾನಿನ

ಹೌದು, ಜಪಾನಿನ ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪೆನಿ ಪ್ಯಾನಾಸೋನಿಕ್ ತನ್ನ ಹೊಸ ಕ್ಯಾಮ್‌ಕಾರ್ಡರ್‌ ಅನ್ನು ಬಿಡುಗಡೆ ಮಾಡಿದೆ. ತನ್ನ ಸಿಎಕ್ಸ್ ಸರಣಿಯಲ್ಲಿ ಭಾರತದಲ್ಲಿ 4K 60P ವೃತ್ತಿಪರ ಕ್ಯಾಮ್‌ಕಾರ್ಡರ್ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಶ್ರೇಣಿಯು ಎರಡು ಕಾಂಪ್ಯಾಕ್ಟ್ ಕ್ಯಾಮ್‌ಕಾರ್ಡರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಎಜಿ-ಸಿಎಕ್ಸ್ 7 ಇಡಿ ಮತ್ತು ಎಜಿ-ಸಿಎಕ್ಸ್ 8 ಇಡಿ ಗಳು ಸೇರಿವೆ. ಹಾಗಾದ್ರೆ ಈ ಕ್ಯಾಮ್‌ಕಾರ್ಡ್‌ರ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಾಸೋನಿಕ್‌

ಸದ್ಯ ಪ್ಯಾನಾಸೋನಿಕ್‌ ಬಿಡುಗಡೆ ಮಾಡಿರುವ ಕ್ಯಾಮ್‌ಕಾರ್ಡರ್‌ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಆನ್‌ಲೈನ್‌ನಲ್ಲಿ ಹೆಚ್ಚು ಹೆಚ್ಚು ವಿಷಯವನ್ನು ಬಳಸುವುದರೊಂದಿಗೆ, ಲೈವ್ ಸ್ಟ್ರೀಮಿಂಗ್ ಸಾಮಾಜಿಕ ಸಂವಹನದ ಆದ್ಯತೆಯ ವಿಧಾನವನ್ನ ಹೊಂದಿದೆ. ಇನ್ನು "ಈ ಬೆಳೆಯುತ್ತಿರುವ ಟೆಕ್ನಾಲಜಿ ಆಧಾರಿತವಾಗಿ ಪ್ಯಾನಸೋನಿಕ್ ಸಿಎಕ್ಸ್ ಸರಣಿಯ ಮೂಲಕ ಲೈವ್ ಸ್ಟ್ರೀಮಿಂಗ್‌ನಂತಹ ಸುಧಾರಿತ ಫೀಚರ್ಸ್‌ಗಳನ್ನ ಒಳಗೊಂಡಿರುವ ಕ್ಯಾಮ್‌ಕಾರ್ಡ್‌ರಗಳನ್ನತ್ತ ಗಮನಹರಿಸಿದೆ. ಅಲ್ಲದೆ ನಿಷ್ಪಾಪ ಚಿತ್ರ ಮತ್ತು ಆಡಿಯೊ ರೆಕಾರ್ಡಿಂಗ್ ಗುಣಮಟ್ಟವನ್ನು ಹೊಂದಿರುವ ಬಳಕೆದಾರರನ್ನು ಸಬಲೀಕರಣಗೊಳಿಸಲು ನಾವು ಬಯಸಿದ್ದೇವೆ" ಎಂದು ಪ್ಯಾನಾಸೋನಿಕ್ ಇಂಡಿಯಾದ ಇಮೇಜಿಂಗ್ ಬಿಸಿನೆಸ್ ಗ್ರೂಪ್‌ನ ಮುಖ್ಯಸ್ಥ ಸಂದೀಪ್ ಸೆಹಗಲ್ ಮತ್ತು ಸಾರ್ಕ್ ಹೇಳಿದ್ದಾರೆ.

ಪ್ಯಾನಾಸೋನಿಕ್

ಇನ್ನು ಪ್ಯಾನಾಸೋನಿಕ್ ಸಿಎಕ್ಸ್ ಶ್ರೇಣಿಯು ಇಂಟರ್‌ ಬಿಲ್ಟ್‌ ವೈ-ಫೈ ಮಾಡ್ಯೂಲ್ ಅನ್ನು ಹೊಂದಿದ್ದು, ಬಳಕೆದಾರರು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇತರ ಚಾನೆಲ್‌ಗಳ ಮೂಲಕ ನೇರವಾಗಿ ಎಚ್‌ಡಿ ಗುಣಮಟ್ಟದ ಫೀಡ್‌ಗಳನ್ನು ನೇರ ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತನ್ನದೇ ಆದ ವೆಬ್‌ಸೈಟ್ ಮೂಲಕ ನೇರವಾಗಿ ಲೈವ್ ಸ್ಟ್ರೀಮ್ ಮಾಡಲು ಬಯಸಿದರೆ ಆರ್‌ಟಿಎಂಪಿ ಪ್ರೋಟೋಕಾಲ್ ಅನ್ನು ಬೆಂಬಲಿಸುವ ದೊಡ್ಡ ಶ್ರೇಣಿಯ ವೃತ್ತಿಪರ ಲೈವ್ ಸ್ಟ್ರೀಮಿಂಗ್ ಪರಿಹಾರಗಳೊಂದಿಗೆ ಹೊಂದಾಣಿಕೆ ಹೊಂದುತ್ತದೆ.

ಅಲ್ಲದೆ

ಅಲ್ಲದೆ ಹೊರಾಂಗಣದಲ್ಲಿ ಅಥವಾ ಮುಚ್ಚಿದ-ಬಾಗಿಲಿನ ಸೆಟಪ್‌ನಲ್ಲಿ ಚಿತ್ರೀಕರಣ ಮಾಡುವಾಗ ಹೈ-ಸ್ಪೆಕ್ ಆಪ್ಟಿಕಲ್ ಕಾರ್ಯಕ್ಷಮತೆಗಾಗಿ ವೈಡ್-ಆಂಗಲ್ 25 ಎಂಎಂ ಲೆನ್ಸ್ ಮತ್ತು 24 ಎಕ್ಸ್ ಜೂಮ್ ವೈಶಿಷ್ಟ್ಯವನ್ನು ಈ ಶ್ರೇಣಿ ಬೆಂಬಲಿಸುತ್ತದೆ. ಇದು ಫೇಸ್ ಡಿಟೆಕ್ಷನ್ ಎಎಫ್ ಅನ್ನು ಹೊಂದಿದ್ದು, ಇದು 4 ಕೆ ಮತ್ತು ಫುಲ್-ಎಚ್ಡಿ ಶೂಟಿಂಗ್ ಎರಡಕ್ಕೂ ಹೆಚ್ಚಿನ ವೇಗ, ನಿಖರವಾದ ಗಮನವನ್ನು ನೀಡುತ್ತದೆ. ಇನ್ನು ಕಂಪನಿಯ ಪ್ರಕಾರ, ಎನ್‌ಡಿ-ಫಿಲ್ಟರ್‌ಗಳು ಮತ್ತು ನಿಯಂತ್ರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ ಮತ್ತು ಹೆಚ್ಚುವರಿ ಬೆಳಕಿನ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಇದರ ಪರಿಣಾಮವಾಗಿ ವೀಡಿಯೊ ಗುಣಮಟ್ಟ ಹೆಚ್ಚಾಗುತ್ತದೆ. ಇನ್ನು ಎಜಿ-ಸಿಎಕ್ಸ್ 7 ಇಡಿ ಬೆಲೆ 1,39,990 ಮತ್ತು ಎಜಿ-ಸಿಎಕ್ಸ್ 8 ಇಡಿ 1,54,990 ರೂ.ಅಗಿದೆ.

Most Read Articles
Best Mobiles in India

English summary
Panasonic AG CX7 and AG CX8 professional camcorders feature built-in Wi-Fi that supports HD Live Streaming.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X