ಭಾರತದಲ್ಲಿ ಹೊಸ ಮಾದರಿಯ ಕ್ಯಾಮೆರಾ ಪರಿಚಯಿಸಿದ ಪ್ಯಾನಾಸೋನಿಕ್! ಹೇಗಿದೆ ಡಿಸೈನ್?
ಕ್ಯಾಮೆರಾ ಮಾರುಕಟ್ಟೆ ಇಂದು ಸಾಕಷ್ಟು ಅಪ್ಡೇಟ್ ಆಗಿದೆ. ನವೀನ ಮಾದರಿಯ ಕ್ಯಾಮೆರಾಗಳು ಇಂದು ಟೆಕ್ ವಲಯವನ್ನೇ ಬೆರಗಾಗುವಂತೆ ಮಾಡಿವೆ. ಅದರಲ್ಲೂ ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ವಿಶೇಷ ಮಾದರಿಯ ಕ್ಯಾಮೆರಾಗಳ ಮೂಲಕ ಸೌಂಡ್ ಮಾಡ್ತಿವೆ. ಇದರಲ್ಲಿ ಪ್ಯಾನಾಸೋನಿಕ್ ಕಂಪೆನಿ ಕೂಡ ಒಂದಾಗಿದೆ. ತನ್ನ ವಿಭಿನ್ನ ಶೈಲಿ ಹಾಗೂ ಸ್ಟೈಲಿಶ್ ಡಿಸೈನ್ ಕ್ಯಾಮೆರಾಗಳ ಮೂಲಕ ಎಲ್ಲರ ಗಮನಸೆಳೆದಿದೆ. ಸದ್ಯ ಇದೀಗ ಪ್ಯಾನಾಸೋನಿಕ್ ಕಂಪೆನಿ ಹೊಸ ಹೈಬ್ರಿಡ್ ಫುಲ್ ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಲುಮಿಕ್ಸ್ S5II ಸರಣಿಯನ್ನು ಪರಿಚಯಿಸಿದೆ.

ಹೌದು, ಪ್ಯಾನಾಸೋನಿಕ್ ಕಂಪೆನಿ ಹೊಸ ಹೈಬ್ರಿಡ್ ಫುಲ್-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಲುಮಿಕ್ಸ್ S5II ಸರಣಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಸರಣಿಯ ಕ್ಯಾಮೆರಾಗಳು ಹೈಬ್ರಿಡ್ ಆಟೋ-ಫೋಕಸ್ ಮತ್ತು ಇನ್‌ಬಿಲ್ಟ್ ಇಮೇಜ್ ಸ್ಟೆಬಿಲೈಸೇಶನ್ ಸಿಸ್ಟಮ್ ಹೊಂದಿದೆ. ಇದು ಹೆಚ್ಚಿನ ರೆಸಲ್ಯೂಶನ್ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲಿದೆ ಎಂದು ಹೇಳಿದೆ. ಹಾಗಾದ್ರೆ ಪ್ಯಾನಾಸೋನಿಕ್ ಪರಿಚಯಿಸಿರುವ ಹೊಸ ಕ್ಯಾಮೆರಾದ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಪ್ಯಾನಾಸೋನಿಕ್ ಕಂಪೆನಿ ಲುಮಿಕ್ಸ್ S5II ಸರಣಿಯಲ್ಲಿ ಲುಮಿಕ್ಸ್ S5II ಮತ್ತು ಲುಮಿಕ್ಸ್ S5IIX ಕ್ಯಾಮೆರಾಗಳನ್ನು ಪರಿಚಯಿಸಿದೆ. ಇದರಲ್ಲಿ ಲುಮಿಕ್ಸ್ S5II ಕ್ಯಾಮೆರಾ 24 ಮೆಗಾಪಿಕ್ಸೆಲ್ 35mm ಫುಲ್-ಫ್ರೇಮ್ CMOS ಸೆನ್ಸಾರ್ ಹೊಂದಿದೆ. ಇದು ಸ್ಟೆಪ್ಸ್ ಡಿಟೆಕ್ಷನ್ ಆಟೋ-ಫೋಕಸ್ ಸಿಸ್ಟಮ್ ಜೊತೆಗೆ ಹೈ-ಬಿಟ್ ರೇಟ್ ವೀಡಿಯೊ ರೆಕಾರ್ಡಿಂಗ್‌ಗಾಗಿ ಸುಮಾರು 2x ವೇಗದ ಸಿಗ್ನಲ್ ಪ್ರೊಸೆಸಿಂಗ್‌ನೊಂದಿಗೆ ಬರಲಿದೆ. ಇದಲ್ಲದೆ ಈ ಹೊಸ ಇಮೇಜಿಂಗ್ ಎಂಜಿನ್ ಅನ್ನು ಕ್ಯಾಮೆರಾದಲ್ಲಿ ತರಲು ಲೈಕಾದೊಂದಿಗೆ ಸಹಭಾಗಿತ್ವವನ್ನು ಕೂಡ ಹೊಂದಿದೆ.

ಇನ್ನು ಲುಮಿಕ್ಸ್ S5II ಮತ್ತು ಲುಮಿಕ್ಸ್ S5IIX ಕ್ಯಾಮೆರಾಗಳು 14+ ಸ್ಟಾಪ್ V-Log/V-Gamut ಕ್ಯಾಪ್ಚರ್ ಅನ್ನು ನೀಡಲಿದೆ. ಈ ಕ್ಯಾಮೆರಾಗಳು ರಿಯಲ್ ಟೈಂ LUT ನ ಹೆಚ್ಚುವರಿ ಕಾರ್ಯವನ್ನು ನೀಡಲಿದೆ. ಜೊತೆಗೆ ಮೆಮೊರಿ ಕಾರ್ಡ್‌ನಲ್ಲಿ ಸೇವ್ ಮಾಡಲಾದ LUT(.VLT/.cube) ಮೂಲಕ ಕ್ಯಾಮರಾದಲ್ಲಿನ ವೀಡಿಯೊಗಳು ಮತ್ತು ಫೋಟೋಗಳ ಮೇಲೆ ಕಲರ್ ರೇಂಜ್ ಅನ್ನು ಆಕ್ಟಿವ್ ಮಾಡಲಿದೆ. ಇದಲ್ಲದೆ ಈ ಕ್ಯಾಮೆರಾಗಳು ವ್ಯಾಪಕವಾದ ಶೂಟಿಂಗ್ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳಿಗಾಗಿ ಸೂಕ್ತವಾದ ವಿನ್ಯಾಸವನ್ನು ಪಡೆದಿದೆ.
ಇದಲ್ಲದೆ ಈ ಕ್ಯಾಮೆರಾಗಳು ವೃತ್ತಿಪರ ವೀಡಿಯೊಗ್ರಾಫರ್‌ಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಇದರಲ್ಲಿರುವ ನ್ಯೂ ಎಂಜಿನ್ ಹೆಚ್ಚಿನ ವೀಡಿಯೊ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ಇದರಿಂದ 4:2:0 10-ಬಿಟ್ 6K (17:9 ಅಥವಾ 3:2) / 5.9K (16:9), ಅನಿಯಮಿತ 4:2:2 10-ಬಿಟ್ C4K/4K ರೆಕಾರ್ಡಿಂಗ್ ಸಾಮರ್ಥ್ಯವನ್ನು ನೀಡಲಿದೆ. ಇದಲ್ಲದೆ ಈ ಕ್ಯಾಮೆರಾದಲ್ಲಿರುವ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಬಾಹ್ಯ ಮೈಕ್ರೊಫೋನ್ ಅನ್ನು ಬಳಸಿಕೊಂಡು 48kHz/24bit ಆಡಿಯೊವನ್ನು ಸಹ ಬೆಂಬಲಿಸಲಿದೆ.

ಇನ್ನು ಲುಮಿಕ್ಸ್ S5IIX ಕ್ಯಾಮೆರಾ ಆಲ್-ಇಂಟ್ರಾ, ಪ್ರೊರೆಸ್ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು ವೈರ್ಡ್/ವೈರ್‌ಲೆಸ್ IP ಸ್ಟ್ರೀಮಿಂಗ್ ಕಾರ್ಯ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಆಪಲ್‌ಪ್ರೊರೆಸ್ ರಾ ರೆಕಾರ್ಡಿಂಗ್ Atomos Ninja V+ ಮಾನಿಟರ್ ರೆಕಾರ್ಡರ್‌ಗೆ HDMI RAW ಔಟ್‌ಪುಟ್‌ನೀಡಲು ಅವಕಾಶ ನೀಡಲಿದೆ. ಅಟ್ಮೋಸ್ ನಿಂಜಾ V+ ಮಾನಿಟರ್ ರೆಕಾರ್ಡರ್‌ಗೆ ProRes RAW ಔಟ್‌ಪುಟ್ ಭವಿಷ್ಯದ ಫರ್ಮ್‌ವೇರ್ ಅಪ್‌ಡೇಟ್ ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಲುಮಿಕ್ಸ್ S5II ಫುಲ್ ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಬಾಡಿ ಬೆಲೆ 1,94,990 ರೂ. ಆಗಿದೆ. ಇನ್ನು ಲುಮಿಕ್ಸ್ 20-60mm F3.5-5.6 ಲೆನ್ಸ್ ಹೊಂದಿರುವ ಲುಮಿಕ್ಸ್ S5II ಬೆಲೆ 2,24,990ರೂ. ಆಗಿದೆ. ಈ ಕ್ಯಾಮೆರಾ ಭಾರತದಲ್ಲಿ ಲುಮಿಕ್ಸ್ Lounges, ಪ್ಯಾನಾಸೋನಿಕ್ ಲುಮಿಕ್ಸ್ 4K ವಲಯಗಳು ಮತ್ತು ಡೀಲರ್ ನೆಟ್‌ವರ್ಕ್‌ನಲ್ಲಿ 2,44,990 ರೂ. ಬೆಲೆಗೆ ಲಭ್ಯವಾಗಲಿದೆ.


Click it and Unblock the Notifications








