ಪ್ಯಾನಾಸೋನಿಕ್‌ ಲುಮಿಕ್ಸ್‌ BGH1 ಮಿರರ್‌ಲೆಸ್‌ ಕ್ಯಾಮೆರಾ ಬಿಡುಗಡೆ! ವಿಶೇಷತೆ ಏನು?

|

ಕ್ಯಾಮೆರಾ ಲೋಕದ ಜನಪ್ರಿಯ ಕಂಪೆನಿ ಪ್ಯಾನಾಸೋನಿಕ್‌ ತನ್ನ ಆಕರ್ಷಕ ಕ್ಯಾಮೆರಾಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಸದ್ಯ ಪ್ಯಾನಾಸೋನಿಕ್‌ ಕಂಪೆನಿ ತನ್ನ ಹೊಸ ಪ್ಯಾನಾಸೋನಿಕ್ ಲುಮಿಕ್ಸ್ BGH1 ಡಿಜಿಟಲ್ ಸಿಂಗಲ್ ಲೆನ್ಸ್ ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅಲ್ಲದೆ ನೆಟ್‌ಫ್ಲಿಕ್ಸ್ ಒರಿಜಿನಲ್ಸ್ ಚಿತ್ರೀಕರಣಕ್ಕಾಗಿ ನೆಟ್‌ಫ್ಲಿಕ್ಸ್ ಅನುಮೋದಿಸಿದ ಮೊದಲ ಮೈಕ್ರೋ ಫೋರ್ ಥರ್ಡ್ಸ್ ಕ್ಯಾಮೆರಾ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ಯಾನಾಸೋನಿಕ್‌

ಹೌದು, ಪ್ಯಾನಾಸೋನಿಕ್‌ ಸಂಸ್ಥೆ ತನ್ನ ಹೊಸ ಪ್ಯಾನಾಸೋನಿಕ್‌ ಲುಮಿಕ್ಸ್‌ BGH1 ಡಿಜಿಟಲ್‌ ಸಿಂಗಲ್‌ ಲೆನ್ಸ್‌ ಮಿರರ್‌ಲೆಸ್‌ ಕ್ಯಾಮೆರಾವನ್ನು ಭಾರತದಲ್ಲಿ ಪರಿಚಯಿಸಿದೆ. ಇದು 10.2 ಮೆಗಾಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಲೈವ್ MoS ಇಮೇಜ್ ಸೆನ್ಸಾರ್ ಅನ್ನು ಬಳಸುತ್ತದೆ. ಇನ್ನು ಈ ಕ್ಯಾಮೆರಾ ಮೂಲಕ 59.96fpsನಲ್ಲಿ 4K ವರೆಗೆ ರೆಕಾರ್ಡಿಂಗ್ ಮತ್ತು 3,680x2,760 ಪಿಕ್ಸೆಲ್ ಸ್ಟಿಲ್ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾ ವಿಶೇಷತೆ ಏಣು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ಯಾನಾಸೋನಿಕ್

ಪ್ಯಾನಾಸೋನಿಕ್ ಲುಮಿಕ್ಸ್ BGH1 ಡಿಜಿಟಲ್‌ ಸಿಂಗಲ್‌ ಲೆನ್ಸ್‌ ಮಿರರ್‌ಲೆಸ್‌ ಕ್ಯಾಮೆರಾ 3,680x2,760 ಪಿಕ್ಸೆಲ್ ಸ್ಟಿಲ್‌ ಸಿತ್ರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು 10.2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೆ ಇಮೇಜ್ ಸಂಸ್ಕರಣೆಗಾಗಿ ಡ್ಯುಯಲ್ ಲೋಕಲ್‌ ಐಎಸ್ಒ ತಂತ್ರಜ್ಞಾನದೊಂದಿಗೆ ಲೈವ್ ಎಂಒಎಸ್ ಅನ್ನು ಬಳಸುತ್ತದೆ. ಇದು ಮೈಕ್ರೋ ಫೋರ್ ಥರ್ಡ್ಸ್ ಲೆನ್ಸ್ ಆರೋಹಣವನ್ನು ಬಳಸುತ್ತದೆ. ಅಲ್ಲದೆ ವಿ-ಲಾಗ್ ಅಕ್ಷಾಂಶದೊಂದಿಗೆ 13 ನಿಲ್ದಾಣಗಳ ವಿಶಾಲ ಕ್ರಿಯಾತ್ಮಕ ಶ್ರೇಣಿಯನ್ನು ಹೊಂದಿದೆ.

ಫೋಕಸ್

ಇನ್ನು ವೀಡಿಯೊವನ್ನು ರೆಕಾರ್ಡ್ ಮಾಡುವಾಗ, 59.95fpsನಲ್ಲಿ 4K ವರೆಗೆ H.265 / HEVC ಎನ್‌ಕೋಡಿಂಗ್‌ನೊಂದಿಗೆ ಬೆಂಬಲಿಸುತ್ತದೆ. ಇದು ಆಟೋ ಫೋಕಸ್ ಮತ್ತು ಮ್ಯಾನುಯಲ್ ಫೋಕಸ್ ಆಯ್ಕೆಗಳನ್ನು ನೀಡುತ್ತದೆ. ಅಲ್ಲದೆ ಎಎಫ್ ಮೋಡ್ ಆಟೋ ಡಿಟೆಕ್ಷನ್‌ ಟ್ರ್ಯಾಕಿಂಗ್ ಅನ್ನು ಒಳಗೊಂಡಿದ್ದು, ಇದು ISO 80 ರಿಂದ 2,04,800 ರವರೆಗೆ ಇರುತ್ತದೆ. ಇದನ್ನು 1/3 ಇವಿ ಹಂತಗಳಲ್ಲಿ ಬದಲಾಯಿಸಬಹುದಾಗಿದೆ. ಇನ್ನು ಪ್ಯಾನಸೋನಿಕ್ 4K 60fps ನಲ್ಲಿ ಸುಮಾರು 270 ನಿಮಿಷಗಳು ಮತ್ತು ಪೂರ್ಣ-HD 60fps ನಲ್ಲಿ ಸುಮಾರು 300 ನಿಮಿಷಗಳ ನಿರಂತರ ರೆಕಾರ್ಡಿಂಗ್ ಟೈಂ ಅನ್ನು ನೀಡಲಿದೆ.

ಪ್ಯಾನಸೋನಿಕ್

ಇದಲ್ಲದೆ ಪ್ಯಾನಸೋನಿಕ್ ಲುಮಿಕ್ಸ್ BGH 1 ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೂಪರ್‌ಸ್ಪೀಡ್ USB 3.1 ಜೆನ್ 1 ಟೈಪ್-ಸಿ, DC ಇನ್ 12V, HDMI ಪೋರ್ಟ್, ವೈ-ಫೈ, ಬ್ಲೂಟೂತ್ 4.2, ಲ್ಯಾನ್ ಪೋರ್ಟ್, 3.5mm ಜ್ಯಾಕ್ ಮತ್ತು ಎರಡು ಎಸ್‌ಡಿ ಕಾರ್ಡ್ ಸ್ಲಾಟ್‌ಗಳು ಸೇರಿವೆ. ಇನ್ನು ಈ ಪ್ಯಾನಾಸೋನಿಕ್ ಲುಮಿಕ್ಸ್ BGH1 (Body only) ಬೆಲೆ 1,94,990ರೂ.ಆಗಿದೆ. ಇದು ಪ್ಯಾನಸೋನಿಕ್ ಬ್ರಾಂಡ್ ಸ್ಟೋರ್‌ ನಲ್ಲಿ ಲಭ್ಯವಿದೆ.

Best Mobiles in India

English summary
Panasonic Lumix BGH1 Mirrorless Camera With 4K Recording Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X