ಪ್ಯಾನಾಸೋನಿಕ್ ಲುಮಿಕ್ಸ್ G9 ಕ್ಯಾಮೆರಾ ಬಿಡುಗಡೆ!

|

ಟೆಕ್ನಾಲಜಿ ಮುಂದುವರೆದಂತೆ ಟೆಕ್‌ ವಲಯವೂ ಸಾಕಷ್ಟು ಆಪ್‌ಡೆಟ್‌ ಆಗಿದ್ದು, ಹೊಸ ಮಾದರಿಯ ಸ್ಮಾರ್ಟ್ ಪ್ರಾಡಕ್ಟ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಲೇ ಇವೆ. ಅದರಲ್ಲೂ ಕ್ಯಾಮೆರಾ ಪ್ರಪಂಚವಂತೂ ಸಿಕ್ಕಾಪಟ್ಟೆ ಕಲರ್ಫುಲ್‌ ಆಗಿದೆ. ನವೀನ ತಂತ್ರಜ್ಞಾನವುಳ್ಳ ಹೊಸ ಮಾದರಿಯ ಕ್ಯಾಮೆರಾಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇವೆ. ಈಗಾಗಲೇ ಹಲವು ಕಂಪೆನಿಗಳು ಕ್ಯಾಮೆರಾಗಳನ್ನ ಪರಿಚಯಿಸಿದ್ದು, ಕ್ಯಾಮೆರಾ ಪ್ರಿಯರಿಂದ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಪ್ಯಾನಸೋನಿಕ್‌ ಕಂಪೆನಿ ಕೂಡ ಒಂದಾಗಿದೆ. ಕ್ಯಾಮೆರಾ ಮಾರುಕಟ್ಟೆಯಲ್ಲಿ ಬ್ರಾಂಡ್‌ ಆಗಿ ಗುರುತಿಸಿಕೊಂಡಿರುವ ಪ್ಯಾನಾಸೋನಿಕ್‌ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

ಪ್ಯಾನಸೋನಿಕ್‌

ಹೌದು, ಪ್ಯಾನಸೋನಿಕ್‌ ಇಂಡಿಯಾ ಕಂಪೆನಿ ಭಾರತದಲ್ಲಿ ತನ್ನ ಹೊಸ ಲುಮಿಕ್ಸ್ G9 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಇನ್ನು ಈ ಕ್ಯಾಮೆರಾ ಇನ್-ಬಾಡಿ ಸ್ಟೆಬಿಲೈಸೇಶನ್ (IBIS), 4K 60fps ರೆಕಾರ್ಡಿಂಗ್, ಡ್ಯುಯಲ್ ಕಾರ್ಡ್ ಸ್ಲಾಟ್‌ಗಳು ಮತ್ತು ವೇದರ್‌ ಸೀಲ್ಡ್‌ ಬಾಡಿ ಹೊಂದಿರುವ ಮೈಕ್ರೋ ನಾಲ್ಕನೇ ಎರಡು ಕ್ಯಾಮೆರಾಗಳನ್ನ ಒಳಗೊಂಡಿದೆ. ಇನ್ನು ಈ ಕ್ಯಾಮೆರಾ ವಿನ್ಯಾಸ ಹೇಗಿದೆ. ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಾಸೋನಿಕ್ ಲುಮಿಕ್ಸ್ G9

ಪ್ಯಾನಾಸೋನಿಕ್ ಲುಮಿಕ್ಸ್ G9

ಇನ್ನು ಪ್ಯಾನಾಸೋನಿಕ್‌ ಲುಮಿಕ್ಸ್ G9 ಕ್ಯಾಮೆರಾ 20.3 ಮೆಗಾಪಿಕ್ಸೆಲ್, ಮೈಕ್ರೋ ನಾಲ್ಕನೇ ಭಾಗದ ಸೆನ್ಸಾರ್‌ ಅನ್ನು ಹೊಂದಿದ್ದು, ಇದು ವೇಗದ ಆಟೋಫೋಕಸ್ ಸಿಸ್ಟಂ ಅನ್ನು ಒಳಗೊಂಡಿದೆ. ಜೊತೆಗೆ ಇದು 0.04 ಸೆಕೆಂಡುಗಳಲ್ಲಿ ಫೋಕಸ್ ಅನ್ನು ಲಾಕ್ ಮಾಡಲಿದೆ ಎಂದು ಕಂಪೆನಿ ಹೇಳಿಕೊಮಡಿದೆ. ಅಲ್ಲದೆ ಕಡಿಮೆ ಬೆಳಕಿನಲ್ಲಿ ಬಿಯರ್ ಹ್ಯಾಂಡ್ಹೆಲ್ಡ್ ಶೂಟಿಂಗ್‌ಗಾಗಿ ದೇಹದ 5-ಅಕ್ಷದ ಸ್ಥಿರೀಕರಣವನ್ನು ಸಹ ಹೊಂದಿದೆ. OLED ಎಲೆಕ್ಟ್ರಾನಿಕ್ ವ್ಯೂಫೈಂಡರ್ 3.68 ಮಿಲಿಯನ್ ಚುಕ್ಕೆಗಳ ರೆಸಲ್ಯೂಶನ್ ಹೊಂದಿದೆ, LCD ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ.

ಲುಮಿಕ್ಸ್ G9

ಇನ್ನು ಲುಮಿಕ್ಸ್ G9 ಒರಟಾದ ವಿನ್ಯಾಸವನ್ನು ಹೊಂದಿದ್ದು ಅದು ಧೂಳು, ಫ್ರೀಜ್ ಮತ್ತು ಸ್ಪ್ಲಾಶ್ ಪ್ರೂಫ್ ಆಗಿದೆ. ಅಲ್ಲದೆ ಈ ಕ್ಯಾಮೆರಾದಲ್ಲಿ ದ್ವಿತೀಯ ಎಲ್ಸಿಡಿ ಪ್ಯಾನೆಲ್ ಅನ್ನು ಸಹ ನೀಡಲಾಗಿದೆ. ಶೂಟಿಂಗ್ ಮೋಡ್‌ಗಳನ್ನು ಹೊಂದಿದೆ. GH5S‌ನಲ್ಲಿ ನೋಡಿದ್ದೇವೆ. ಇದು ಕ್ರಮವಾಗಿ 30fps ಅಥವಾ 60fps ವರೆಗೆ 6K ಅಥವಾ 4K ಬರ್ಸ್ಟ್ ಮೋಡ್‌ಗಳನ್ನು ಶೂಟ್ ಮಾಡಬಹುದಾಗಿದೆ. ಇದರಲ್ಲಿ ಮುಖ ಮತ್ತು ಕಣ್ಣಿನ ಟ್ರ್ಯಾಕಿಂಗ್ ಮತ್ತು ಇಂಟರ್‌ ಬಿಲ್ಟ್‌ ವೈ-ಫೈ ಮತ್ತು ಬ್ಲೂಟೂತ್ ಫೀಚರ್ಸ್‌ಗಳನ್ನ ಒಳಗೊಂಡಿದೆ.

ಪ್ಯಾನಸೋನಿಕ್

ಪ್ಯಾನಸೋನಿಕ್ ಲುಮಿಕ್ಸ್ G9 ಕ್ಯಾಮೆರಾ ಬಾಡಿ ಬೆಲೆ 98,990 ರೂ ಆಗಿದ್ದು, 12-60mm ಕಿಟ್ ಲೆನ್ಸ್‌ ಸೇರಿದಾಗ ಇದರ ಬೆಲೆ 1,39,990 ರೂ. ಆಗಿದೆ. ಸದ್ಯ ಈ ಕ್ಯಾಮೆರಾ ಎಲ್ಲಾ ಪ್ಯಾನಾಸೋನಿಕ್ ಬ್ರಾಂಡ್ ಅಂಗಡಿಗಳ ಮೂಲಕ ಮತ್ತು ಇತರ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ತಾಣಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Lumix G9 features a 20.3-megapixel, micro four-thirds sensor. It promises a fast autofocus system which is said to be able to lock focus in 0.04 seconds.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X