Subscribe to Gizbot

ಪ್ಯಾನಸೋನಿಕ್ ನಿಂದ ಟಿವಿ, ಕ್ಯಾಮೆರಾ ಸೇರಿದಂತೆ ವಿವಿಧ ಉತ್ಪನ್ನಗಳ ಬಿಡುಗಡೆ..!

Written By: Lekhaka

ಅಮೆರಿಕಾದಲ್ಲಿ ನಡೆಯುತ್ತಿರುವ CES 2018 ಕಾರ್ಯಕ್ರಮದಲ್ಲಿ ಹೊಸ ಹೊಸ ಟಿವಿಗಳು, ಸ್ಮಾರ್ಟ್ ಫೋನ್ ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ರದರ್ಶನ ಹಾಗೂ ಬಿಡುಗಡೆಯಾಗುತ್ತಿದ್ದು, ಇದೇ ಮಾದರಿಯಲ್ಲಿ ಪ್ಯಾನಸೋನಿಕ್ OLED ಟಿವಿಗಳು, ಡ್ಯುಯಲ್ ISO ಕ್ಯಾಮೆರಾಗಳು ಮತ್ತು UHD ಬ್ಲೂರೇ ಪ್ಲೇಯರ್ ಗಳನ್ನು ಲಾಂಚ್ ಮಾಡಿದೆ.

ಪ್ಯಾನಸೋನಿಕ್ ನಿಂದ ಟಿವಿ, ಕ್ಯಾಮೆರಾ ಸೇರಿದಂತೆ ವಿವಿಧ ಉತ್ಪನ್ನಗಳ ಬಿಡುಗಡೆ..!

ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಹವಾ ವನ್ನು ಕ್ರಿಯೇಟ್ ಮಾಡಲು ಮುಂದಾಗಿದೆ. ಸದ್ಯ ಬಿಡುಗಡೆಗೊಂಡಿರುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಶೀಘ್ರವೇ ಲಾಂಚ್ ಆಗಲಿದ್ದು, ಗ್ರಾಹಕರ ಕೈಗೆ ಸಿಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಯಾನಸೋನಿಕ್ FZ950 ಮತ್ತು FZ800 OLED ಟಿವಿಗಳು:

ಪ್ಯಾನಸೋನಿಕ್ FZ950 ಮತ್ತು FZ800 OLED ಟಿವಿಗಳು:

ಈ ವರ್ಷದಲ್ಲಿ ಹೊಸ OLED ಟಿವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ಯಾನಸೋನಿಕ್ FZ950 ಮತ್ತು FZ800 OLED ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು HDR ಪ್ಲಸ್ ಗುಣಮಟ್ಟವನ್ನು ಹೊಂದಿದೆ. ಉತ್ತಮ ಸೌಂಡ್ ಕ್ವಾಲಿಟಿಯನ್ನು ತನ್ನದಾಗಿಸಿಕೊಂಡಿದೆ. ಉತ್ತಮ ಪಿಚ್ಚರ್ ಕ್ವಾಲಿಟಿಯನ್ನು ಹೊಂದಿದೆ.

Honor 9 Lite with four cameras (KANNADA)
ಲುನುಮಿಕ್ಸ್ GH5S:

ಲುನುಮಿಕ್ಸ್ GH5S:

ಲುನುಮಿಕ್ಸ್ GH5S ಮಿರರ್ ಲೈಸ್ ಕ್ಯಾಮೆರಾವಾಗಿದ್ದು, ಇದೇ ಮೊದಲ ಬಾರಿಗೆ ಡ್ಯುಯಲ್ ISO ಅನ್ನು ಹೊಂದಿದ್ದು, ಉತ್ತಮ ಪೋಟೋಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈ ಕ್ಯಾಮೆರಾ ಕಾಣಿಸಿಕೊಳ್ಳಿಲಿದೆ ಎನ್ನಲಾಗಿದೆ. ಈ ಕ್ಯಾಮೆರಾದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.

4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!

ಬ್ಲೂ ರೇ ಪ್ಲೇಯರ್:

ಬ್ಲೂ ರೇ ಪ್ಲೇಯರ್:

ಪ್ಯಾನಸೋನಿಕ್ UP-UB420 ಮತ್ತು DP-UB820 ಬ್ಲೂ ರೇ ಪ್ಲೇಯರ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಇದು ಡಾಲ್ಬಿ ಸಪೋರ್ಟ್ ಮಾಡಲಿದೆ. ಇದು UHD ಗುಣಮಟ್ಟದ ವಿಡಿಯೋವನ್ನು ಪ್ಲೇ ಮಾಡಲಿದೆ ಎನ್ನಲಾಗಿದೆ.

ಕ್ಯಾಮ್ ಕಾಡರ್:

ಕ್ಯಾಮ್ ಕಾಡರ್:

ಪ್ಯಾನಸೋನಿಕ್ WXF1 ಮತ್ತು VX1 ಹೆಸರಿನ ಕ್ಯಾಮ್ ಕಾಡರ್ ಬಿಡುಗಡೆ ಮಾಡಿದೆ. ಇದು ಉತ್ತಮ ಗುಣಮಟ್ಟ ವಿಡಿಯೋಗಳನ್ನು ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ. ಇದು ಉತ್ತಮವಾದ 24x ಆಪ್ಟಿಕ್ ಜೂಮ್ ಮಾಡಲು ಶಕ್ತವಾಗಿದೆ. ಅಲ್ಲದೇ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The OLED TV market is shaping up this year. It is at the CES 2018 tech show that many companies have started coming up with such products. Panasonic has announced FZ950 and FZ800 OLED TVs, the Lumix GH5S camera, two new UHD Blu-ray players, a couple of camcorders, the smart home initiative called Home X.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot