Home
ಸುದ್ದಿಜಾಲ

ಪ್ಯಾನಸೋನಿಕ್ P101 ಸ್ಮಾರ್ಟ್ ಫೋನ್ ಲಾಂಚ್: ಇಲ್ಲಿದೇ ಸಂಪೂರ್ಣ ವಿವರ..!

By Lekhaka

ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಿದೆ. ಇದೇ ಮಾದರಿಯಲ್ಲಿ ಪ್ಯಾನಸೋನಿಕ್ ಸಹ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿರುವ ಪ್ಯಾನಸೋನಿಕ್ P101 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ರೂ.6999ಕ್ಕೆ ಮಾರಾಟವಾಗಲಿದೆ. ಸಂಗೀತಾ ಮೊಬೈಲ್ಸ್ ಮೂಲಕ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಪ್ಯಾನಸೋನಿಕ್ P101 ಸ್ಮಾರ್ಟ್ ಫೋನ್ ಲಾಂಚ್: ಇಲ್ಲಿದೇ ಸಂಪೂರ್ಣ ವಿವರ..!


ಪ್ಯಾನಸೋನಿಕ್ P101 ಸ್ಮಾರ್ಟ್ ಫೋನ್ ನಲ್ಲಿ 5.45 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್ ಪೋನಿನಲ್ಲಿ ಮೀಡಿಯಾ ಟೆಕ್ MT6737 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಬಳಕೆದಾರರಿಗೆ ವೇಗದ ಸೇವೆಯನ್ನು ನೀಡಲಿದೆ. ಜೊತೆಗೆ 2GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ನೋಡಬಹುದಾಗಿದ್ದು, 128GBವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಪ್ಯಾನಸೋನಿಕ್ P101 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದ್ದು, ಜೊತೆಯಲ್ಲಿ LED ಫ್ಲಾಷ್ ಲೈಟ್ ಇದೆ. ಜೊತೆಯಾಗಿ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಯಲ್ಲಿ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಈ ಸ್ಮಾರ್ಟ್ ಫೋನ್ ಶಕ್ತವಾಗಿದೆ.

4G VoLTE ಸಪೋರ್ಟ್ ಮಾಡುವ ಪ್ಯಾನಸೋನಿಕ್ P101 ಸ್ಮಾರ್ಟ್ ಫೋನ್, ವೈ-ಫೈ ಬ್ಲೂಟೂತ್ ಸೇರಿದಂತೆ ಎಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ 2500mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಉತ್ತಮ ಬ್ಯಾಕಪ್ ನೀಡಲಿದೆ. ಬಜೆಟ್ ಸ್ಮಾರ್ಟ್ ಫೋನಿನಲ್ಲಿ ಇರಬೇಕಾದ ಎಲ್ಲಾ ವಿಶೇಷತೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಲಾಂಚಿಂಗ್ ಪ್ರಯುಕ್ತ ಪ್ಯಾನಸೋನಿಕ್ P101 ಸ್ಮಾರ್ಟ್ ಫೋನಿನ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಕಾಣಬಹುದಾಗಿದೆ. ರೂ.2000 ಕ್ಯಾಷ್ ಬ್ಯಾಕ್ ಅನ್ನು ಐಡಿಯಾ ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ಯಾನಸೋನಿಕ್ P101 ಸ್ಮಾರ್ಟ್ ಫೋನಿನ ರೂ.4999ಕ್ಕೆ ಮಾರಾಟವಾಗಲಿದೆ. ಇದಲ್ಲದೇ 60ಜಿಬಿ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಇದ ಬೆಸ್ಟ್ ಆಫರ್ ಎನ್ನಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಐಡಿಯಾಕ್ಕೆ ಪ್ರತಿ ತಿಂಗಳು ರೂ.199 ರಿಚಾರ್ಜ್ ಮಾಡಿಕೊಳ್ಳಬೇಕಾಗಿದೆ.

Best Mobiles in India

English summary
Panasonic P101 is the latest budget smartphone priced at Rs. 6,999. The device comes with data and cashback offers from Idea Cellular. There is 60GB of additional data on recharging for Rs. 199 for six months and Rs. 2,000 cashback offer from the telco, which takes its effective price to Rs. 4,999 from Rs. 6,999..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+