ಬಜೆಟ್ ಬೆಲೆಯಲ್ಲಿ ಬೊಂಬಾಟ್ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ಪ್ಯಾನಾಸೋನಿಕ್
ಪ್ಯಾನಸೋನಿಕ್ ಭಾರತಿಯ ಮೊಬೈಲ್ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿದೆ. ಈಗಾಗಲೇ ಎಲುಗಾ A4 ಮತ್ತು ಎಲುಗಾ I5 ಸ್ಮಾರ್ಟ್ ಫೋನ್ ಲಾಂಚ್ ಮಾಡಿತ್ತು. ಮತ್ತೆ ಈಗ ಪ್ಯಾನಸೋನಿಕ್ P91 ಎಂಬ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್ ಫೊನ್ ಒಟ್ಟು ಮೂರು ಬಣ್ಣದಲ್ಲಿ ದೊರೆಯುತ್ತಿದ್ದು, ಬ್ಲೂ, ಬ್ಯಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಮಾರಾಟವಾಗಲಿದೆ.

ರೂ. 6,490 ಕ್ಕೆ ದೊರೆಯುತ್ತಿರುವ ಪ್ಯಾನಸೋನಿಕ್ P91 ಸ್ಮಾರ್ಟ್ ಫೋನ್ ಪ್ಯಾನಸೋನಿಕಾ ಔಟ್ ಲೆಟ್ ಗಳಲ್ಲಿ ದೊರೆಯಲಿದೆ. ಈ ಸ್ಮಾರ್ಟ್ ಫೋನ್ ಮಲ್ಟಿ ಮೋಡ್ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. ವಿವಿಧ ಮೋಡ್ ಗಳಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ. ಲೋ ಲೈಟ್ ಕಂಡಿಷನ್ ಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ. ಈ ಕ್ಯಾಮೆರಾ ಮೋಡ್ ಗಳು QR ಕೋಡ್ ಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ.
ಈ ಮೋಡ್ ಗಳು ಪೋಟ್ರೆಟ್ ಫೋಟೊಗಳನ್ನು ತೆಗೆಯಲು ಸಹಾಯಕವಾಗಲಿದ್ದು, ಪ್ರೋಫೇಷಲ್ ಮಾದರಿಯಲ್ಲಿ ಪೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಈ ಫೋನ್ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಬಿದ್ದರು ಒಡೆಯದೆ ಇರುವ ಮಾದರಿಯಲ್ಲಿ ಡಿಸೈನ್ ಮಾಡಲಾಗಿದೆ. ಈ ಫೋನ್ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ ಗಳನ್ನು ಹೊಂದಿದೆ ಎನ್ನಬಹುದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.
ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ LED ಫ್ಲಾಷ್ ಲೈಟ್ ಗಳನ್ನು ಸಹ ನೋಡಬಹುದಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಸೆಲ್ಫಿ ತೆಗೆಯುವ ಸಲುವಾಗಿ ನೀಡಲಾಗಿದೆ. ಈ ಫೋನ್ 5 ಇಂಚಿನ HD ಡಿಸ್ ಪ್ಲೇಯನ್ನು ಹೊಂದಿದ್ದು ವಿಡಿಯೋ ನೋಡಲು ಉತ್ತಮವಾಗಿದೆ.
ಈ ಫೋನ್ ನಲ್ಲಿ ವೇಗದ ಕಾರ್ಯಚರಣೆಗಾಗಿ 1GB RAM ಅಳವಡಿಸಲಾಗಿದ್ದು, ಜೊತೆಗೆ 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ SD ಕಾರ್ಡ್ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ.


Click it and Unblock the Notifications








