ಪ್ಯಾನಾಸೋನಿಕ್ ಟಫ್‌ಬುಕ್ S1 ಟ್ಯಾಬ್ಲೆಟ್‌ ಲಾಂಚ್‌! ಆಕರ್ಷಕ ಫೀಚರ್ಸ್‌!

|

ಟೆಕ್‌ವಲಯದಲ್ಲಿ ಪ್ಯಾನಸೋನಿಕ್‌ ಕಂಪೆನಿ ತನ್ನ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೂಲಕ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಪ್ರಾಡಕ್ಟ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಪ್ಯಾನಸೋನಿಕ್ ಟಫ್‌ಬುಕ್ ಎಸ್ 1 ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಲಾಜಿಸ್ಟಿಕ್ಸ್, ಸಾರಿಗೆ, ಚಿಲ್ಲರೆ ವ್ಯಾಪಾರ, ಕ್ಷೇತ್ರ ಸೇವೆ ಮತ್ತು ಇತರ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ.

ಪ್ಯಾನಸೋನಿಕ್

ಹೌದು, ಪ್ಯಾನಸೋನಿಕ್ ಕಂಪೆನಿ ಹೊಸ ಟಫ್‌ಬುಕ್ ಎಸ್ 1 ಟ್ಯಾಬ್ಲೆಟ್ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಐಚ್ಛಿಕ ಸಂಯೋಜಿತ ಬಾರ್‌ಕೋಡ್ ರೀಡರ್ ಮತ್ತು ಐಚ್ಛಿಕ ವಿಸ್ತೃತ ಬ್ಯಾಟರಿ ಅವಧಿಯಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಟಫ್‌ಬುಕ್ ಎಸ್ 1 ಡಿಸ್‌ಪ್ಲೇಯನ್ನು ಪ್ರೊಟೆಕ್ಷನ್‌ ಸುತ್ತಲೂ ದಪ್ಪ ಬೆಜೆಲ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಟ್ಯಾಬ್ಲೆಟ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಾಸೋನಿಕ್

ಪ್ಯಾನಾಸೋನಿಕ್ ಟಫ್‌ಬುಕ್ ಎಸ್ 1 ಟ್ಯಾಬ್ಲೆಟ್‌ 800x1,280 ಪಿಕ್ಸೆಲ್‌ ಸ್ಕ್ರೀನ್‌ ಸಾಮರ್ಥ್ಯದ 7 ಇಂಚಿನ WXGA ಡಿಸ್‌ಪ್ಲೇ ಹೊಂದಿದೆ. 10-ಪಾಯಿಂಟ್ ಕೆಪ್ಯಾಸಿಟಿವ್ ಮಲ್ಟಿ ಟಚ್, ಗ್ಲೋವ್ ಟಚ್ ಮೋಡ್‌ಗಳು, ಆಂಟಿ-ರಿಫ್ಲೆಕ್ಟಿವ್ (ಎಆರ್) ಸ್ಕ್ರೀನ್ ಟ್ರೀಟ್ಮೆಂಟ್ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 660 SoC ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 4GB RAM ಮತ್ತು 65GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಆನ್‌ಬೋರ್ಡ್ ಸಂಗ್ರಹಣೆಯನ್ನು ಎಸ್‌ಡಿ ಕಾರ್ಡ್ ಮೂಲಕ (2GB ವರೆಗೆ), ಎಸ್‌ಡಿಹೆಚ್‌ಸಿ (32GB ವರೆಗೆ) ಮತ್ತು ಎಸ್‌ಡಿಎಕ್ಸ್‌ಸಿ (64GB ವರೆಗೆ) ವಿಸ್ತರಿಸಬಹುದಾಗಿದೆ.

ಪ್ಯಾನಾಸೋನಿಕ್

ಪ್ಯಾನಾಸೋನಿಕ್ ಟಫ್‌ಬುಕ್ ಎಸ್ 1 ಟ್ಯಾಬ್ಲೆಟ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಟ್ಯಾಬ್ಲೆಟ್‌ 3,200mAh ಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿಸಲಾಗುತ್ತದೆ, ಇದು ಸುಮಾರು ಎಂಟು ಗಂಟೆಗಳ ಬ್ಯಾಟರಿ ಅವಧಿಯನ್ನು ಮೂರು ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ ತಲುಪಿಸುತ್ತದೆ. ಅದರ ವಾರ್ಮ್ ಸ್ವಾಪ್ ಕ್ರಿಯಾತ್ಮಕತೆಯೊಂದಿಗೆ, ಬ್ಯಾಟರಿಯನ್ನು 5,580mAh ಗೆ ವಿಸ್ತರಿಸಬಹುದು, ಇದು 4.5 ಗಂಟೆಗಳ ಚಾರ್ಜ್ ಸಮಯದೊಂದಿಗೆ ಸುಮಾರು 14 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಪ್ಯಾನಸೋನಿಕ್

ಇನ್ನು ಈ ಟ್ಯಾಬ್ಲೆಟ್‌ ಪ್ಯಾನಸೋನಿಕ್ ಟಫ್‌ಬುಕ್ ಎಸ್ 1 ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕ್ವಾಲ್ಕಾಮ್ ಡಬ್ಲ್ಯೂಸಿಎನ್ 3999 ವೈ-ಫೈ, 4 ಜಿ, ಬ್ಲೂಟೂತ್ ವಿ 5.1, ಜಿಪಿಎಸ್, ಎನ್‌ಎಫ್‌ಸಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಯನ್ನು ಬೆಂಬಲಿಸಲಿದೆ. ಡಾಕಿಂಗ್ ಕನೆಕ್ಟರ್ ಮತ್ತು ಐಚ್ಛಿಕ ಯುಎಸ್‌ಬಿ ಟೈಪ್-ಎ ಹೋಸ್ಟ್ ಪೋರ್ಟ್ ಸಹ ಇದೆ. ಸದ್ಯ ಪ್ಯಾನಾಸೋನಿಕ್ ಟಫ್‌ಬುಕ್‌ ಎಸ್ 1 ಬೆಲೆ ಏಕೈಕ 4GB RAM + 64GB ಮಾದರಿಗೆ $2,499 (ಸುಮಾರು 1.82 ಲಕ್ಷ ರೂ.) ಬೆಲೆ ಹೊಂದಿದೆ. ಇದು ಯುಎಸ್‌ನಲ್ಲಿ ಈಗಿನವರೆಗೆ ಮಾತ್ರ ಖರೀದಿಗೆ ಲಭ್ಯವಿದೆ. ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
Panasonic Toughbook S1 has a single 13-megapixel camera on the back and a 5-megapixel shooter at the front.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X