Subscribe to Gizbot

ಪ್ಯಾನಸೋನಿಕ್‌ನಿಂದ ಎಲುಗಾ ಸ್ಮಾರ್ಟ್‌ಫೋನ್ ಭಾರತಕ್ಕೆ

Posted By:

ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಶ್ರೇಣಿಯ ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದು, ಎಲುಗಾ ಶ್ರೇಣಿಯ ಫೋನ್‌ಗಳೂ ಕೂಡ 2012 ರಲ್ಲಿ ಯುರೋಪ್‌ನಲ್ಲಿ ಅರ್ಧಕ್ಕೆ ನಿಲ್ಲಿಸಿದ್ದ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಆದರೆ ಈ ಫೋನ್‌ಗಳು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ.

ಎಲಿಗೇನ್ಸ್ ಫಾರ್ ಎ ನ್ಯೂ ಜನರೇಶನ್ ಟ್ಯಾಗ್‌ನಡಿಯಲ್ಲಿ ಫೋನ್‌ಗಳ ಹೊಸ ಶ್ರೇಣಿಯನ್ನು ಕಂಪೆನಿ ಲಾಂಚ್ ಮಾಡುತ್ತಿದ್ದು ಫೋನ್ ಬಗೆಗಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿದೆ.

ಎಲುಗಾ ಫೋನ್ ಮಾಡಲಿದೆಯೇ ಮೋಡಿ?

ಪ್ಯಾನಸೋನಿಕ್ ಎಲುಗಾ ಶ್ರೇಣಿಯ ಫೋನ್‌ಗಳನ್ನು ಫೆಬ್ರವರಿ 2012 ರಲ್ಲಿ ಲಾಂಚ್ ಮಾಡಿದ್ದು, ಇದು 4.3 ಇಂಚಿನ ಕ್ಯುಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಡ್ಯುಯೆಲ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಆನ್ ಬೋರ್ಡ್ ಸಂಗ್ರಹಣೆ 4ಜಿಬಿಯಷ್ಟನ್ನು ನೀಡಲಿದ್ದು ಎಲ್ಇಡಿ ಫ್ಲ್ಯಾಶ್ ಇಲ್ಲದ 8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಜಿಂಜರ್‌ಬ್ರೆಡ್ ಓಎಸ್ ಚಾಲನೆಯಾಗುತ್ತಿದ್ದು ಬ್ಯಾಟರಿ ಸಾಮರ್ಥ್ಯ 1150 mah ಆಗಿದೆ. ಇದು ನೀರು ಮತ್ತು ಧೂಳಿನಿಂದ ನಿಮ್ಮ ಫೋನ್ ಅನ್ನು ರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊರಬಂದಿದ್ದು ಪ್ಯಾನಸೋನಿಕ್ ಮನೆಯಿಂದ ಬೃಹತ್ತಾಗಿ ಕೇಳಿಬರುವಂತಿದೆ.

ಪ್ಯಾನಸೋನಿಕ್‌ನ ಇತ್ತೀಚಿನ ದೊಡ್ಡ ಫೋನ್ ಪಿ81, ಭಾರತದಲ್ಲಿ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತು. ಓಕ್ಟಾ ಕೋರ್ ಆಧಾರಿತ ಸ್ಮಾರ್ಟ್ ಫೋನ್ ಭಾರತದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದು ಉತ್ತಮ ಮೌಲ್ಯವರ್ಧಿತ ಬೆಲೆಯೊಂದಿಗೆ ಗ್ರಾಹಕರಿಗೆ ತೃಪ್ತಿಯನ್ನು ಉಂಟುಮಾಡಿದೆ.

<center><iframe width="100%" height="450" src="//www.youtube.com/embed/AwnkYEgCvOw" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot