'ಪಾಸ್‌ವರ್ಡ್' ಇಡುವಾಗ ಈ ಎರಡು ಭಯಾನಕ ತಪ್ಪುಗಳನ್ನು ಎಂದೂ ಮಾಡದಿರಿ!!

|

ಇಂಟರ್‌ನೆಟ್ ಆಧಾರಿತ ಈ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್‌, ಶಾಪಿಂಗ್‌ನಿಂದ ಹಿಡಿದು ಎಲ್ಲದಕ್ಕೂ ಈಗ ಪಾಸ್‌ವರ್ಡ್‌ ಇದೆ. ಇದೆಲ್ಲದರಲ್ಲೂ ನಮ್ಮ ಡೇಟಾ ಸುರಕ್ಷಿತ ವಾಗಿರಿಸಿಕೊಳ್ಳಲು ನಮಗೆ ಪಾಸ್‌ವರ್ಡ್‌ ಬೇಕೇ ಬೇಕು. ಆದರೆ, ಈ ಪಾಸ್‌ವರ್ಡ್‌ ಕೂಡಾ ಸುರಕ್ಷಿತವೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಗೂಗಲ್ ಸೇರಿದಂತೆ, ಇಬೇ, ಲಿಂಕ್ಡ್ ಇನ್‌, ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಹಲವು ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಪಾಸ್‌ವರ್ಡ್‌ ಹ್ಯಾಕಿಂಗ್‌ಗೆ ಒಳಗಾಗಿವೆ. ಅಲ್ಲಿಂದ ನಮ್ಮ ಮಾಹಿತಿ ಕಳ್ಳತನವಾಗಿವೆ.

ಇದಕ್ಕೆ ಪ್ರಮುಖ ಕಾರಣವಾಗಿ ನಾವು ಬಳಸುವ ಪಾಸ್‌ವರ್ಡ್‌ನಲ್ಲಿ ಹಲವು ಸಮಸ್ಯೆಗಳಿವೆ. ಸಣ್ಣ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದು ಸುಲಭ ಎಂದು ಹಲವು ಸುಲಭ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಸಣ್ಣ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡುವುದು ಸುಲಭ ಎಂಬುದನ್ನು ಮರೆತಿರುತ್ತಾರೆ. ತಮಾಷೆಯ ಸಂಗತಿಯೆಂದರೆ ಬಹುತೇಕರ ಪಾಸ್‌ವರ್ಡ್‌ 1234 ಎಂದೋ 123456 ಎಂದೋ ಇರುತ್ತದೆ. ಇದು ಹ್ಯಾಕ್ ಮಾಡಲು ಅತ್ಯಂತ ಸುಲಭವಾಗಿದ್ದು, ಕ್ಷಣಾರ್ಧದಲ್ಲಿ ನಮ್ಮ ಪಾಸ್‌ವರ್ಡ್‌ ಹ್ಯಾಕರ್ ಕೈಗೆ ಸಿಕ್ಕಿರುತ್ತದೆ.

'ಪಾಸ್‌ವರ್ಡ್' ಇಡುವಾಗ ಈ ಎರಡು ಭಯಾನಕ ತಪ್ಪುಗಳನ್ನು ಎಂದೂ ಮಾಡದಿರಿ!!

ಇಂತಹ ಹಲವು ಸಮಸ್ಯೆಗಳನ್ನು ಇಂಟರ್‌ನೆಟ್ ಬಳಕೆದಾರ ಅನುಭವಿಸುತ್ತಿರುತ್ತಾನೆ. ತಂತ್ರಜ್ಞಾನ ಸುಧಾರಿಸಿದಷ್ಟೂ ಪಾಸ್‌ವರ್ಡ್‌ ಹ್ಯಾಕ್‌ ಮಾಡುವ ಸಾಧ್ಯತೆಯೂ ಹೆಚ್ಚುತ್ತಿದೆ. ಇದನ್ನು ತಡೆಯಲು ಪಾಸ್‌ವರ್ಡ್‌ನ ಅಕ್ಷರಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಹ್ಯಾಕ್ ಆಗುವುದು ಮಾತ್ರ ತಪ್ಪುತ್ತಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಹ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿಯಾಗಿರುವ ಈ ವೇಳೆಯಲ್ಲಿ ಪಾಸ್‌ವರ್ಡ್ ಎಂಬ ಜಂಜಾಟದಲ್ಲಿ ನಾವು ಬದುಕಿ ಉಳಿಯುವುದು ಹೇಗೆ ಎಂಬುದನ್ನು ತಿಳಿಯೋಣ.

ಪಾಸ್‌ವರ್ಡ್ ಹುಟ್ಟಿದ್ದು ಹೇಗೆ?

ಪಾಸ್‌ವರ್ಡ್ ಹುಟ್ಟಿದ್ದು ಹೇಗೆ?

ಫ‌ರ್ನಾಂಡೋ ಕೊರ್ಬಾಟೋ ಎಂಬ ವಿಜ್ಞಾನಿ ಸುಮಾರು 1960ರ ಹೊತ್ತಿಗೆ ಕೊರ್ಬಾಟೊ ಮಸಾ ಚುಸೆಟ್ಸ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಂಪಾಟಿಬಲ್ ಟೈಮ್‌ ಶೇರಿಂಗ್ ಸಿಸ್ಟಂ ಅನ್ನು ಆ ವಿವಿ ಅಭಿವೃದ್ಧಿಪಡಿಸಿತ್ತು. ಆಗ ಎಲ್ಲ ಸಂಶೋಧಕರೂ ತಮ್ಮ ಫೈಲ್‌ಗ‌ಳನ್ನು ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಇತರರ ಸಂಶೋಧನೆಯನ್ನು ಓದಲು ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಪಾಸ್‌ವರ್ಡ್‌ ಎಂಬ ಕಲ್ಪನೆಯನ್ನು ಹುಟ್ಟುಹಾಕಿದರು. ಈಗ ನಾವು ಬಳಸುತ್ತಿರುವ ಪಾಸ್‌ವರ್ಡ್‌ ಮೊದಲು ಹೀಗೆ ಹುಟ್ಟಿತ್ತು ಎಂದು ಹೇಳಲಾಗಿದೆ.

ಈಗ ಎಲ್ಲದಕ್ಕೂ ಪಾಸ್‌ವರ್ಡ್!

ಈಗ ಎಲ್ಲದಕ್ಕೂ ಪಾಸ್‌ವರ್ಡ್!

ಮೊದಲೇ ಹೇಳಿದಂತೆ ಇಂಟರ್‌ನೆಟ್ ಆಧಾರಿತ ಈ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್‌, ಶಾಪಿಂಗ್‌ನಿಂದ ಹಿಡಿದು ಎಲ್ಲದಕ್ಕೂ ಈಗ ಪಾಸ್‌ವರ್ಡ್‌ ಬೇಕೆಬೇಕು. ಆನ್‌ಲೈನ್ ಸೇವೆಗಳನ್ನು ಪಡೆಯುತ್ತಿರುವ ಈ ಸಮಯದಲ್ಲಿ ನಾವು ಅವುಗಳಿಂದ ಹೊರಗೆ ಉಳಿಯಲು ಸಾಧ್ಯವೇ ಇಲ್ಲ. ನಾಗರಿಕ ಪ್ರಪಂಚದಲ್ಲಿ ಓರ್ವ ಇದ್ದಾನೆ ಎಂದರೆ ಆತನ ಬಳಿ ಕನಿಷ್ಟಪಕ್ಷ 10 ರಿಂದ 15 ಪಾರ್ಸ್‌ವರ್ಡ್‌ಗಳು ಇರಲೇಬೇಕು. ನೀವಿದ್ದನ್ನು ಓದುತ್ತಿದ್ದೀರಾ ಎಂದಾದಲ್ಲಿ, ಖಂಡಿತವಾಗಿ ನಿಮ್ಮ ಬಳಿ 10 ಕ್ಕೂ ಹೆಚ್ಚು ಪಾರ್ಸ್‌ವರ್ಡ್‌ಗಳನ್ನು ನೆನಪಿರುತ್ತವೆ.

ಎಷ್ಟು ಪಾಸ್‌ವರ್ಡ್‌ಗಳನ್ನು ನೆನಪಿಟ್ಟು ಕೊಳ್ಳಲು ಸಾಧ್ಯ?

ಎಷ್ಟು ಪಾಸ್‌ವರ್ಡ್‌ಗಳನ್ನು ನೆನಪಿಟ್ಟು ಕೊಳ್ಳಲು ಸಾಧ್ಯ?

ನಿಮಗೆ ಗೊತ್ತಾ?, ಇತ್ತೀಚಿನ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದಾಗಿ ಪಾಸ್‌ವರ್ಡ್‌ಗಳನ್ನು ನೆನಪಿಟ್ಟು ಕೊಳ್ಳುವುದು ಸಹ ಇದೆ. ಮೊಬೈಲ್, ಕಂಪ್ಯೂಟರ್‌, ಬ್ಯಾಂಕಿಂಗ್, ಫೇಸ್‌ಬುಕ್‌ ಸೇರಿದಂತೆ ಹತ್ತಾರು ವೆಬ್‌ಸೈಟ್‌ಗಳ ಪಾಸ್‌ವರ್ಡ್ ಅನ್ನು ನಡನಪಿಡಬೇಕು. ಫಿಂಗರ್‌ಪ್ರಿಂಟ್‌, ಫೇಸ್‌ ಅನ್‌ಲಾಕ್‌ಗಳೆಲ್ಲ ಬಂದಿದ್ದರೂ ಸಹ ಅವೆಲ್ಲವೂ ಸಾಮಾನ್ಯ ಸುರಕ್ಷಿತವಾಗಿ ಮಾತ್ರ ಬಳಕೆಯಾಗುತ್ತಿವೆ. ಇನ್ನು ನೀವು ನಿಮ್ಮ ಬ್ಯಾಂಕ್‌ ಅಪ್ಲಿಕೇಶನ್‌ ತೆರೆಯಬೇಕೆಂದರೆ ಪಾಸ್‌ವರ್ಡ್‌ ಒತ್ತಲೇಬೇಕು. ಹಾಗಾಗಿ, ಹತ್ತಾರು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಕಷ್ಟ ಇದ್ದೇ ಇದೆ.

ಸುಲಭ ಪಾರ್ಸ್‌ವರ್ಡ್‌ ಎಂಬ ಮಾಯೆ!

ಸುಲಭ ಪಾರ್ಸ್‌ವರ್ಡ್‌ ಎಂಬ ಮಾಯೆ!

ನಾವು ಬಳಸುವ ಪಾಸ್‌ವರ್ಡ್‌ನಲ್ಲಿ ಹಲವು ಸಮಸ್ಯೆಗಳಿವೆ. ಸಣ್ಣ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದು ಸುಲಭ ಎಂದು ಹಲವು ಸುಲಭ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಸಣ್ಣ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡುವುದು ಸುಲಭ ಎಂಬುದನ್ನು ಮರೆತಿರುತ್ತಾರೆ. ಹಲವು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ ಎಂದು ಎಲ್ಲವಕ್ಕೂ ಒಂದೇ ಪಾಸ್‌ವರ್ಡ್‌ ಕೊಡುವ ಅತಿ ಬುದ್ಧಿವಂತಿಕೆಮಾಡುತ್ತೇವೆ. ಈ ಎರಡು ತಪ್ಪುಗಳಿಂದ ಎಷ್ಟೋ ಜನರು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ.

ಈ ಎರಡು ತಪ್ಪನ್ನು ಮಾತ್ರ ಮಾಡದಿರಿ!

ಈ ಎರಡು ತಪ್ಪನ್ನು ಮಾತ್ರ ಮಾಡದಿರಿ!

ಯಾವುದೇ ಕಾರಣಕ್ಕೂ ಸಣ್ಣ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದು ಸುಲಭ ಎಂದು ಹಲವು ಸುಲಭ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವುದು ಹಾಗೂ ಹಲವು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ ಎಂದು ಎಲ್ಲವಕ್ಕೂ ಒಂದೇ ಪಾಸ್‌ವರ್ಡ್‌ ಕೊಡುವ ಎರಡು ತಪ್ಪುಗಳನ್ನು ಮಾಡಲೇಬೇಡಿ. ಸುಲಭ ಪಾರ್ಸ್‌ವರ್ಡ್‌ಗಳನ್ನು ಕ್ರ್ಯಾಕ್ ಮಾಡಲು ಸುಲಭವಾದರೆ, ಎಲ್ಲವಕ್ಕೂ ಒಂದೇ ಪಾಸ್‌ವರ್ಡ್‌ ಕೊಡುವವರ ಒಂದು ಖಾತೆಯ ಪಾಸ್‌ವರ್ಡ್‌ ಸೋರಿಕೆಯಾದರೆ, ಬೇರೆ ವೆಬ್‌ಸೈಟ್‌ಗಳಲ್ಲೂ ಅದೇ ಪಾಸ್‌ವರ್ಡ್‌ ಬಳಸಿದರೆ ಕಥೆ ಮುಗೀತು.!

ಪಾಸ್‌ವರ್ಡ್‌ನಲ್ಲೊಂದು ಗಂಭೀರ ಸಮಸ್ಯೆಯಿದೆ.

ಪಾಸ್‌ವರ್ಡ್‌ನಲ್ಲೊಂದು ಗಂಭೀರ ಸಮಸ್ಯೆಯಿದೆ.

ಇದೆಲ್ಲಕ್ಕಿಂತ ಪಾಸ್‌ವರ್ಡ್‌ನಲ್ಲೊಂದು ಗಂಭೀರ ಸಮಸ್ಯೆಯಿದೆ. ತಂತ್ರಜ್ಞಾನ ಸುಧಾರಿಸಿದಷ್ಟೂ ಪಾಸ್‌ವರ್ಡ್‌ ಹ್ಯಾಕ್‌ ಮಾಡುವ ಸಾಧ್ಯತೆಯೂ ಹೆಚ್ಚುತ್ತಿದೆ. ಸಣ್ಣ ಪಾಸ್‌ವರ್ಡ್‌ಗಳನ್ನು ಹ್ಯಾಕ್ ಮಾಡುವುದು ಅತ್ಯಂತ ಸುಲಭವಾಗಿರುವುದರಿಂದ 8 ರಿಂದ 12 ಸಂಖ್ಯೆಗಳವರೆಗೆ ಪಾಸ್‌ವರ್ಡ್‌ ಇರಬೇಕು ಎಂದು ತಂತ್ರಜ್ಞರು ಹೇಳುತ್ತಾರೆ. ಹೀಗಾಗಿ ಪಾಸ್‌ವರ್ಡ್‌ ಕ್ರ್ಯಾಕ್‌ ಮಾಡುವ ಸಾಧ್ಯತೆ ಹೆಚ್ಚಾದಾಗ ಇನ್ನಷ್ಟು ಉದ್ದದ ಪಾಸ್‌ವರ್ಡ್‌ ಅನ್ನು ನಾವು ಹಾಕಿ ಕೊಳ್ಳಬೇಕಾಗುತ್ತದೆ. ಇದು ನೆನಪಿಡಲು ಸಾಧ್ಯವಾಗದಷ್ಟು ಇದ್ದರೂ ಸಹ ಇಟ್ಟುಕೊಳ್ಳಬೇಕಿರುವುದು ಈಗ ಗಂಭೀರ ಸಮಸ್ಯೆಯಾಗಿದೆ.

ಪಾರ್ಸ್‌ವರ್ಡ್ ಅನ್ನು ಹೀಗೆ ಇಡಿ!

ಪಾರ್ಸ್‌ವರ್ಡ್ ಅನ್ನು ಹೀಗೆ ಇಡಿ!

ಆನ್‌ಲೈನಿನಲ್ಲಿ ಹೊಸ ಹೊಸ ಸೇವೆಗಳ ಜೊತೆಗೆ ಹೊಸ ಹೊಸ ಪಾಸ್‌ವರ್ಡ್‌ಗಳು ಹುಟ್ಟಿಕೊಳ್ಳುತ್ತವೆ. ಇವು ನಮ್ಮ ನೆನಪಿನ ಶಕ್ತಿಯನ್ನು ಕಾಡುತ್ತವೆಯಾದರೂ ಇದಕ್ಕೆ ಸರಿಯಾದ ಪರಿಹಾರ ಎಂದರೆ ಅತಿ ಕ್ಲಿಷ್ಟ ಪಾಸ್‌ವರ್ಡ್‌ಗಳನ್ನು ಇಡುವುದು. ಹೌದು, ನಮ್ಮ ಪಾಸ್‌ವರ್ಡ್‌ಗಳು ಎಷ್ಟು ಕ್ಲಿಷ್ಟವಾಗಿರಬೇಕು ಎಂದರೆ, ನಾವು ನೀಡಿದ ಪಾರ್ಸ್‌ವರ್ಡ್‌ ಮತ್ತೆ ನಮಗೆ ನೆನಪಾಗಬಾರದು.! ಏಕೆಂದರೆ, ಹೀಗೆ ಮಾಡಿದರೂ ನಿಮಗೆ ಬೇಕಾದಾಗ ಮೊಬೈಲ್ ಒಟಿಪಿ ಮೂಲಕ ಬೇರೊಂದು ಪಾಸ್‌ವರ್ಡ್ ಪಡೆಯಲು ಸಾಧ್ಯ. ಒಂದು ವೇಳೆ ಒಂದು ಸೇವೆಯನ್ನು ನಿತ್ಯವೂ ಬಳಸುತ್ತಿದ್ದರೆ, ಕ್ಲಿಷ್ಟ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದು ನಿಮ್ಮ ಸಾಮರ್ಥ್ಯ.

Best Mobiles in India

English summary
If an attacker gets your password, he can access your account. ... and more of the sensitive, valuable things in our life are guarded through password-protected . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X