ಇತಿಹಾಸದಲ್ಲೇ ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್!..'ಇಮೇಲ್‌' ಚೆಕ್ ಮಾಡಿ ನೋಡಿ!!

|

ಈ ಆನ್‌ಲೈನ್ ಪ್ರಪಂಚ ಎಂದೂ ಸುರಕ್ಷಿತವಲ್ಲ ಎಂಬ ಈ ಮಾತಿಗೆ ಪುಷ್ಟಿ ಕೊಡುವಂತೆ ಬರೋಬ್ಬರಿ 77 ಕೋಟಿಗೂ ಹೆಚ್ಚು ಇಮೇಲ್ ವಿಳಾಸಗಳು ಸಾರ್ವಜನಿಕರಿಗೆ ಲೀಕ್ ಆಗಿವೆ.! ಸ್ಟ್ರಾಂಗ್ ಆಗಿರುವ ಪಾಸ್​ವರ್ಡ್ ಹಾಕಿದರೆ ಇಮೇಲ್ ಸುರಕ್ಷಿತವಾಗಿರುತ್ತದೆಂಬ ವಿಶ್ವಾಸದಿಂದ ಇರುತ್ತೇವೆ. ಆದರೆ, ವಾಸ್ತವದಲ್ಲಿ ಇಮೇಲ್ ವಿಳಾಸಗಳು ಸೇರಿದಂತೆ 2.1 ಕೋಟಿ ಪಾಸ್​ವರ್ಡ್​ಗಳೂ ಲೀಕ್ ಆಗಿರುವ ಶಾಕಿಂಗ್ ರಿಪೋರ್ಟ್ ಒಂದು ಇದೀಗ ವರದಿಯಾಗಿದೆ.

ಮೆಗಾ ಎಂಬ ಶೇರಿಂಗ್ ವೆಬ್​ಸೈಟ್​ನಲ್ಲಿ ಲೀಕ್ ಆಗಿರುವ ಈ ಎಲ್ಲಾ ಡೇಟಾಗಳು ಮೊದಲು ಪ್ರಕಟವಾಗಿದ್ದು, ಟ್ರಾಯ್ ಹಂಟ್ ಎಂಬ ಸೆಕ್ಯೂರಿಟಿ ರಿಸರ್ಚರ್ ಅವರ ಕಣ್ಣಿಗೆ ಬಿದ್ದಿದೆ. ಇದಾದ ಬಳಿಕ ಮೆಗಾ ವೆಬ್​ಸೈಟ್​ನಿಂದ ಈ ಡೇಟಾವನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಸ್ಟ್ರಾಂಗ್ ಆಗಿರುವ ಪಾಸ್​ವರ್ಡ್ ಹಾಕಿದರೆ ಇಮೇಲ್ ಸುರಕ್ಷಿತವಾಗಿರುತ್ತದೆಂಬ ವಿಶ್ವಾಸದಿಂದ ಇರುತ್ತೇವೆ. ಆದರೆ, ವಾಸ್ತವದಲ್ಲಿ ಇದ್ಯಾವುದೂ ಸುರಕ್ಷಿತವಲ್ಲ ಎಂಬುದು ಸಹ ಈಗ ಖಾತ್ರಿಯಾಗಿದೆ.

ಇತಿಹಾಸದಲ್ಲೇ ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್!..'ಇಮೇಲ್‌' ಚೆಕ್ ಮಾಡಿ ನೋಡಿ!!

ನಮ್ಮೆಲ್ಲಾ ರಹಸ್ಯ ದಾಖಲೆಗಳನ್ನು ಆನ್​ಲೈನ್​ನಲ್ಲೇ ಸಂಗ್ರಹಿಸುವ ಈ ಇಂಟರ್ನೆಟ್ ಯುಗದಲ್ಲಿ, ಅಂತರ್ಜಾಲ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್ ಎನ್ನಲಾಗಿದ್ದು, ಸೆಕ್ಯೂರಿಟಿ ರೀಸರ್ಚರ್ ಟ್ರಾಯ್ ಹಂಟ್ ಅವರು ತಮ್ಮ "Have I Been Pwned" ವೆಬ್​ಸೈಟ್​ನಲ್ಲಿ ಈ ಎಲ್ಲಾ ಡೇಟಾವನ್ನು ಫೀಡ್ ಮಾಡಿದ್ದಾರೆ. ಯಾರಿಗಾದರೂ ಅವರ ಇಮೇಲ್ ವಿಳಾಸ ಮತ್ತು ಪಾಸ್​ವರ್ಡ್ ಲೀಕ್ ಆಗಿದೆ ಎಂದನಿಸಿದರೆ ಈ ವೆಬ್​ಸೈಟ್​ನಲ್ಲಿ ಹೋಗಿ ಪರೀಕ್ಷಿಸಬಹುದು ಎಂದು ಹಂಟ್ ಹೇಳಿದ್ದಾರೆ.

ಬಹುತೇಕ ವೆಬ್​​ಸೈಟ್​ಗಳು ಲಾಗಿನ್ ಹಾಗೂ ಪಾಸ್​ವರ್ಡ್​ಗಳನ್ನು ಯಥಾವತ್ತಾಗಿ ಸಂಗ್ರಹಿಸುವುದಿಲ್ಲ. ಸಂಕೀರ್ಣ ನಂಬರ್​ಗಳಿರುವ ಹ್ಯಾಷ್ ರೂಪದಲ್ಲಿ ಪಾಸ್​ವರ್ಡ್ ಸಂಗ್ರಹವಾಗುತ್ತದೆ. ಈ ಹ್ಯಾಷ್​ಗಳು ನಮ್ಮ ಪಾಸ್​ವರ್ಡ್​ಗೆ ಕವಚದಂತೆ ಕಾರ್ಯನಿರ್ವಹಿಸುತ್ತವೆ. ಹ್ಯಾಕರ್​ಗಳು ಇದೇ ಹ್ಯಾಷ್​ಗಳನ್ನ ಕ್ರ್ಯಾಕ್ ಮಾಡಿ ಪಾಸ್​ವರ್ಡ್​ಗಳನ್ನ ಕ್ರಿಮಿನಲ್‌ಗಳು ಹೆಕ್ಕಿದ್ದಾರೆ ಎಂದು ಈ ಶಾಕಿಂಗ್ ರಿಪೋರ್ಟ್ ಬಗ್ಗೆ ಟೆಕ್ ತಜ್ಞರು ಹೇಳಿರುವುದು ವರದಿಯಾಗಿದೆ.

ಇತಿಹಾಸದಲ್ಲೇ ಅತಿ ದೊಡ್ಡ ಸೆಕ್ಯೂರಿಟಿ ಬ್ರೀಚ್!..'ಇಮೇಲ್‌' ಚೆಕ್ ಮಾಡಿ ನೋಡಿ!!

ಹ್ಯಾಕರ್​ಗಳು ಹೆಕ್ಕಿರುವ ಮೊದಲ ಪಟ್ಟಿಯಲ್ಲಿ 12 ಸಾವಿರ ಫೈಲ್​ಗಳಲ್ಲಿ ಇಮೇಲ್, ಪಾಸ್​ವರ್ಡ್​ಗಳಿರುವ 87 ಜಿಬಿಯಷ್ಟು ಗಾತ್ರದ ಡೇಟಾವನ್ನು ಸಂಗ್ರಹಿಸಲಾಗಿತ್ತು. ನೀವು ಹಂಟ್ ಅವರ ವೆಬ್​ಸೈಟ್​ಗೆ ಹೋಗಿ ಪರೀಕ್ಷಿಸಲು ಅನುಮಾನವಿದ್ದರೆ ಕೂಡಲೇ ನಿಮ್ಮ ಇಮೇಲ್​ಗಳ ಪಾಸ್ವರ್ಡ್​ಗಳನ್ನ ಬದಲಿಸುವುದು ಕ್ಷೇಮವಾಗಿದ್ದು, ಇಂಟರ್ನೆಟ್​ನಲ್ಲಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಇನ್ನಷ್ಟು ಬಲಯುತಗೊಳಿಸುವ ಅವಶ್ಯಕತೆಯತ್ತ ಗಮನ ಹರಿಸಲು ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ.

Best Mobiles in India

English summary
773 million email IDs, passwords Pwned in biggest data breach in history: How to check if your email exposed. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X