Home
ಸುದ್ದಿಜಾಲ

ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

By Gizbot Bureau

ಮೇ ತಿಂಗಳಲ್ಲಿ ಪತಂಜಲಿಯ ಕಿಂಬೋ ಆಪ್ ಬಿಡುಗಡೆಗೊಂಡಾಗ ಪ್ರತಿಯೊಬ್ಬರಲ್ಲೂ ಬಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಸ್ವದೇಶಿ ಮೆಸೇಜಿಂಗ್ ಆಪ್ ಬಿಡುಗಡೆಗೊಂಡಿದೆ ಎಂದು ಜನರು ಕೂಡ ಭಾರೀ ಆಸೆ ಇಟ್ಟುಕೊಂಡಿದ್ದರು. ವಾಟ್ಸ್ ಆಪ್ ಗೆ ಸ್ಪರ್ಧೆಯೊಡ್ಡುವ ಉದ್ದೇಶವನ್ನು ಪತಂಜಲಿಯಿಂದ ನಿರೀಕ್ಷಿಸಲಾಗಿತ್ತು. ಆದರೆ ಅದ್ಯಾಕೋ ಬಿಡುಗಡೆಗೊಂಡ 24 ತಾಸುಗಳ ಒಳಗಾಗಿ ಎಲ್ಲಾ ನಿರೀಕ್ಷೆ ಎಂಬ ಪಟಾಕಿ ಠುಸ್ ಆಯ್ತು.

ಹೌದು, ಕಿಂಬೋ ಬಿಡುಗಡೆಯಾದ ಕೇವಲ 24 ತಾಸುಗಳ ಒಳಗೆ ವಾಪಾಸ್ ತೆಗೆದುಕೊಳ್ಳಲಾಯ್ತು. ಅದಕ್ಕೆ ಭದ್ರತೆಯ ಕಾರಣವನ್ನು ನೀಡಲಾಗಿತ್ತು ಮತ್ತು ನಿರೀಕ್ಷೆಗಿಂತ ಅಧಿಕ ಜನರು ಡೌನ್ ಲೋಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಆ ಫ್ಲೋ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಮತ್ತು ಭದ್ರತಾ ದೃಷ್ಟಿಯಿಂದ ಇನ್ನಷ್ಟು ಬದಲಾವಣೆಗಳು ಆಗಬೇಕಾಗಿದೆ ಹಾಗಾಗಿ ವಾಪಾಸ್ ತೆಗೆದುಕೊಂಡಿದ್ದೇವೆ ಮತ್ತು ಕೆಲವೇ ದಿನದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮರು ಬಿಡುಗಡೆಯನ್ನು ಮಾಡಲಾಗುವುದು ಎಂದು ಪತಂಜಲಿ ಭರವಸೆ ನೀಡಿತ್ತು.

ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

ಅದೇ ಸಮಯಕ್ಕೆ ಸರಿಯಾಗಿ ಕಿಂಬೋ ಲೋಗೋ ಇರುವ ಫೇಕ್ ಆಪ್ ಗಳು ಕೂಡ ಫ್ಲೇಸ್ಟೋರ್ ನಲ್ಲಿ ರಾರಾಜಿಸುತ್ತಿದ್ದವು. ಈ ಎಲ್ಲಾ ಸುದ್ದಿಗಳನ್ನು ನಾವು ನಿಮಗೆ ಈಗಾಗಲೇ ತಿಳಿಸಿರುವಂತದ್ದೇ.ಆದರೆ ಹೊಸ ಸುದ್ದಿ ಏನೆಂದರೆ, ಕಿಂಬೋ ಆಪ್ ಹೊಸ ಹೆಸರಿನಲ್ಲಿ ಬಿಡುಗಡೆಗೊಂಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ “ ಬೋಲೋ ಮೆಸೆಂಜರ್” ಹೆಸರಿನಲ್ಲಿ ಲಭ್ಯವಿದೆ. ಹೌದು, ಇದನ್ನು ಕಿಂಬೋ ಆಪ್ ಮರುಬಿಡುಗಡೆಯಾದ ಅವತರಿಣಿಕೆ ಎಂದು ಹೇಳಲಾಗಿದೆ ಮತ್ತು ಕಿಂಬೋಗೆ ಬಳಸಲಾದ ಶಂಖದ ಚಿತ್ರವನ್ನೇ ಇದಕ್ಕೂ ಕೂಡ ಐಕಾನ್ ಆಗಿ ಬಳಸಲಾಗಿದೆ.ಇಮೇಲ್ ಐಡಿ ಮತ್ತು ಡೆವಲಪರ್ ವಿಳಾಸವನ್ನು ಅಧಿತಿ ಕಮಲ್ ಎಂದು ಗೂಗಲ್ ಪ್ಲೋ ಸ್ಟೋರ್ ನ ಲಿಸ್ಟ್ ನ ಈ ಆಪ್ ನಲ್ಲಿ ನಮೂದಿಸಲಾಗಿದೆ.

ಸ್ವದೇಶಿ ನಿರ್ಮಿತ ಬೋಲೋ ಮೆಸೆಂಜರ್

ಸ್ವದೇಶಿ ನಿರ್ಮಿತ ಬೋಲೋ ಮೆಸೆಂಜರ್

ಬೋಲೋ ಮೆಸೆಂಜರ್ ಹೆಚ್ಚು ಆಸಕ್ತಿ ಹುಟ್ಟಿಸಿರುವುದಕ್ಕೆ ಕಾರಣ ಅದು ಸ್ವದೇಶಿ ನಿರ್ಮಿತವಾಗಿರುವುದು ಎಂಬುದೇ ಆಗಿದೆ. ಈ ಆಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಜೊತೆಗೆ AES (Advanced Encryption Standard) ನ್ನು ನೀಡುತ್ತದೆ. ಪ್ರಮುಖವಾಗಿ ಇದರಲ್ಲಿ ಕಳುಹಿಸಲಾಗಿರುವ ಮೆಸೇಜ್ ಗಳನ್ನು ಆಟೋ-ಡಿಲೀಟ್ ಮಾಡುವುದಕ್ಕೆ ಅವಕಾಶವಿದೆ.

ಬೋಲೋ ಮೆಸೆಂಜರ್ ಕಿಂಬೋ ಅವತರಣಿಕೆ ಅಲ್ಲ!

ಬೋಲೋ ಮೆಸೆಂಜರ್ ಕಿಂಬೋ ಅವತರಣಿಕೆ ಅಲ್ಲ!

ಪ್ಲೇ ಸ್ಟೋರ್ ನಲ್ಲಿನ ಮೇಲಿನ ಎಲ್ಲಾ ಮಾಹಿತಿಗಳನ್ನು ನೋಡಿ ಬೋಲೋ ಮೆಸೆಂಜರ್ ನ್ನು ಇನ್ಸ್ಟಾಲ್ ಮಾಡಿಕೊಂಡು ಬಿಟ್ಟೀರಾ ಜೋಕೆ! ಪತಂದಲಿಯ ವಕ್ತಾರರೂ ಆಗಿರುವ ಎಸ್.ಕೆ ಅಗರ್ ವಾಲ್ ಅವರು ತಿಳಿಸಿರುವಂತೆ, ಬೋಲೋ ಮೆಸೆಂಜರ್ ಪತಂಜಲಿಯ ಕಿಂಬೋ ಆಪ್ ನ ಅಪ್ ಡೇಟೆಡ್ ವರ್ಷನ್ ಅಲ್ಲವೇ ಅಲ್ಲ. ಕಿಂಬೋ ಆಫ್ ಈಗಲೂ ಕೂಡ ಡೆವಲಪ್ ಮೆಂಟ್ ಹಂತದಲ್ಲಿದೆ ಮತ್ತು ಸದ್ಯದಲ್ಲೇ ಕಿಂಬೋ ಆಗಿಯೇ ಬಿಡುಗಡೆಗೊಳ್ಳಲಿದೆ.ಒಂದಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ , ಮೆಸೇಜಿಂಗ್ ಕ್ಷೇತ್ರಕ್ಕೆ ಕ್ರಾಂತಿಕಾರಿಯಾಗಿರುವ ಕೊಡುಗೆಯನ್ನು ಕಿಂಬೋ ನೀಡಲಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಎಸ್‌ಎಂಎಸ್‌ ಮೂಲಕ ನೊಟಿಫಿಕೇಶನ್

ಎಸ್‌ಎಂಎಸ್‌ ಮೂಲಕ ನೊಟಿಫಿಕೇಶನ್

ಅಷ್ಟೇ ಲ್ಲ, ಯಾವೆಲ್ಲ ಬಳಕೆದಾರರು ಈಗಾಗಲೇ ಕಿಂಬೋ ಪಡೆದಿದ್ದರೋ ಅವರಿಗೆ ಎಸ್ಎಂಎಸ್ ಮೂಲಕ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಗಳಲ್ಲಿ ಸದ್ಯದಲ್ಲೇ ಕಿಂಬೋ ಲಭ್ಯವಾಗುತ್ತದೆ ಎಂಬ ಮಾಹಿತಿಯನ್ನೂ ನೀಡಲಾಗಿದೆ. ಅಷ್ಟೇ ಅಲ್ಲ ಪತಂಜಲಿಯ ಹೆಸರಿನಲ್ಲಿ ಕೆಲವು ಕಂಪೆನಿಗಳು ತಮ್ಮ ಕಂಪೆನಿಯ ಫೇಕ್ ಆಪ್ ಗಳ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದೆ.

ಬೋಲೋ ಮೆಸೆಂಜರ್ ಭದ್ರತೆ ನ್ಯೂನ್ಯತೆಗಳು:

ಬೋಲೋ ಮೆಸೆಂಜರ್ ಭದ್ರತೆ ನ್ಯೂನ್ಯತೆಗಳು:

ಬೋಲೋ ಮೆಸೇಂಜರ್ ಆಪ್ ನ ಡೆವಲಪರ್ ಭದ್ರತಾ ಸಂಶೋಧಕರಾಗಿರುವ ಎಲಿಯಟ್ ಅಲ್ಡರ್ಸನ್ ಗೆ ಟ್ವೀಟರ್ ಮೂಲಕ ಸವಾಲಿನ ಪ್ರಶ್ನೆಗಳನ್ನು ಹಾಕಿದ್ದರು. ಆದರೆ ಕೆಲವೇ ಘಂಟೆಗಳಲ್ಲಿ ಭದ್ರತಾ ಸಂಶೋಧಕರು ಆಪ್ ನ ಪ್ರಮುಖ ದೋಷಗಳನ್ನು ಕಂಡುಹಿಡಿದರು. ಈ ಆಪ್ ನಲ್ಲಿ ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಯಾವುದೇ ವ್ಯಕ್ತಿಯ ಕಾಂಟ್ಯಾಕ್ಟ್ ನಂಬರ್ ಸೇವ್ ಇಲ್ಲದೇ ಇದ್ದರೂ ಕೂಡ ಆ ವ್ಯಕ್ತಿ ಆನ್ ಲೈನ್ ಇದ್ದಾರಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಹ್ಯಾಕರ್‌ಗಳಿಗೆ ಸುಲಭ ತುತ್ತು

ಹ್ಯಾಕರ್‌ಗಳಿಗೆ ಸುಲಭ ತುತ್ತು

ಅಷ್ಟೇ ಅಲ್ಲ, ಶೇರ್ ಮಾಡಲು ಇಟ್ಟಿರುವ ಪ್ರಮುಖ ಫೈಲ್ ಗಳಲ್ಲಿನ ನಿರ್ಣಾಯಕ ಮಾಹಿತಿಗಳ ಸಂಗ್ರಹವು ಸ್ಪಷ್ಟ ಟೆಕ್ಸ್ಟ್ ಗಳಾಗಿರುತ್ತದೆ. ಈ ಫೈಲ್ ಗಳು ಸರ್ವರ್ ನಲ್ಲಿ ವಿನಂತಿಗಳನ್ನು ಮಾಡಲು ಟೋಕನ್ ಪದ್ದತಿಯನ್ನು ಅನುಸರಿಸುತ್ತದೆ. ಈ ಫೈಲ್ ಗಳನ್ನು ಪ್ರವೇಶಿಸಲು ರೂಟ್ ನ ಅಗತ್ಯವಿಲ್ಲ. ಇಂತಹ ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ಬದಲಾವಣೆ ಮಾಡಲಾಗಿಲ್ಲವಂತೆ ಮತ್ತು ಇದು ಹ್ಯಾಕರ್ ಗಳಿಗೆ ಫೈಲ್ ಆಕ್ಸಿಸ್ ಮಾಡಿದಾಗ ಬ್ಯಾಕ್ ಅಪ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಸೂಕ್ಷ್ಮ ಟೆಕ್ನಿಕಲ್ ವಿಚಾರಗಳನ್ನು ಕೂಡ ಭದ್ರತಾ ಸಂಶೋಧಕರು ಕಂಡು ಹಿಡಿದಿದ್ದಾರೆ.

ಮತ್ತೊಂದು ಫೇಕ್ ಆಪ್‌ ಅಷ್ಟೇ..!

ಮತ್ತೊಂದು ಫೇಕ್ ಆಪ್‌ ಅಷ್ಟೇ..!

ಒಟ್ಟಾರೆ ಹೇಳಬೇಕೆಂದರೆ ಬೋಲೋ ಮೆಸೆಂಜರ್ ಕೂಡ ಕಿಂಬೋ ಸಿಂಬಲ್ ಬಳಸಿರುವ ಮತ್ತೊಂದು ಫೇಕ್ ಆಪ್ ಆಗಿದೆ ಅಷ್ಟೇ. ಯಾವುದಕ್ಕೂ ಡೌನ್ ಲೋಡ್ ಮಾಡುವ ನೀವುಗಳು ಜಾಗೃತರಾಗಿರಿ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇರುತ್ತಾರೆ.

Best Mobiles in India

English summary
Patanjali denies Kimbho app’s comeback as Bolo Messenger. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+