Home
ಸುದ್ದಿಜಾಲ

ಸ್ವದೇಶಿ ನಕಲು 'ಮೆಸೇಂಜಿಂಗ್ ಆಪ್' ಪ್ರಚಾರಕ್ಕೆ ಪಾಕಿಸ್ತಾನಿ ನಟಿ ಚಿತ್ರ!..ಸಂಕಷ್ಟದಲ್ಲಿ ಪತಂಜಲಿ!!

By Bhaskar N J

ದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ದೇಶೀಯ ಪತಂಜಲಿ ಒಡೆತನದ ಮೆಸೇಂಜಿಂಗ್ ಆಪ್ ಬಿಡುಗಡೆಯಾದ ತಕ್ಷಣವೇ ಸಂಕಷ್ಟಕ್ಕೆ ಸಿಲುಕಿದೆ. ವಾಟ್ಸ್ಆಪ್ ಅನ್ನು ಸಂಪೂರ್ಣವಾಗಿ ನಕಲು ಮಾಡಿರುವ ಜೊತೆಗೆ ಪ್ಲೇ ಸ್ಟೋರ್‌ನಲ್ಲಿ ಪಾಕಿಸ್ತಾನದ ಯುವತಿಯ ಪೋಟೊವನ್ನು ಆಪ್ ಪ್ರಚಾರಕ್ಕಾಗಿ ಬಳಸಿಕೊಂಡಿರುವುದು ಕಂಡುಬಂದಿದೆ. !

ಪ್ಲೇ ಸ್ಟೋರ್‌ನಲ್ಲಿ ಪಾಕಿಸ್ತಾನದ ಯುವತಿಯ ಪೋಟೊ ಜೊತೆಗೆ ಪತಂಜಲಿ ಒಡೆತನದ ಮೆಸೇಂಜಿಂಗ್ ಆಪ್ ಕಂಡು ಬಂದ ನಂತರ ಈ ವಿಷಯ ವೈರೆಲ್ ಆಗಿದ್ದು, ಪ್ಲೇಸ್ಟೋರ್‌ನಿಂದ ತನ್ನ ಮೆಸೇಂಜಿಂಗ್ ಆಪ್ ಅನ್ನು ಪತಂಜಲಿ ತೆಗೆದುಹಾಕಿದೆ, ಸ್ವದೇಶಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪತಂಜಲಿ ಬ್ರ್ಯಾಂಡ್ ಬಗ್ಗೆ ಈ ವಿಷಯ ಜಾಲತಾಣಗಳಲ್ಲಿ ಜೋಕ್ ಕಟ್ ಮಾಡಿದೆ.

ಸ್ವದೇಶಿ ನಕಲು ಪತಂಜಲಿ 'ಮೆಸೇಂಜಿಂಗ್ ಆಪ್' ಪ್ರಚಾರಕ್ಕೆ ಪಾಕಿಸ್ತಾನಿ ನಟಿ ಚಿತ್ರ!

ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದ ಪತಂಜಲಿ ಪಾಕಿಸ್ತಾನದ ಯುವತಿಯ ಪೋಟೊವನ್ನು ತನ್ನ ಮೆಸೇಂಜಿಂಗ್ ಆಪ್‌ನಲ್ಲಿ ಹಾಕಿಕೊಂಡಿರುವುದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಹಾಗಾದರೆ, ಪತಂಜಲಿ ಮೆಸೇಂಜಿಂಗ್ ಆಪ್ ಬಗ್ಗೆ ಸಿಕ್ಕಿರುವ ಮತ್ತಷ್ಟು ಮಾಹಿತಿಗಳಾವುವು ಎಂಬುದನ್ನು ಮುಂದೆ ತಿಳಿಯಿರಿ.

ಸಂಪೂರ್ಣ ವಾಟ್ಸ್ಆಪ್ ನಕಲು!!

ಸಂಪೂರ್ಣ ವಾಟ್ಸ್ಆಪ್ ನಕಲು!!

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಕಂಪೆನಿ 'ದೇಸಿ' ಕಿಂಬೋ(kimbho) ಮೆಸೇಂಜಿಂಗ್ ಅಪ್ಲಿಕೇಶನ್ ಸಂಪೂರ್ಣ ವಾಟ್ಸ್ಆಪ್ ನಕಲಾಗಿದೆ. ವಾಟ್ಸ್‌ಆಪ್ ಹೊಂದಿರುವ ಬಹುತೇಕ ಎಲ್ಲಾ ಫೀಚರ್‌ಗಳನ್ನು ಈ ಕಿಂಬೋ(kimbho) ಮೆಸೇಂಜಿಂಗ್ ಅಪ್ಲಿಕೇಶನ್‌ನಲ್ಲಿ ನಾವು ನೋಡಬಹುದಾಗಿದೆ.

ಪಾಕಿಸ್ತಾನಿ ನಟಿ ಚಿತ್ರ!

ಪಾಕಿಸ್ತಾನಿ ನಟಿ ಚಿತ್ರ!

ವಾಟ್ಸ್‌ಆಪ್ ವಿದೇಶದ್ದು ಎಂದು ಹೇಳುವ ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಕಂಪೆನಿ ಪಾಕಿಸ್ತಾನದ ನಟಿಯ ಚಿತ್ರವನ್ನು ಪ್ಲೇಸ್ಟೋರ್‌ನಲ್ಲಿ ತನ್ನ ಆಪ್ ಪ್ರಚಾರಕ್ಕೆ ಬಳಸಿಕೊಂಡಿದೆ.ಪಾಕಿಸ್ತಾನಿ ಮಾಡೆಲ್ ಮಾವ್ರಾಹೊಕೇನ್ ಅವರ ಚಿತ್ರವನ್ನು ಪತಂಜಲಿ ಬಳಸಿಕೊಂಡಿರುವ ಈ ವಿಷಯ ವೈರಲ್ ಆಗುತ್ತಿದ್ದಂತೆ ಪತಂಜಲಿ ಸಂಸ್ಥೆ ಆಪ್ ಅನ್ನು ಪ್ಲೇಸ್ಟೋರ್‌ನಿಂದ ತೆಗೆದಿರುವುದು ವರದಿಯಾಗಿದೆ.

ನಕಲು ಮಾಡಿ ಅವಾಜ್ ಹಾಕಿದರು!!

ನಕಲು ಮಾಡಿ ಅವಾಜ್ ಹಾಕಿದರು!!

ಪತಂಜಲಿ ಸಂಸ್ಥೆ ಕಿಂಬೋ ಮೆಸೇಂಜಿಂಗ್ ಆಪ್ ಅನ್ನು ಪ್ರಾರಂಭಿಸಿದ ನಂತರ ವಾಟ್ಸ್‌ಆಪ್‌ಗೆಇದು ನಮ್ಮದೇ ಸ್ವಂತ. ಈಗ ಭಾರತ ಮಾತನಾಡುತ್ತದೆ, ವಾಟ್ಸ್‌ಆಪ್‌ಗೆ ಒಂದು ಸ್ಪರ್ಧೆ ನೀಡಲಾಗುವುದುಎಂದು ಪತಂಜಲಿ ಆಯುರ್ವೇದ ಕಂಪೆನಿಯ ವಕ್ತಾರ ಎಸ್.ಕೆ. ಟಿಜಾರಾವಾಲಾ ಅವರು ಹೇಳಿದ್ದಾರೆ.

ಹೇಗಿದೆ ಪತಂಜಲಿ ಮೆಸೇಂಜಿಂಗ್ ಆಪ್!!

ಹೇಗಿದೆ ಪತಂಜಲಿ ಮೆಸೇಂಜಿಂಗ್ ಆಪ್!!

ಈ ಬುಧವಾರವಷ್ಟೆ ಬಿಡುಗಡೆಯಾಗಿರುವ ಪತಂಜಲಿ ಒಡೆತನದ ಕಿಂಬೋ ಮೆಸೇಂಜಿಂಗ್ ಆಪ್. "ಅಬ್ ಭಾರತ್ ಬೋಲೆಗಾ" ಟ್ಯಾಗ್‌ಲೈನ್ ಅಡಿಯಲ್ಲಿ ಬಿಡುಗಡೆಯಾಗಿದೆ. ಕಿಂಬೋ ಮೆಸೇಂಜಿಂಗ್ ಆಪ್ ವಾಟ್ಸ್‌ಆಪ್ ಹೊಂದಿರುವ ಲೋಗೊದ ತದ್ರೂಪಿಯಂತಿದ್ದರೂ ಲೋಗೊ ಮಧ್ಯದಲ್ಲಿ ಶಂಖವನ್ನು ಚಿತ್ರಿಸಲಾಗಿದೆ.!

ಕಿಂಬೋ ಹೇಗೆ ಕಾರ್ಯನಿರ್ವಹಿಸುತ್ತದೆ!!

ಕಿಂಬೋ ಹೇಗೆ ಕಾರ್ಯನಿರ್ವಹಿಸುತ್ತದೆ!!

ಕಿಂಬೋ ಮೆಸೇಂಜಿಂಗ್ ಆಪ್ ಸ್ವದೇಶದ್ದು ಎನ್ನುವುದನದನ್ನು ಬಿಟ್ಟರೆ, ಈ ಮೆಸೇಂಜಿಂಗ್ ಆಪ್‌ನ ಎಲ್ಲಾ ಕಾರ್ಯಗಳೂ ಸಹ ವಾಟ್ಸ್‌ಆಪ್ ಅನ್ನೇ ಹೋಲುತ್ತವೆ. ಉಚಿತ ಫೋನ್ ಮತ್ತು ವೀಡಿಯೋ ಕರೆಯೊಂದಿಗೆ ಖಾಸಗಿ ಮತ್ತು ಗುಂಪು ಚಾಟ್ ಫೀಚರ್ಸ್‌ಗಳನ್ನು ಕಿಂಬೋ ಮೆಸೇಂಜಿಂಗ್ ಆಪ್ ಒದಗಿಸುತ್ತದೆ ಎಂದು ಪತಂಜಲಿ ಸಂಸ್ಥೆ ತಿಳಿಸಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಆಪ್ ಏನೆಲ್ಲಾ ಫೀಚರ್ಸ್ ಹೊಂದಿದೆ ?

ಆಪ್ ಏನೆಲ್ಲಾ ಫೀಚರ್ಸ್ ಹೊಂದಿದೆ ?

ಪ್ಲೇಸ್ಟೋರ್‌ನಲ್ಲಿ ಉಲ್ಲೇಖಿಸಿರುವಂತೆ, ಕಿಂಬೋ ಅಪ್ಲಿಕೇಶನ್ ವೇಗವಾಗಿರುತ್ತದೆ. ನೈಜ-ಸಮಯದ ಸಂದೇಶವನ್ನು ಖಾತ್ರಿಪಡಿಸುವ ಮುಂಚಿತವಾಗಿ ಸಾಕೆಟ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಅಲ್ಲದೆ, ಕಳುಹಿಸಿದ ಪ್ರತಿ ಸಂದೇಶವೂ AES ನಿಂದ ಎನ್ಕ್ರಿಪ್ಟ್ ಆಗಿದೆ. ಸ್ವಯಂ ಚಾಟ್ಅಳಿಸುವಿಕೆ ಸಂದೇಶಗಳನ್ನು ಬೆಂಬಲಿಸುತ್ತದೆ.

Best Mobiles in India

English summary
WhatsApp, Kimbho, App, Patanjali, ಮೆಸೇಂಜಿಂಗ್, ಆಪ್, ಕಿಂಬೋ, ಪ್ಲೇ ಸ್ಟೋರ್‌, news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+