ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ಮತ್ತೆ ಬರುತ್ತಿದೆ ಪತಂಜಲಿ ಕಿಂಬೋ

By GizBot Bureau
|

ಕಳೆದೆರಡು ತಿಂಗಳ ಹಿಂದೆ ಹವಾ ಸೃಷ್ಟಿಸಿದ್ದ ಪತಂಜಲಿ ಕಿಂಬೋ ಆಪ್ ಮತ್ತೆ ಬಿಡುಗಡೆಗೊಳ್ಳುತ್ತಿದೆ. ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿ ಕೇವಲ 24 ಘಂಟೆಯೊಳಗೆ ವಾಪಾಸ್ ಪಡೆದಿದ್ದ ಕಂಪೆನಿ ಈಗ ಮತ್ತಷ್ಟು ವೈಶಿಷ್ಟ್ಯತೆಗಳೊಂದಿಗೆ ಜೊತೆಗೆ ಹಳೆಯ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಬಿಡುಗಡೆಗೆ ಸನ್ನದ್ಧವಾಗಿದೆ. ಇದೇ ಅಗಸ್ಟ್ 27 ರಂದು ಬಿಡುಗಡೆಗೊಳ್ಳುವ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ದೊರಕಿದೆ.

<strong>ಆಗಸ್ಟ್ 21ಕ್ಕೆ ಎಂಟ್ರಿ ನಿಡುತ್ತಿರುವ 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ವಿಶೇಷತೆಗಳು!! </strong>ಆಗಸ್ಟ್ 21ಕ್ಕೆ ಎಂಟ್ರಿ ನಿಡುತ್ತಿರುವ 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ವಿಶೇಷತೆಗಳು!!

ಯೋಗ ಗುರು ಬಾಬಾ ರಾಮ್ ದೇವ್ ಮಾಲೀಕತ್ವದ ಪತಂಜಲಿ ಸಂಸ್ಥೆಯ ಸ್ವದೇಶಿ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ಇದೇ ತಿಂಗಳ ಅಂದರೆ ಅಗಸ್ಟ್ 27 ರಂದು ಮತ್ತೆ ಬಿಡುಗಡೆಗೊಳ್ಳುವ ಬಗ್ಗೆ ಪ್ರಕಟಣೆ ಮಾಡಲಾಗಿದೆ. ಕಂಪೆನಿಯೇ ಹೇಳುವಂತೆ ಸದ್ಯ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಕಿಂಬೋ ಬಿಡುಗಡೆಗಡೆಗೆ ಸಿದ್ಧಗೊಂಡಿದೆಯಂತೆ.

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ಮತ್ತೆ ಬರುತ್ತಿದೆ ಪತಂಜಲಿ ಕಿಂಬೋ

72 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಬದಲ್ಲಿ ದೇಶದ ಜನತೆಗೆ ತಮ್ಮ ಅಧಿಕೃತ ಟ್ವೀಟರ್ ಅಕೌಂಟ್ ಮೂಲಕ ಶುಭಕೋರುವ ಸಂದರ್ಬದಲ್ಲಿ ಪತಂಜಲಿ ಸಂಸ್ಥೆಯ ಕೋಫೌಂಡರ್ ಆಗಿರುವ ಯೋಗಪೀತ್ ಹರಿದ್ವಾರ್ ಅವರು ಹೊಸ ಕಿಂಬೋ ಆಪ್ ಇನ್ನಷ್ಟು ವೈಶಿಷ್ಟ್ಯತೆಗಳೊಂದಿಗೆ ತಯಾರಾಗಿದ್ದು, ಹೊಸದಾಗಿ ಸೇರ್ಪಡೆಗೊಂಡಿರುವ ಎಲ್ಲಾ ಬದಲಾವಣೆಗಳೊಂದಿಗೆ ಅಗಸ್ಟ್ 27 ನೇ ತಾರೀಖು ಬಿಡುಗಡೆಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಕಿಂಬೋ ಆಪ್ ನ್ನು ಪತಂಜಲಿ ಸಂಸ್ಥೆ ಬಿಡುಗಡೆಗೊಳಿಸಿದ್ದು,ಮಾರ್ಕೆಟ್ ನಲ್ಲಿ ಕಿಂಬೋ ದೊಡ್ಡ ಸ್ಪರ್ಧೆಯನ್ನು ಒಡ್ಡಲಿದೆ ಎಂದು ಕೂಡ ಹೇಳಲಾಗಿತ್ತು. ನಂತರ ಹಲವು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಬಿಡುಗಡೆಗೊಂಡ ಕೇವಲ 24 ಘಂಟೆಯೊಳಗೆ ಅದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ನಿಂದ ವಾಪಾಸ್ ತೆಗೆದುಕೊಳ್ಳಲಾಗಿತ್ತು.

ನಂತರ ಹಲವು ಕಿಂಬೋ ಚಿಹ್ನೆಯನ್ನೇ ಒಳಗೊಂಡ ಹಲವು ಫೇಕ್ ಆಪ್ ಗಳು ಹುಟ್ಟಿಕೊಂಡಿದ್ದು ನಿಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ ಮತ್ತು ಆ ನಿಟ್ಟಿನಲ್ಲಿ ಕಿಂಬೋ ಕೂಡ ಅದ್ಯಾವುದೇ ಆಪ್ ಗಳು ತಮ್ಮ ಸಂಸ್ಥೆಗೆ ಸೇರಿರುವುದಲ್ಲ ಮತ್ತು ಅದನ್ನು ಮರುಳಾಗಿ ಯಾರೂ ಕೂಡ ಇನ್ಸ್ಟಾಲ್ ಮಾಡಬಾರದು ಎಂದು ಸೂಚನೆಯನ್ನೂ ನೀಡಿತ್ತು.

ಇದೀಗ ಪುನಃ ಕಿಂಬೋ ಮರುಬಿಡುಗಡೆಯಾಗುತ್ತಿದ್ದು ಸ್ವದೇಶಿ ಮೆಸೇಜಿಂಗ್ ಆಪ್ ಯಾವ ರೀತಿ ಹವಾ ಸೃಷ್ಟಿಸುತ್ತದೆ ಕಾದುನೋಡಬೇಕು.

ಟ್ರಾಫಿಕ್ ಪೊಲೀಸ್ ಕಿರಿಕಿರಿ ತಪ್ಪಿಸಲಿರುವ 'ಡಿಜಿಲಾಕರ್' ಆಪ್ ಬಳಕೆ ಹೇಗೆ ಗೊತ್ತಾ?

ಟ್ರಾಫಿಕ್ ಪೊಲೀಸ್ ಕಿರಿಕಿರಿ ತಪ್ಪಿಸಲಿರುವ 'ಡಿಜಿಲಾಕರ್' ಆಪ್ ಬಳಕೆ ಹೇಗೆ ಗೊತ್ತಾ?

ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳಂತೆ, ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ಪತ್ರಗಳ ಮೂಲ ದಾಖಲೆಯನ್ನೇ ಕೇಳುವಂತಿಲ್ಲ. ಬದಲಾಗಿ 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಅಧಿಕಾರಿಗಳು ಪರಿಗಣಿಸತಕ್ಕದ್ದು ಎಂದು ಸರ್ಕಾರ ತಿಳಿಸಿದ ನಂತರ 'ಡಿಜಿಲಾಕರ್' ಆಪ್ ಬಳಕೆ ಹೆಚ್ಚಾಗುತ್ತಿದೆ.
ಹೌದು, ಕೇಂದ್ರ ಸರಕಾರದ ಡಿಜಿಲಾಕರ್ ಅಥವಾ ಎಂಪರಿವಹನ್ ಆಪ್‌ಗಳ ಮೂಲಕ ದೃಢೀಕರಿಸಲಾದ 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಪರಿಗಣಿಸತಕ್ಕದ್ದು ಎಂದು ಟ್ರಾಫಿಕ್ ಪೊಲೀಸರಿಗೆ ಕೇಂದ್ರ ಸರ್ಕಾರ ಸೂಚಿಸಿದ ನಂತರ ಪೊಲೀಸರು ಸೇರಿದಂತೆ ಸಾರ್ವಜನಕರೂ ಕೂಡ 'ಡಿಜಿಲಾಕರ್' ಆಪ್ ಬಳಕೆ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಮೂಲ ದಾಖಲೆಗಳನ್ನು ಯಾವಾಗಲೂ ಕೈನಲ್ಲಿಯೇ ಹಿಡಿದುಕೊಳ್ಳದೆ ಮೊಬೈಲ್‌ನಲ್ಲಿಯೇ ಸ್ಟೋರ್ ಮಾಡಿಕೊಳ್ಳಲು ಇರುವ ಸರ್ಕಾರಿ ಆಪ್ ಇದಾಗಿದ್ದು, ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗಾದರೆ, ಏನಿದು ಡಿಜಿಲಾಕರ್? ಆಪ್‌ಗೆ ದಾಖಲೆಗಳನ್ನು ಹೇಗೆ ತುಂಬುವುದು? ಗ್ರಾಹಕರಿಗೆ ಹೇಗೆ ಸಹಾಯಕವಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಸಾರಿಗೆ ಇಲಾಖೆಯು ವಾಹನ ಸವಾರರ ಸಹಾಯಕ್ಕೆ ಲಾಂಚ್ ಮಾಡಿರುವ ಹೊಸ ಯೋಜನೆಯೇ ಡಿಜಿ ಲಾಕರ್. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಆಪ್ ಇದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಆಪ್ ಇದಾಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ಓರ್ಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಮೊಬೈಲ್‌ ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಪೊಲೀಸರು ಕೇಳಿದ ಸಂದರ್ಭದಲ್ಲಿ ಪ್ರದರ್ಶಿಸಬಹುದಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು

ರಿಜಿಸ್ಟರ್ ಮಾಡಿಕೊಳ್ಳಬೇಕು

ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಡಬೇಕಾಗಿದೆ. ನಂತರ ಆಪ್ ತೆರೆದು ಮೊಬೈಲ್‌ ಸಂಖ್ಯೆ ಬಳಸಿ ಲಾಗ್‌- ಇನ್‌ ಆಗಬೇಕು. ನಂತರ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ ಮಾಡಬಹುದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡುವುದು ಹೇಗೆ?

ದಾಖಲೆಗಳನ್ನು ಸ್ಟೋರ್ ಮಾಡುವುದು ಹೇಗೆ?

ಆಪ್‌ ಡೌನ್‌ಲೋಡ್ ಮಾಡಿದ ನಂತರ 12 ಅಂಕಿ ಆಧಾರ್ ನಂಬರ್ ಬಳಕೆ ಬಳಕೆ ಮಾಡಿ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ರಚಿಸಿ. ಬಳಿಕ ಇಶ್ಯೂಡ್ ಡಾಕ್ಯೂಮೆಂಟ್ಸ್ ಸರ್ಚ್ ಮಾಡಿ ರಿಜಿಸ್ಟ್ರೇಶನ್ ಲೈಸನ್ಸ್ ಅಥವಾ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಆಯ್ಕೆ ಮಾಡಿ. ಚಾಸೀ ನಂಬರ್, ರಿಜಿಸ್ಟ್ರೇಷನ್ ನಂಬರ್/ಲೈಸನ್ಸ್ ಇತರೆ ನಂಬರ್‌ಗಳನ್ನು ನಮೂದಿಸಿ. ಈ ಮೂಲಕ ಶಾಶ್ವತವಾಗಿ ಇಶ್ಯೂಡ್ ಡಾಕ್ಯೂಮೆಂಟ್ಸ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು.

ಡಿಜಿ ಲಾಕರ್ ಬಳಸುವುದು ಸುಲಭ

ಡಿಜಿ ಲಾಕರ್ ಬಳಸುವುದು ಸುಲಭ

ವಾಹನ ಸವಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Digilocker ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಇದೊಂದು ಉಚಿತ ಸೇವೆಯಾಗಿದೆ. ಸ್ಮಾರ್ಟ್‌ಫೋನ್‌ ಇರವವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂಧರ್ಭದಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಡಿಎಲ್‌ ಸಂಖ್ಯೆಯನ್ನು ತಿಳಿಸಿದರೂ ಸಾಕು. ಆದರೆ ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರಬೇಕು.

ಈ ಆಪ್ ಉಪಯೋಗಗಳೇನು..?

ಈ ಆಪ್ ಉಪಯೋಗಗಳೇನು..?

ಈ ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಓರ್ಜಿನಲ್ ದಾಖಲೆ ಕಳೆದುಹೋಗುವ ಭಯವಿಲ್ಲ, ಇದಲ್ಲದೇ ಇ-ಆಧಾರ್ ಡಿಜಿಲಾಕರ್​ನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆಯೂ ಸಾಕಷ್ಟು ಸಹಾಯವನ್ನು ಮಾಡುತ್ತದೆ.

Best Mobiles in India

English summary
Patanjali's WhatsApp-rival Kimbho set to make a comeback this month. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X