Home
ಸುದ್ದಿಜಾಲ

ಪತಂಜಲಿ ಕಿಂಬೋ ಲಾಂಚ್ ಆಗಲು ಇನ್ನೂ ಎರಡು ತಿಂಗಳು ಬೇಕಂತೆ..!

By Gizbot Bureau

ಭಾರೀ ನಿರೀಕ್ಷೆ ಹುಟ್ಟಿಸಿರುವ ಸ್ವದೇಶಿ ಮೇಸೇಜಿಂಗ್ ಆಪ್ ಕಿಂಬೋ ಸದ್ಯ ಸ್ಥಗಿತಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇನ್ನೊಂದು ತಿಂಗಳಲ್ಲಿ ಪುನಃ ಬರಲಿದ್ದೇವೆ ಎಂದು ಕೂಡ ಪತಂಜಲಿ ಸಂಸ್ಥೆ ಹೇಳಿಕೆ ನೀಡಿತ್ತು. ಆದರೆ ಈಗ ಯೋಗ ಗುರು ಬಾಬಾ ರಾಮ್ ದೇವ್ ಇನ್ನೂ ಎರಡು ತಿಂಗಳು ಕಿಂಬೋ ಬಿಡುಗಡೆಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಪತಂಜಲಿ ಕಿಂಬೋ ಲಾಂಚ್ ಆಗಲು ಇನ್ನೂ ಎರಡು ತಿಂಗಳು ಬೇಕಂತೆ..!

ಆದರೆ ಈ ಸ್ವದೇಶಿ ಮೆಸೇಜಿಂಗ್ ಆಪ್ ಸದ್ಯದಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳುತ್ತದೆ ಎಂಬುದನ್ನು ಹೇಳಿದ್ದಾರೆ. ಅಧಿಕೃತ ಪ್ರಕಟಣೆಯನ್ನು ಪತಂಜಲಿ ಆಯುರ್ವೇದ ಲಿಮಿಟೆಡ್ ಮೇ ನಲ್ಲಿ ಮಾಡಿತ್ತು ಮತ್ತು ಇದು ಸದ್ಯ ಮಾರುಕಟ್ಟೆಯಲ್ಲಿ ಉಳಿದ ಮೆಸೇಜಿಂಗ್ ಆಪ್ ಗಳಿಗೆ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗಿತ್ತು

“ ಇನ್ನು ಮುಂದೆ ಭಾರತ ಮಾತನಾಡಲಿದೆ! ಬಾಬಾ ರಾಮ್ ದೇವ್ ವಾಟ್ಸ್ ಆಪ್ ಗೆ ಸ್ಪರ್ಧೆ ಒಡ್ಡುವಮೆಸೇಜಿಂಗ್ ಆಪ್ ಕಿಂಬೋ ಮತ್ತು ಸಿಮ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿದ ನಂತರ ಹೇಳಿದ ಮಾತಿದು. ಗೂಗಲ್ ಪ್ಲೇ ಸ್ಟೋರ್ ನಿಂದ ನೇರವಾಗಿ ಕಿಂಬೋ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂಬುದನ್ನು ಸಂಸ್ಥೆಯ ವಕ್ತಾರ ಎಸ್ ಕೆ ತಿಜರವಾಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಪತಂಜಲಿ ಕಿಂಬೋ ಲಾಂಚ್ ಆಗಲು ಇನ್ನೂ ಎರಡು ತಿಂಗಳು ಬೇಕಂತೆ..!

ಆದರೆ, ಬಿಡುಗಡೆಗೊಂಡ ಎರಡೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಮತ್ತು IOS ನಿಂದ ಭದ್ರತೆ ಮತ್ತು ಗೌಪ್ಯತೆಯ ಕಾಳಜಿಯಿಂದಾಗಿ ತೆಗೆಯಲಾಗಿತ್ತು.ಎಲ್ಲಾ ರೀತಿಯ ತಾಂತ್ರಿಕ ಗ್ಲಿಚ್ ಗಳನ್ನು ನಿವಾರಣೆ ಮಾಡಿಕೊಂಡು ಸದ್ಯದಲ್ಲೇ ಆಪ್ ಪುನಃ ಬಿಡುಗಡೆಗೊಳ್ಳಲಿದೆ ಎಂಬುದನ್ನು ಸಂಸ್ಥೆ ತಿಳಿಸಿದ್ದು ಅದಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ಯೋಗಗುರು ತಿಳಿಸಿದ್ದಾರೆ.

ಹಾಗಾಗಿ ಅಲ್ಲಿವರೆಗೂ ಯಾವುದೇ ಕಿಂಬೋ ಫೇಕ್ ಆಪ್ ಗಳಿಗೆ ಮರುಳಾಗಿ ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಳ್ಳಬೇಡಿ..!

Best Mobiles in India

English summary
Patanjali's Whatsapp-rival Kimbho will take two more months, at least. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+