ಇನ್ಮುಂದೆ ಪೇಟಿಎಂ ಮೂಲಕವೇ ಇನ್ಸೂರೆನ್ಸ್ ಕಂತನ್ನು ಕಟ್ಟಬಹುದು!

|

ಯಾವುದಾದರು ಒಂದು ವಿಮೆ ಮಾಡಿಸುವುದಕ್ಕಿಂತ ಪ್ರತಿತಿಂಗಳು ಆ ಕಂಪೆನಿ ಕಚೇರಿಗೆ ತೆರಳಿ ಕಂತು ಕಟ್ಟುವುದು ಎಲ್ಲರಿಗೂ ಕಷ್ಟವಾಗಿತ್ತು. ಆದರೆ, ಇನ್ಮುಂದೆ ನಿಮಗೆ ಇಂತಹ ಸಮಸ್ಯೆ ಬರುವುದಿಲ್ಲ. ಏಕೆಂದರೆ, ಎಲ್‌ಐಸಿ ಸೇರಿದಂತೆ ದೇಶದಲ್ಲಿರುವ ಬಹುತೇಕ ಎಲ್ಲಾ ವಿಮಾ ಕಂಪೆನಿಗಳ ಕಂತುಗಳನ್ನು ಇನ್ಮುಂದೆ ನೀವು ಪೇಟಿಎಂ ಮೂಲಕ ಆನ್‌ಲೈನಿನಲ್ಲೇ ಪಾವತಿಸಬಹುದು.

ಹೌದು, ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಪೇಟಿಎಂ, ಇದಕ್ಕೆ ಸಂಬಂಧಿಸಿದಂತೆ ಭಾರತದ ಬೃಹತ್ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಹಾಗಾಗಿ, ಎಲ್‌ಐಸಿ ಸೇರಿದಂತೆ ದೇಶದ 30ಕ್ಕೂ ಜೀವವಿಮೆ ಕಂತುಗಳನ್ನು ಈಗ ಪೇಟಿಎಂ ಮೂಲಕವೇ ಪಾವತಿಸಬಹುದಾಗಿದೆ.

ಇನ್ಮುಂದೆ ಪೇಟಿಎಂ ಮೂಲಕವೇ ಇನ್ಸೂರೆನ್ಸ್ ಕಂತನ್ನು ಕಟ್ಟಬಹುದು!

ನಮ್ಮ ದೇಶದಲ್ಲಿ ವಿಮಾ ಕಂತುಗಳನ್ನು ಹೆಚ್ಚಿನ ಪಾಲಿಸಿದಾರರು ಸಾಂಪ್ರದಾಯಿಕ ಮಾದರಿಯಲ್ಲೇ ಪಾವತಿಸುತ್ತಿದ್ದಾರೆ. ಇಂತಹ ಕೋಟ್ಯಂತರ ಪಾಲಿಸಿದಾರರು ಸುಗಮವಾಗಿ ಮತ್ತು ಸುಲಭವಾಗಿ, ಕೇವಲ ಕ್ಷಣದಲ್ಲಿ ತಾವಿದ್ದ ಜಾಗದಿಂದಲೇ ಆನ್‌ಲೈನ್ ಮೂಲಕ ಕಂತುಗಳನ್ನು ಪಾವತಿಸುವಂತೆ ಮಾಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಪೇಟಿಎಂ ಸಂಸ್ಥೆ ತಿಳಿಸಿದೆ.

ಮುಂಚೂಣಿ ವಿಮಾ ಸಂಸ್ಥೆಗಳಾದ ಐಸಿಐಸಿಐ ಪ್ರೊಡೆನ್ಷಿಯಲ್ ಲೈಫ್, ರಿಲಯನ್ಸ್ ಲೈಫ್, ಎಸ್​​ಬಿಐ ಲೈಫ್, ಆದಿತ್ಯ ಬಿರ್ಲಾ ಸನ್ ಲೈಫ್ ಮತ್ತು ಸ್ಟಾರ್ ಲೈಫ್ ಮುಂತಾದ 30ಕ್ಕೂ ಹೆಚ್ಚು ಸಂಸ್ಥೆಗಳ ಜೀವವಿಮೆ ಕಂತುಗಳನ್ನು ಕೂಡ ಪೇಟಿಎಂ ಮೂಲಕ ಆನ್-ಲೈನ್​​​​ನಲ್ಲಿ ಸುಲಭವಾಗಿ ಪಾವತಿಸಬಹುದು ಎಂದು ಪೇಟಿಎಂ ಸಂಸ್ಥೆಯ ಸಿಒಒ ಕಿರಣ್ ವಸಿರೆಡ್ಡಿ ಅವರು ಹೇಳಿದ್ದಾರೆ.

ಇನ್ಮುಂದೆ ಪೇಟಿಎಂ ಮೂಲಕವೇ ಇನ್ಸೂರೆನ್ಸ್ ಕಂತನ್ನು ಕಟ್ಟಬಹುದು!

360 ದಶಲಕ್ಷ ವಿಮಾ ಪಾಲಿಸಿಗಳನ್ನು ಹೊಂದಿರುವ ಭಾರತವು ಈ ವಿಚಾರದಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಜೀವವಿಮಾ ವಲಯವಾಗಿದ್ದು, ಜತೆಗೆ, ಮುಂದಿನ ಐದು ವರ್ಷಗಳಲ್ಲಿ ಈ ವಲಯವು ವರ್ಷಕ್ಕೆ ಶೇಕಡ 12ರಿಂದ 15ರಷ್ಟು ಸಂಯೋಜಿತ ಬೆಳವಣಿಗೆಯನ್ನು ಹೊಂದುವ ನಿರೀಕ್ಷೆ ಇದೆ. ಸದ್ಯಕ್ಕೆ ದೇಶದ ಜೀವವಿಮಾ ವಲಯ 50 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ.

Best Mobiles in India

English summary
Mobile Wallet and e-tailer, Paytm is tying up with three insurance companies, HDFC Ergo, Religare Health Insurance and ICICI Prudential to allow users to pay their premiums and renew policies cashlessly through the Paytm Wallet. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X