Home
ಸುದ್ದಿಜಾಲ

UPIನಿಂದ ಬ್ಯಾಂಕ್‌ ವ್ಯವಹಾರ ಮಾಡಲು ಆಧಾರ ಬೇಕಿಲ್ಲ..!

ಚಿಂತೆ ಬೇಡ ಇನ್ನು ಮುಂದೆ ಯಾವುದೆ UPI ಸೇವೆಯನ್ನು ನೀಡುವ ಆಪ್ ಗಳು ಬಳಕೆದಾ ಆಧಾರ್ ಮಾಹಿತಿಯನ್ನು ಪಡೆಯುವಂತೆ ಇಲ್ಲ ಎನ್ನಲಾಗಿದೆ, ಯಾವುದೇ ಮಾದರಿಯ ಪೇಮೆಂಟ್ ಗಾಗಿ ಆಧಾರ್ ಮಾಹಿತಿಯನ್ನು ಕೇಳುವಂತೆ ಇಲ್ಲ ಎಂದು ಸುಪ್ರೀ ಕೋರ್ಟ್ ಆದೇಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ನೀವು ಆಧಾರ್ ಮಾಹಿತಿಯನ್ನು ಹಾಗೂ ಕೆವೈಸಿಯನ್ನು ನೀಡದಯೇ ನೀವು UPI ಸೇವೆಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಈಗಾಗಲೇ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ಆಧಾರ್ ಅನ್ನು ಕಡ್ಡಾಯ ಮಾಡುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಕಂಪನಿಗಳು ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವಂತೆ ಬಳಕೆದಾರರನ್ನು ಬಲವಂತ ಮಾಡುವಂತೆ ಇಲ್ಲ ಎನ್ನಲಾಗಿದೆ.

UPIನಿಂದ ಬ್ಯಾಂಕ್‌ ವ್ಯವಹಾರ ಮಾಡಲು ಆಧಾರ ಬೇಕಿಲ್ಲ..!

ಈಗಾಗಲೇ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದ್ದು, ಇನ್ನು ಯಾವುದೇ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸದಂತೆ ತಿಳಿಸಿದೆ. ಇದಲ್ಲದೇ ಯಾವುದೇ ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ಪಡೆದುಕೊಳ್ಳುವುದಾಗಲಿ, ಬಳಕೆ ಮಾಡಿಕೊಳ್ಳುವುದಾಗಲಿ ಮಾಡುವಂತೆ ಇಲ್ಲ. ಇದನ್ನು ಮಾಡಿದೆ ಕಾನೂನಿನ ಉಲ್ಲಂಘನೆಯಾಗಲಿದೆ ಎನ್ನಲಾಗಿದೆ.

UPI ಆಧಾರಿತ ಸೇವೆಯನ್ನು ಪಡೆದುಕೊಳ್ಳಲು ಇನ್ನು ಮುಂದೆ ಯಾವುದೇ ಕೆವೈಸಿಯನ್ನು ತುಂಬುವಂತೆ ಇಲ್ಲ. ಇದರ ಬದಲಾಗಿಬಳಕೆದಾರರು ಈ ಹಿಂದೆ ಬಳಕೆ ಮಾಡಿಕೊಳ್ಳುತ್ತಿದ್ದ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಬ್ಯಾಂಕಿಂಗ್ ಸೇವೆಯನ್ನು ನೀಡುವ ಆಪ್ ಗಳು ಸಹ ನಿಮ್ಮ ಯಾವುದೇ ಮಾಹಿತಿಯನ್ನು ಕೇಳುವಂತೆ ಇಲ್ಲ. ಅಲ್ಲದೇ ನೀವು ನೀಡಲು ಬೇಕಾಗಿಲ್ಲ. ಸಿಮ್ ಪಡೆದುಕೊಳ್ಳಲು, ಬ್ಯಾಂಕ್ ಆಕೌಂಟ್ ಓಪನ್ ಮಾಡಲು ಹಾಗೆ ಪೇಮೆಂಟ್ ಆಪ್ ಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಬಳಸಲು ನೀವು ಆಧಾರ್ ನೀಡಬೇಕಾಗಿಲ್ಲ.

ಯಾವುದೇ ಆಪ್ ಗಳು ನಿಮ್ಮ ಮಾಹಿತಿಯನ್ನು ಕೇಳಿದ ಸಂದರ್ಭದಲ್ಲಿ ನೀವು ಮಾಹಿತಿ ನೀಡಲು ನಿರಾಕರಿಸಬಹುದು. ಅಲ್ಲದೇ ಅವರು ಒತ್ತಾಯ ಮಾಡಿದ ಸಂದರ್ಭದಲ್ಲಿ ನೀವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸುವುದಲ್ಲದೇ ಅವರ ವಿರುದ್ಧ ದೂರು ಸಹ ನೀಡಬಹುದಾಗಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಅಗತ್ಯ ವಿಲ್ಲದೇ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವ ಕ್ರಮಕ್ಕೆ ಮುಂದಾಗ ಬೇಡಿ ಮುಂದಿನ ದಿನದಲ್ಲಿ ಇದೇ ನಿಮಗೆ ಮಾರಕವಾಗುವ ಸಾಧ್ಯತೆ ಹೆಚ್ಚಾಗಿದೆ.

Best Mobiles in India

English summary
Payment Companies Banned From Using Aadhaar-Services; Paytm Not Affected!. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+