ಯುಪಿಐ ವಹಿವಾಟಿನಲ್ಲಿ ನಂಬರ್‌ಒನ್‌ ಸ್ಥಾನಕ್ಕೇರಿದ ಪೇಟಿಎಂ ಬ್ಯಾಂಕ್‌!

|

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಯೂ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಭಾರಿ ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿದೆ. ಭಾರತದಲ್ಲಿ ಈಗಾಗ್ಲೆ ಹಲವಾರು Unified Payments Interface ಆಪ್‌ಗಳು ಲಭ್ಯವಿವೆ. ಅದರಲ್ಲಿ ಪೇಟಿಎಂ (Paytm Payments Bank Ltd) ಆಪ್‌ ಕೂಡ ಒಂದಾಗಿದ್ದು, ಗ್ರಾಹಕರಿಗೆ ಉತ್ತಮ ಡಿಜಿಟಲ್‌ ಪೇಮೆಂಟ್‌ ಸೇವೆಯನ್ನ ನೀಡುತ್ತಿದೆ. ಸದ್ಯ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ಮಾಡುವ ಆಪ್‌ಗಳಲ್ಲಿ ಪೆಟಿಎಂ ಮುಂದಿದೆ ಎಂದು MeitY ವರದಿಯಲ್ಲಿ ಹೇಳಿದೆ.

ಹೌದು

ಹೌದು, ಭಾರತದಲ್ಲಿ ಯುಪಿಐ ಟ್ರಾನ್ಸಾಕ್ಶನ್ ಮಾಡುವಲ್ಲಿ ಆಕ್ಸಿಸ್‌ ಬ್ಯಾಂಕ್‌, ಹೆಚ್‌ಡಿಎಫ್‌ಸಿ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾ ಆಪ್‌ಗಳಿಗಿಂತ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಹೆಚ್ಚು ಬಳಸಲ್ಪಡುತ್ತಿದೆ ಎಂಬ ಮಾಹಿತಿಯನ್ನ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ. ಈ ಮೂಲಕ ಡಿಜಿಟಲ್‌ ಪೇಮೆಂಟ್‌ ಮಾಡುವುದಕ್ಕೆ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರು ಪೇಟಿಎಂ ಅನ್ನೇ ಬಳಸುತ್ತಿದ್ದಾರೆ ಎಂದು ದೃಡಪಡಿಸಿದೆ. ಅಷ್ಟಕ್ಕೂ ಪೇಟಿಎಂ ಮೊದಲ ಸ್ಥಾನಕ್ಕೇ ಬರೋದಕ್ಕೆ ಕಾರಣವಾದ ಅಂಶಗಳೇನು.? ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಯಾವ ಆಧಾರದಲ್ಲಿ ಈ ಅಂಕಿ ಅಂಶಗಳನ್ನ ದೃಡಪಡಿಸಿದೆ ಅನ್ನೊದರ ಡಿಟೇಲ್ಸ್‌ ಅನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

MeitY ವರದಿ

MeitY ವರದಿ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ ನ ಪೇಟಿಎಂ ಭಾರತದಲ್ಲಿ ಅತಿ ಹೆಚ್ಚು ಟ್ರಾನ್ಸಾಕ್ಶನ್ ಮಾಡಿದ ಡಿಜಿಟಲ್‌ ಬ್ಯಾಂಕ್‌ ಆಗಿ ಗುರುತಿಸಿಕೊಂಡಿದೆ. ಸದ್ಯ MeitY ಬಿಡುಗಡೆ ಮಾಡಿದ ಜನವರಿ 2020 ರ ಸ್ಕೋರ್‌ಕಾರ್ಡ್ ಪ್ರಕಾರ, PPBL ಅತಿ ಕಡಿಮೆ ತಾಂತ್ರಿಕ ಕುಸಿತವನ್ನು ಅಂದರೆ 0.02% ರಷ್ಟಿದ್ದರೆ, ಇತರ ಪ್ರಮುಖ ಬ್ಯಾಂಕಿಂಗ್ ಸೇವೆಗಳು 1% ರಷ್ಟು ಹೆಚ್ಚಿನ ತಾಂತ್ರಿಕ ಕುಸಿತದ ದರವನ್ನು ಹೊಂದಿದ್ದಾರೆ. ಅಂದರೆ ಇತರೆ ಬ್ಯಾಂಕಿಂಗ್‌ ಯುಪಿಐ ಸೇವೆಗಳು ಎದುರಿಸಿದ ತಾಂತ್ರಿಕ ತೊಂದರೆಗೂ ಪೆಟಿಎಂನಲ್ಲಿ ಉಂಟಾಗುವ ತಾಂತ್ರಿಕ ತೊಂದರೆಗೂ ಅಜಗಜಾಂತರ ವ್ಯಾತ್ಯಾಸವಿದೆ. ಈ ರೀತಿಯ ತಾಂತ್ರಿಕ ಕುಸಿತವು ಯುಪಿಐ ವಹಿವಾಟುಗಳ ಮೇಲಿನ ವಿಶ್ವಾಸಾರ್ಹತೆಯನ್ನು ಗುರುತಿಸುತ್ತದೆ.

ಪೇಟಿಎಂ

ಪೇಟಿಎಂ

ಇನ್ನು MeitY ವರದಿಯಲ್ಲಿ ಪೆಟಿಎಂ ಮೊದಲ ಸ್ಥಾನ ಪಡೆದುಕೊಳ್ತಿದ್ದ ಹಾಗೇ ಪೇಟಿಎಂ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ನಮ್ಮ ತಂತ್ರಜ್ಞಾನದ ಮೂಲಸೌಕರ್ಯವು ಜಾಗತಿಕ ಬ್ಯಾಂಕಿಂಗ್ ಉದ್ಯಮದಲ್ಲಿ ಅತ್ಯುತ್ತಮವಾದದ್ದು ಆಗಿದ್ದು, ಇದು MeitYನ ವರದಿಯಲ್ಲಿ ನಾವು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಪೇಟಿಎಂ ಪೇಮೆಂಟ್‌ ಬ್ಯಾಂಕಿನ ಸಿಇಒ ಸತೀಶ್ ಗುಪ್ತಾ ಹೇಳಿಕೆ ನೀಡಿದ್ದಾರೆ.

ಯುಪಿಐ ವಹಿವಾಟು

ಯುಪಿಐ ವಹಿವಾಟು

ಹಾಗೇ ನೋಡಿದರೆ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವಾರು ಪ್ರಮುಖ ಬ್ಯಾಂಕುಗಳಿಗಿಂತ ಪೇಟಿಎಂ ಬ್ಯಾಂಕ್‌ ಜನವರಿ ತಿಂಗಳಲ್ಲಿ 169 ಮಿಲಿಯನ್ ಯುಪಿಐ ವಹಿವಾಟುಗಳನ್ನು ಮಾಡಿದೆ. ಅಲ್ಲದೆ ಇತರ ಬ್ಯಾಂಕುಗಳಿಗೆ ಸಂಬಂಧಿಸಿದಂತೆ, ಯುಪಿಐ ವಹಿವಾಟುಗಳನ್ನು ಹೆಚ್ಚಾಗಿ ಪೇಟಿಎಂ ಅಪ್ಲಿಕೇಶನ್‌ಗಳಿಂದ ನಡೆಸಲಾಗಿದ್ದು, ಪಿಪಿಬಿಎಲ್ ಯುಪಿಐ ವಹಿವಾಟುಗಳನ್ನು ಸಾವಯವವಾಗಿ ಪೇಟಿಎಂನ ಎಕೋ ಸಿಸ್ಟಂನಿಂದ ಟ್ರಾನ್ಸಾಕ್ಶನ್ ಮಾಡುವ ದೇಶದ ಏಕೈಕ ಬ್ಯಾಂಕ್ ಆಗಿ ಪೆಟಿಎಂ ಗುರುತಿಸಿಕೊಂಡಿದೆ.

ಇತರೆ

ಇತರೆ

ಸದ್ಯ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ ಈಗಾಗಲೇ 100 ಮಿಲಿಯನ್ ಯುಪಿಐ ಹ್ಯಾಂಡಲ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಂದಿದೆ. ಅಲ್ಲದೆ ದೇಶದ ಎಲ್ಲಾ ಆಪ್‌ಲೂನ್‌ ಅಂಗಡಿಗಳಲ್ಲೂ ತನ್ನ ಯುಪಿಐ ಟ್ರಾನ್ಸಾಕ್ಶನ್ ಅನ್ನು ಹೆಚ್ಚುಗೊಳಿಸುವತ್ತ ಜನರನ್ನ ಆಕರ್ಷಿಸುತ್ತಿದೆ. ಇದರಿಂದಾಗಿ ಪೆಟಿಎಂ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಪ್ರಮುಖ ಡಿಜಿಟಲ್‌ ಪೇಮೆಂಟ್ ಆಪ್‌ ಆಗಿ ಗುರುತಿಸಿಕೊಂಡಿದೆ.

Best Mobiles in India

English summary
Paytm Payments Bank Ltd processed over 169 million UPI transactions in the month of January, ahead of several major banks including SBI, HDFC Bank and ICICI Bank.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X