'ಪೆಟಿಎಂ' ಮಾಲಿಕನಿಗೆ ಬ್ಲ್ಯಾಕ್‌ಮೇಲ್...20 ಕೋಟಿ ಬೇಡಿಕೆಯಿಟ್ಟ ಮಹಿಳಾ ಉದ್ಯೋಗಿ!!
ಪೆಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಲ್ಯಾಪ್‌ಟಾಪ್‌ನಿಂದ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ, 20 ಕೋಟಿ ರೂ. ಹಣ ನೀಡದಿದ್ದರೆ ಮಾಹಿತಿ ಬಹಿರಂಗ ಪಡಿಸುವುದಾಗಿ ಈಕೆ ತನ್ನ ಸಹಚರರೊಂದಿಗೆ ಬೇಡಿಕೆಯೊಡ್ಡಿದ್ದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಶರ್ಮಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಬಗ್ಗೆ ತಿಳಿದುಬಂದಿದ್ದು, ಇದೀಗ ವೈರಲ್ ಆಗಿದೆ.
ಹೌದು, 'ಪೆಟಿಎಂ' ಮುಖ್ಯಸ್ಥರಾದ ವಿಜಯ್ ಶೇಖರ್ ಶರ್ಮಾ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ವಿಜಯ್ ಶೇಖರ್ ಶರ್ಮಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋನಿಯಾ ಧವನ್ ಎಂಬ ಮಹಿಳೆಯೇ ಈ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಕೂಡ ಹೊರಬಿದ್ದಿದೆ.

ಪೇಟಿಎಂ ಕಂಪನಿ 2010ರಲ್ಲಿ ಸ್ಥಾಪನೆಯಾಗಿದ್ದು, ವಿಜಯ್ ಶೇಖರ್ ಶರ್ಮಾ ಅವರ ಸಹಾಯಕಿಯಾಗಿ ಅಂದಿನಿಂದಲೂ ಜತೆಗೆ ಕೆಲಸ ಮಾಡುತ್ತಿದ್ದ ಸೋನಿಯಾ ಶರ್ಮಾ ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ. ವೈಯಕ್ತಿಕ ಮಾಹಿತಿ ಎಷ್ಟು ಮುಖ್ಯ ಎಂಬುದನ್ನು ಸಹ ಈ ವೈರಲ್ ಸುದ್ದಿ ತೋರಿಸಿಕೊಟ್ಟಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

20 ಕೋಟಿ ರೂ.ಗೆ ಬೇಡಿಕೆ!
ಪೇಟಿಎಂ ಬಳಕೆದಾರರ ದತ್ತಾಂಶವನ್ನು ಕಳವು ಮಾಡಿದ್ದು, 20 ಕೋಟಿ ರೂ. ಕೊಡದಿದ್ದರೆ ಅದನ್ನು ಸೋರಿಕೆ ಮಾಡುವುದಾಗಿ ಬೆದರಿದ್ದಾಗಿ ಶರ್ಮಾ ದೂರು ದಾಖಲಿಸಿದ್ದರು.ದೂರಿನ ಅನ್ವಯ,ಸೆಪ್ಟೆಂಬರ್ 20 ರಂದು ವಿಜಯ್ ಮತ್ತು ಅಜಯ್ ಇಬ್ಬರಿಗೂ ಕರೆ ಮಾಡಿದ್ದ ವ್ಯಕ್ತಿಯೋರ್ವ, ಪೇಟಿಎಂ ಗ್ರಾಹಕರ ವೈಯಕ್ತಿಕ ಮಾಹಿತಿ ನನ್ನಲ್ಲಿದ್ದು, ಮಾಹಿತಿ ಸೋರಿಕೆ ಮಾಡಿ ಕಂಪನಿಯ ಹೆಸರಿಗೆ ಮಸಿ ಬಳಿಯುವುದಾಗಿ ಬೆದರಿಸಿದ್ದ.

2 ಲಕ್ಷ ಪಾವತಿಸಿದ ಶರ್ಮಾ!
ಪೇಟಿಎಂ ಗ್ರಾಹಕರ ವೈಯಕ್ತಿಕ ಮಾಹಿತಿ ಹಾಗೂ ಹಣಕಾಸು ಮಾಹಿತಿಗಳನ್ನು ಸೋರಿಕೆ ಮಾಡುವ ಬಗ್ಗೆ ಅನಾಮಿಕ ವ್ಯಕ್ತಿ ಹೆದರಿಸಿದ ನಂತರ ಆತನ ಖಾತೆಗೆ ಶರ್ಮಾ 2 ಲಕ್ಷ ರೂ. ಪಾವತಿಸಿದ್ದಾರೆ. ಇದಾದ ನಂತರ ಇನ್ನೂ 10 ಕೋಟಿ ಹಣವನ್ನು ವರ್ಗಾಯಿಸಲು ತಯಾರಿರುವಂತೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದ ಶರ್ಮಾ ಅವರೇ ಆತನನ್ನು

ಮಾಹಿತಿಯನ್ನು ಅವನೇ ನೀಡಿದ!
ಅನಾಮಿಕನನ್ನು ಮತ್ತೆ ಸಂಪರ್ಕಿಸಿದ ಶರ್ಮಾ ಅವರು, ಯಾವ ರೀತಿಯ ಮಾಹಿತಿ ಇದೆ ಹಾಗೂ ಅದು ದಕ್ಕಿದ್ದು ಹೇಗೆ ಎಂಬುದನ್ನು ಕೇಳಿಕೊಂಡಿದ್ದಾರೆ. ಶರ್ಮಾ ಅವರನ್ನು ನಂಬಿಸುವ ಸಲುವಾಗಿ ಆತ ನಿಮ್ಮ ಕಂಪೆನಿಯ ಮಹಿಳಾ ಉದ್ಯೋಗಿ ಹಾಗೂ ಆಕೆಯ ಜೊತೆ ಇನ್ನಿಬ್ಬರು ಸೇರಿ ವೈಯಕ್ತಿ ಮಾಹಿತಿ ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದ. ಇದಾದ ನಂತರ ಶರ್ಮಾ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಕಳ್ಳತನ ಮಾಡಿದ್ದು ಯಾರು?
ಕಳೆದ 10 ವರ್ಷಗಳಿಂದಲೂ ವಿಜಯ್ ಶೇಖರ್ ಶರ್ಮಾ ಅವರ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ಧವನ್ ಎಂಬ ಮಹಿಳೆ ತನ್ನ ಪತಿಯೊಂದಿಗೆ ಯೋಜನೆ ರೂಪಿಸಿ ವಿಜಯ್ ಅವರ ಖಾಸಾಗಿ ಹಾಗೂ ಹಣಕಾಸು ವಿಚಾರಗಳ ಮಾಹಿತಿಯನ್ನು ಕಲೆಹಾಕಿದ್ದಾಳೆ ಎಂದು ಹೇಳಲಾಗಿದೆ. . ವಿಜಯ್ ಅವರ ಲ್ಯಾಪ್‌ಟಾಪ್ ನೋಡುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಬೇರೆ ಉದ್ಯೋಗಿಗಳೇ ಸಾಥ್!
ಸೋನಿಯಾ ಧವನ್ ಒಬ್ಬಳೇ ಇಂತಹ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ, ಕಳೆದ 7 ವರ್ಷಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೇವೇಂದರ್ ಕುಮಾರ್ ಹಾಗೂ ಸೋನಿಯಾ ಧವನ್ ಇಬ್ಬರೂ ಪ್ಲಾನ್ ಮಾಡಿ, ಕೆಲ ಸಹೋಸ್ಯೋಗಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕದಿಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವೈಯಕ್ತಿಕ ಮಾಹಿತಿ ಬಹುಮುಖ್ಯ!
ಒಂದು ವೇಳೆ ಆ ಅನಾಮಿಕ ವ್ಯಕ್ತಿಯು ವೈಯಕ್ತಿಕ ಮಾಹಿತಿಯನ್ನು ಕದ್ದು ಬಹಿರಂಗಪಡಿಸಿದ್ದರೆ ಪೇಟಿಎಂ ಸಂಸ್ಥೆಯ ಆಗುವ ತೊಂದರೆ ಹೆಚ್ಚಿತ್ತು. ಹಾಗಾಗಿಯೇ ಅನಾಮಿಕ ವ್ಯಕ್ತಿ ಹೆದರಿಸಿದಕ್ಕೆ ಆತನ ಖಾತೆಗೆ ಶರ್ಮಾ ಸವರು 2 ಲಕ್ಷ ರೂ. ಪಾವತಿಸಿದ್ದರು. ಈಗ ಆ ಅನಾಮಿಕನನ್ನು ಪತ್ತೆಹಚ್ಚಿ ಆತನ ಹೆಸರು ಕೋಮಲ್ ಎಂದು ಗುರುತಿಸಲಾಗಿದೆ. ವಿಜಯ್ ಅವರ ಖಾಸಾಗಿ ಮಾಹಿತಿಯನ್ನು ಮಾತ್ರ ಕದಿಯಲಾಗಿದ್ದು, ಇನ್ನು ಬಳಕೆದಾರರ ದತ್ತಾಂಶಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಜಯ್ ಶೇಖರ್ ಶರ್ಮಾ ಹೇಳಿದ್ದಾರೆ.


Click it and Unblock the Notifications








