Paytm ಕಾರ್ಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ!..ಡೈಲಿ ಕ್ಯಾಶ್‌ಬ್ಯಾಕ್‌ ಆಫರ್!

|

ಜನಪ್ರಿಯ ಯುಪಿಐ ನಗದು ಪಾವತಿ ಸೇವೆ ನೀಡುವ ಫ್ಲಾಟ್‌ಫಾರ್ಮ್‌ ಪೇಟಿಎಂ ಬಳಕೆದಾರರಿಗೆ ಮತ್ತೊಂದು ಹೊಸ ಹೆಜ್ಜೆಯನ್ನು ಹಾಕಿದೆ. ಈಗಾಗಲೇ ತನ್ನ ಡಿಜಿಡಲ್‌ ಪೇಮೆಂಟ್‌ ಸೇವೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಪೇಟಿಎಂ ಇದೀಗ ಕ್ರೇಡಿಟ್‌ ಕಾರ್ಡ್‌ ಪರಿಚಯಿಸಲು ಮುಂದಾಗಿದೆ. ಈ ಕ್ರೆಡಿಟ್‌ ಕಾರ್ಡ್‌ ಮೂಲಕ ಬಳಕೆದರರು ತಮ್ಮ ಪೇಟಿಎಂ ಸೇವೆಗಳು ಮತ್ತು ಪಾವತಿಗಳಿಗೆ ಸಾಲವನ್ನ ಪಡೆಯಬಹುದಾಗಿದೆ. ಅಲ್ಲದೆ ಈ ಕ್ರೆಡಿಟ್‌ ಕಾರ್ಡ್‌ಗಳ ಜೊತೆಗೆ ಅನಿಯಮಿತವಾದ ಆಕರ್ಷಕ ಕ್ಯಾಶ್‌ ಬ್ಯಾಕ್‌ ಕೂಡ ದೊರೆಯಲಿದೆ ಎಂದು ಪೇಟಿಎಂ ಹೇಳಿದೆ.

ಪೇಟಿಎಂ

ಹೌದು, ಪೇಟಿಎಂ ತನ್ನದೇ ಆದ ಕ್ರೆಡಿಟ್‌ ಕಾರ್ಡ್‌ ಆದ ಪೇಟಿಎಂ ಕಾರ್ಡ್‌ ಅನ್ನು ಪರಿಚಯಿಸಿದೆ. ಈ ಮೂಲಕ ಸರ್ವಾಂಗೀಣ ಡಿಜಿಟಲ್ ಅನುಭವವನ್ನು ನೀಡುವುದಾಗಿ ಪೇಟಿಎಂ ಪ್ರಕಟಿಸಿದೆ. ಪೇಟಿಎಂ ಕಾರ್ಡ್‌ ಅನ್ನು ಬಳಸಿ ಬಳಕೆದಾರರು ತಮ್ಮ ನಗದು ಪಾವತಿಗಳನ್ನ ಮಾಡಬಹುದಾಗಿದೆ ಅಲ್ಲದೆ ಈ ಪಾವತಿಗಳಿಗೆ ಅನಿಯಮಿತ ಕ್ಯಾಶ್‌ಬ್ಯಾಕ್‌ ಕೂಡ ದೊರೆಯಲಿದೆ. ಇನ್ನು ಈ ಪೇಟಿಎಂ ಕಾರ್ಡ್‌ ಸಾಕಷ್ಟು ಸುರಕ್ಷಿತವಾಗಿದ್ದು, ಒನ್‌ಟಚ್‌ ಸೇವೆಗಳಂತಹ ಫೀಚರ್ಸ್‌ಗಳನ್ನ ಹೊಂದಿದೆ. ಹಾಗಾದ್ರೆ ಪೇಟಿಎಂ ಕ್ರೆಡಿಟ್‌ ಕಾರ್ಡ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪೇಟಿಎಂ

ಇನ್ನು ಪೇಟಿಎಂ ತನ್ನ ಪೇಟಿಎಂ ಕಾರ್ಡ್‌ ಅನ್ನು ಪರಿಚಯಿಸುವ ಮೂಲಕ ಡಿಜಿಟಲ್‌ ಪೇಮೆಂಟ್‌ ಸೇವೆಯಲ್ಲಿ ಹೊಸ ಹೆಜ್ಜೆ ಇಟ್ಟಿದೆ. ತನ್ನದೇ ಆದ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿ ಮುಂದಿನ ಒಂದು ವರ್ಷದ ಒಳಗೆ ಎರಡು ಮಿಲಿಯನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಉದ್ದೇಶವನ್ನು ಪೇಟಿಎಂ ಹೊಂದಿದೆ. ಈ ಮೂಲಕ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೆಡಿಟ್‌ ಕಾರ್ಡ್‌ ಬಳಕೆದಾರರನ್ನ ಹೊಂದುವ ಉದ್ದೇಶ ಹೊಂದಿದೆ. ಲಭ್ಯ ಮಾಹಿತಿ ಪ್ರಕಾರ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಕನಿಷ್ಠ 10% ನಷ್ಟು ಭಾಗವನ್ನು ವಶಪಡಿಸಿಕೊಳ್ಳಲು ಕಂಪನಿಯು ಯೋಜಿಸಿದೆ ಎಂದು ಹೇಳಲಾಗಿದೆ.

ಪೇಟಿಎಂ

ಪೇಟಿಎಂ ಕ್ರೆಡಿಟ್‌ ಕಾರ್ಡ್‌ ಸಾಕಷ್ಟು ಸುರಕ್ಷಿತ ಫೀಚರ್ಸ್‌ ಅನ್ನು ಹೊಂದಿದ್ದು ಸಾಕಷ್ಟು ಅನುಕೂಲಕರವಾಗಿದೆ. ಅದರಲ್ಲೂ ಸೆಕ್ಯುರಿಟಿ ಪಿನ್ ಸಂಖ್ಯೆಯನ್ನು ಚಾರ್ಜ್ ಮಾಡಲು, ವಿಳಾಸವನ್ನು ನವೀಕರಿಸಲು, ಕಾರ್ಡ್ ಅನ್ನು ನಿರ್ಬಂಧಿಸಲು, ಹೊಸ ಕಾರ್ಡ್ ನೀಡಲು ಮತ್ತು ಬಾಕಿ ಇರುವ ಕ್ರೆಡಿಟ್-ಮಿತಿಯನ್ನು ವೀಕ್ಷಿಸಲು ತ್ವರಿತ ಒನ್-ಟಚ್ ಸೇವೆಗಳಂತಹ ಫೀಚರ್ಸ್‌ಗಳನ್ನ Paytm ಕ್ರೆಡಿಟ್ ಕಾರ್ಡ್‌ಗಳು ಹೊಂದಿರಲಿವೆ. ಸಂಪರ್ಕವಿಲ್ಲದ ಪಾವತಿಗಳನ್ನು ಸ್ವಿಚ್ ಆಫ್ ಮಾಡುವುದು ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಅಂತರರಾಷ್ಟ್ರೀಯ ಪಾವತಿಗಳಂತಹ ಫೀಚರ್ಸ್‌ಗಳಿಗೆ ಬಳಕೆದಾರರಿಗೆ ಸುಲಭ ಪ್ರವೇಶವಿರುತ್ತದೆ ಎನ್ನಲಾಗಿದೆ. ಜೊತೆಗೆ Paytm ಬಳಕೆದಾರರ ಬಳಕೆಯ ಆಧಾರದ ಮೇಲೆ ಖರ್ಚು ಸಲಹೆಗಳನ್ನು ಸಹ ಒದಗಿಸುತ್ತದೆ.

Paytm

ಇದಲ್ಲದೆ ಕ್ರೆಡಿಟ್ ಕಾರ್ಡ್ ಅರ್ಜಿ ಪ್ರಕ್ರಿಯೆಗೆ ಡಿಜಿಟಲೀಕರಿಸಿದ ಅನುಭವವನ್ನು ನೀಡಲು Paytm ಉದ್ದೇಶಿಸಿದೆ. ಬಳಕೆದಾರರು ಪೇಟಿಎಂ ಅಪ್ಲಿಕೇಶನ್‌ನಲ್ಲಿಯೇ ಕ್ರೆಡಿಟ್‌ ಕಾರ್ಡ್‌ಗೆ ಅಪ್ಲಿಕೇಶನ್‌ ಅನ್ನು ಪಡೆಯಬಹುದು, ಮತ್ತು ಡಾಕ್ಯುಮೆಂಟ್ ಸಂಗ್ರಹಕ್ಕಾಗಿ ತಮ್ಮ ಆದ್ಯತೆಯ ಸಮಯವನ್ನು ಸಹ ಆರಿಸಿಕೊಳ್ಳಬಹುದಾಗಿದೆ. ಇನ್ನು Paytm ಕ್ರೆಡಿಟ್ ಕಾರ್ಡ್‌ಗಳು ಪ್ರತಿ ವಹಿವಾಟಿನಲ್ಲೂ ಖಚಿತವಾದ ಕ್ಯಾಶ್‌ಬ್ಯಾಕ್‌ನೊಂದಿಗೆ ರಿವಾರ್ಡ್ ಸಿಸ್ಟಮ್‌ನೊಂದಿಗೆ ಬರುತ್ತವೆ. ಜೊತೆಗೆ ಈ ಕ್ರೆಡಿಟ್‌ ಕಾರ್ಡ್‌ ಅನ್ನು Paytm ನೀಡುವ ಸೇವೆಗಳಿಗೆ ಪಾವತಿಗಳಿಗಾಗಿ ಸಹ ಬಳಸಬಹುದಾಗಿದೆ.

Best Mobiles in India

Read more about:
English summary
Paytm aims to offer an all-round digital experience with its credit cards from the application process to customer support.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X