Home
ಸುದ್ದಿಜಾಲ

Paytm ನ ಹೆಸರು ಬದಲಾವಣೆ: ಹೊಸ ಹೆಸರೇನು? ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಇತ್ತೀಚೆಗೆ ಆರ್‌ಬಿಐನಿಂದ ಕಟ್ಟುನಿಟ್ಟಿನ ಕ್ರಮಗಳಿಗೆ ಗುರಿಯಾಗಿರುವ ಪೇಟಿಎಂ ಇದೀಗ ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ. ಈ ಮೂಲಕ ಭಾರತದಲ್ಲಿ Paytm ಇ-ಕಾಮರ್ಸ್ ತನ್ನ ಹೆಸರನ್ನು ಪೈ ಪ್ಲಾಟ್‌ಫಾರ್ಮ್‌ಗಳಾಗಿ ಬದಲಾಯಿಸಿದೆ ಎಂದು ವರದಿಯಾಗಿದೆ. ಕಂಪನಿಗಳ ರಿಜಿಸ್ಟ್ರಾರ್‌ನಿಂದ ಅನುಮೋದನೆ ಪಡೆದ ನಂತರ ಈ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೌದು, Paytm ಇ-ಕಾಮರ್ಸ್ ತನ್ನ ಹೆಸರನ್ನು ಪೈ ಪ್ಲಾಟ್‌ಫಾರ್ಮ್‌ ಎಂದು ಬದಲಾಯಿಸಿದೆ. ಕಂಪನಿಯು ಮೂರು ತಿಂಗಳ ಹಿಂದೆಯೇ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿತ್ತು ಎನ್ನಲಾಗಿದೆ. ಅಲ್ಲದೆ ಹೆಸರು ಬದಲಾವಣೆಗೆ ಫೆಬ್ರವರಿ 8 ರಂದು ಕಂಪನಿಗಳ ರಿಜಿಸ್ಟ್ರಾರ್‌ನಿಂದ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಪೇಟಿಎಂ ತನ್ನ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ? ಆರ್‌ಬಿಐನಿಂದ ಕ್ರಮಕ್ಕೆ ಒಳಗಾಗಿರುವ ಪೇಟಿಎಂನ ಮುಂದಿನ ಹಾದಿಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

Paytm ನ ಹೆಸರು ಬದಲಾವಣೆ: ಹೊಸ ಹೆಸರೇನು? ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಪೇಟಿಎಂ ಇ-ಕಾಮರ್ಸ್ ಆರ್‌ಬಿಐನಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಹೆಸರನ್ನು ಪೈ(Pai) ಪ್ಲಾಟ್‌ಫಾರ್ಮ್‌ ಎಂದು ಬದಲಾಯಿಸಲಿದೆ. ಅಲ್ಲದೆ ಹೆಸರು ಬದಲಾವಣೆ ಮಾಡುವುದಕ್ಕೆ 3 ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದು, ಇದೀಗ ಕೇಂದ್ರ ಸರ್ಕಾರ ಅದನ್ನು ಅನುಮೋದಿಸಿದೆ. ಕಂಪನಿಗಳ ರಿಜಿಸ್ಟ್ರಾರ್‌ನಿಂದ ಅನುಮತಿ ಪಡೆದ ನಂತರ Paytm ಇ-ಕಾಮರ್ಸ್ ತನ್ನ ಹೆಸರನ್ನು ಪೈ ಪ್ಲಾಟ್‌ಫಾರ್ಮ್‌ ಎಂದು ಬದಲಾಯಿಸಿ ಕೊಂಡಿದೆ ಎಂದು ವರಯಾಗಿದೆ.

Paytm ತನ್ನ ಪ್ಲಾಟ್‌ಫಾರ್ಮ್‌ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ ಮೂರು ತಿಂಗಳ ನಂತರ ಅಂದರೆ ಫೆಬ್ರವರಿ 8 ರಂದು ಕಂಪನಿಗಳ ರಿಜಿಸ್ಟ್ರಾರ್‌ನಿಂದ ಅನುಮತಿ ಪಡೆದಿದೆ. ಈ ಪ್ರಮಾಣಪತ್ರ ಪಡೆದ ದಿನಾಂಕದಿಂದ ಜಾರಿಗೆ ಬರುವಂತೆ ಕಂಪನಿಯ ಹೆಸರನ್ನು Paytm E-Commerce Private Limited ನಿಂದ Pai Platforms Private Limited ಎಂದು ಬದಲಾಯಿಸಲಾಗಿದೆ. ಈ ಕಂಪನಿಯು ಮೂಲತಃ Paytm E-Commerce Private Limited ಎಂಬ ಹೆಸರಿನಲ್ಲಿ ಸಂಘಟಿತವಾಗಿದೆ ಎಂದು ಕಂಪನಿಗಳ ರಿಜಿಸ್ಟ್ರಾರ್ ಫೆಬ್ರವರಿ 8 ರಂದು ಅಧಿಸೂಚನೆಯನ್ನು ಸಹ ಹೊರಡಿಸಿದೆ.

ಇನ್ನು ಪೇಟಿಎಂ ಇ-ಕಾಮರ್ಸ್ ಒಎನ್‌ಡಿಸಿಯಲ್ಲಿ ಮಾರಾಟಗಾರರ ವೇದಿಕೆಯಾದ ಬಿಟ್ಸಿಲಾವನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ ಪೈ ಪ್ಲಾಟ್‌ಫಾರ್ಮ್‌ ಕೂಡ ONDC ನೆಟ್‌ವರ್ಕ್‌ನಲ್ಲಿ ಪ್ರಮುಖ ಖರೀದಿದಾರರ ವೇದಿಕೆಯಾಗಿದೆ. ಇದರಿಂದ ಬಿಟ್ಸಿಲಾ ಖರೀದಿದಾರರ ವ್ಯಾಪಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವರದಿಯಾಗಿದೆ. ಇನ್ನು ಬಿಟ್ಸಿಲಾ ಪ್ಲಾಟ್‌ಪಾರ್ಮ್‌ 2020 ರಲ್ಲಿಯೇ ಪ್ರಾರಂಭವಾಗಿದ್ದು, ಫುಲ್‌-ಸ್ಟಾಕ್ ಓಮ್ನಿಚಾನಲ್ ಮತ್ತು ಹೈಪರ್‌ಲೋಕಲ್ ಕಾಮರ್ಸ್ ಸಾಮರ್ಥ್ಯದೊಂದಿಗೆ ONDC ಮಾರಾಟಗಾರರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನು Paytm ಇ-ಕಾಮರ್ಸ್‌ನಲ್ಲಿ ಎಲಿವೇಶನ್ ಕ್ಯಾಪಿಟಲ್ ಅತಿ ದೊಡ್ಡ ಷೇರುದಾರ ಆಗಿದೆ. ಇದಲ್ಲದೆ, Paytm ಬ್ರ್ಯಾಂಡ್ ಅನ್ನು ಹೊಂದಿರುವ One 97 ಕಮ್ಯುನಿಕೇಷನ್ಸ್ ಷೇರುಗಳು ಶುಕ್ರವಾರ ಸುಮಾರು 9% ನಷ್ಟು ಕುಸಿತವನ್ನು ಕಂಡಿದೆ. ಇದಕ್ಕೆ ಮುಖ್ಯ ಕಾರಣ ಪೇಟಿಎಂ ಮೇಲೆ ಆರ್‌ಬಿಐ ತೆಗೆದುಕೊಳ್ಳುತ್ತಿರುವ ಕ್ರಮಗಳೇ ಕಾರಣ. ಇದರಿಂದ ಹೂಡಿಕೆದಾರರು ಸ್ಟಾಕ್ ಅನ್ನು ಡಂಪ್ ಮಾಡುವುದನ್ನು ಮುಂದುವರೆಸಿದರು. ಅಲ್ಲದೆ ಫೆ.29ರ ನಂತರ ಏನಾಗುತ್ತದೋ ಎಂಬ ಆತಂಕದಲ್ಲಿ ಪೇಟಿಎಂ ಬಳಕೆದಾರರಿದ್ದಾರೆ.

Paytm ನ ಹೆಸರು ಬದಲಾವಣೆ: ಹೊಸ ಹೆಸರೇನು? ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಇದೇ ಸಂದರ್ಭದಲ್ಲಿ Paytm ಕಂಪನಿಯು Paytm E-Commerce Private Limited ಹೆಸರನ್ನು Pai Platforms Private Limited ಎಂದು ಬದಲಾಯಿಸಲು ಅನುಮತಿ ಪಡೆದಿದೆ. ಹಾಗಾಗಿ, ಆರ್‌ಬಿಐನಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಗದಿದ್ದರೆ, ಪೇಟಿಎಂ ಹೊಸ ಹೆಸರಿಗೆ ಬದಲಾಯಿಸುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 29 ರ ನಂತರ ಇದರ ಸೇವೆಗಳನ್ನು ನಿಷೇಧಿಸಲಾಗುವುದು ಎಂದು ಆರ್‌ಬಿಐ ಹೇಳಿರುವುದರಿದ, Paytm ಪೈ ಹೆಸರಿನಲ್ಲಿ ತನ್ನ ವ್ಯವಹಾರವನ್ನು ಮುಂದುವರೆಸಬಹುದು ಎಂದು ಹೇಳಲಾಗಿದೆ.

ಇದನ್ನು ಮಾಡುವುದರಿಂದ ಮಾತ್ರ ಕಂಪನಿಯು ಸ್ಟಾಕ್ ಮತ್ತು ಗ್ರಾಹಕರನ್ನು ಉಳಿಸಿಕೊಳ್ಳಬಹುದು. ಪೇಟಿಎಂ ಕೂಡ ಇದಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಬಹುದು. ವಾಸ್ತವವಾಗಿ, ಅದರ ಭಾಗವಾಗಿ, ಇದು ಇ-ಕಾಮರ್ಸ್ ಸ್ಟಾರ್ಟ್ಅಪ್ ಬಿಟ್ಸಿಲಾವನ್ನು ಸ್ವಾಧೀನಪಡಿಸಿಕೊಂಡಿತು. ಈ ಬಿಟ್ಸಿಲಾ ONDC ಯ ಮಾರಾಟಗಾರರ ನೆಲೆಯಲ್ಲಿ ಮುಂಚೂಣಿಯಲ್ಲಿದೆ. ಈ ಬಿಟ್ಸಿಲಾ ಸ್ಟಾರ್ಟ್‌ಅಪ್ ತನ್ನ ಸೇವೆಗಳನ್ನು ಮೆಕ್‌ಡೊನಾಲ್ಡ್ಸ್ ಮತ್ತು ಬಿಗ್‌ಬಾಸ್ಕೆಟ್‌ನಂತಹ ಪ್ರತಿಷ್ಠಿತ ಬ್ರಾಂಡ್‌ಗಳಿಗೆ ವಹಿವಾಟುಗಳಲ್ಲಿ ಒದಗಿಸುತ್ತಿದೆ. ಈ ಕಂಪನಿಯೊಂದಿಗೆ Paytm ಏನು ಮಾಡಲಿದೆ ಅನ್ನೊದು ಫೆಬ್ರವರಿ 29 ರ ನಂತರದ ದಿನಗಳಲ್ಲಿ ತಿಳಿದುಬರಲಿದೆ.

Best Mobiles in India

English summary
Paytm E-commerce renamed as Pai Platforms: How to affect users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+