Home
ಸುದ್ದಿಜಾಲ

ಪೇಟಿಎಂನ ಮೊದಲ ಕ್ರೆಡಿಟ್ ಕಾರ್ಡ್ ಬಿಡುಗಡೆ- ಗ್ರಾಹಕರಿಗೇನು ಲಾಭ?

By Gizbot Bureau

ಡಿಜಿಟಲ್ ಪಾವತಿ ಕಂಪೆನಿ ಆಗಿರುವ ಪೇಟಿಎಂ ಇದೇ ಮೊದಲ ಬಾರಿಗೆ ಸಿಟಿಬ್ಯಾಂಕ್ ಜೊತೆಗಿನ ಸಹಭಾಗಿತ್ವದಿಂದಾಗಿ ಪೇಟಿಎಂ ಫಸ್ಟ್ ಕಾರ್ಡ್ ನ್ನು ಬಿಡುಗಡೆಗೊಳಿಸಿದೆ. ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಗಳಿರುವ ದೇಶದ ಮೊದಲ ಕಾರ್ಡ್ ಇದಾಗಿರುತ್ತದೆ ಎನ್ನಲಾಗಿದ್ದು, ಸುಲಭದ ಇಎಂಐ ಆಯ್ಕೆಗಳು ಮತ್ತು ಎಕ್ಸ್ ಕ್ಲೂಸಿವ್ ಆಫರ್ ಗಳ ಜೊತೆಗೆ ಈ ಕ್ರೆಡಿಟ್ ಕಾರ್ಡ್ ಇರಲಿದೆ.

ಕ್ಯಾಷ್ ಬ್ಯಾಕ್ ಮತ್ತು ಇತರೆ ಆಫರ್ ಗಳು:

ಕ್ಯಾಷ್ ಬ್ಯಾಕ್ ಮತ್ತು ಇತರೆ ಆಫರ್ ಗಳು:

ಇದು ಅನಿಯಮಿತ 1% ಕ್ಯಾಷ್ ಬ್ಯಾಕ್ ಜೊತೆಗೆ ಬರುತ್ತದೆ ಮತ್ತು ಇದನ್ನು ಪ್ರತಿ ತಿಂಗಳು ನಿಮ್ಮ ಕಾರ್ಡ್ ಗೆ ಸ್ವಯಂಚಾಲಿತವಾಗಿ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಇದರಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ನಂತರ ಈ ಕಾರ್ಡ್ ನ್ನು ರಾಷ್ಟ್ರೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಸ್ವೀಕರಿಸಲಾಗುತ್ತದೆ. ಯಾವುದೇ ಗುಪ್ತ ಶುಲ್ಕಗಳು ಮತ್ತು ಚಾರ್ಜ್ ಗಳು ಈ ಕಾರ್ಡಿಗೆ ಇರುವುದಿಲ್ಲ.

ಪೇಟಿಎಂ ಆಪ್ ಬಳಸಿ ಕೂಡ ಕ್ರೆಡಿಟ್ ಕಾರ್ಡ್ ನ್ನು ಅಪ್ಲೈ ಮಾಡಬಹುದು ಮತ್ತು ಪೇಟಿಎಂ ಫಸ್ಟ್ ಕಾರ್ಡ್ ಪಾಸ್ ಬುಕ್ ಬಳಸಿ ಆಫರ್ ಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಅವಾರ್ಡ್ ಗಳು:

ಅವಾರ್ಡ್ ಗಳು:

ಮಾಧ್ಯಮಗೋಷ್ಟಿಯಲ್ಲಿ ಕಂಪೆನಿಯು ಯಾರು ಪೇಟಿಎಂ ಫಸ್ಟ್ ಕಾರ್ಡ್ ನ್ನು ಗ್ರಾಹಕರು ಪಡೆದುಕೊಳ್ಳುತ್ತಾರೋ ಅವರಿಗೆ 10,000ವನ್ನು ಕ್ರೆಡಿಟ್ ಕಾರ್ಡ್ ನಲ್ಲಿ ವಿನಿಯೋಗಿಸಿದವರಿಗೆ 10,000 ಬೆಲೆಬಾಳುವ ಪ್ರೋಮೋ ಕೋಡ್ ನ್ನು ಅವಾರ್ಡ್ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ. ಇದನ್ನು ಕಾರ್ಡ್ ನೀಡಲಾದ ನಾಲ್ಕು ತಿಂಗಳ ಒಳಗೆ ಮಾಡಬೇಕಾಗುತ್ತದೆ.

ರಿವಾರ್ಡ್ ಗಳು ಲಭ್ಯ:

ರಿವಾರ್ಡ್ ಗಳು ಲಭ್ಯ:

ಕಾಂಟ್ಯಾಕ್ಟ್ ರಹಿತ ಪಾವತಿಗೂ ಕೂಡ ಕಾರ್ಡ್ ಅನುವು ಮಾಡಿಕೊಡುತ್ತದೆ. ವಾರ್ಷಿಕವಾಗಿ 50,000 ರುಪಾಯಿಯನ್ನು ಕಾರ್ಡ್ ನಲ್ಲಿ ಪೇಟಿಎಂ ಕಾರ್ಡ್ ನಲ್ಲಿ ಬಳಸಿದರೆ, ವರ್ಷಕ್ಕೆ 500 ರುಪಾಯಿಯನ್ನು ರಿವಾರ್ಡ್ ರೂಪದಲ್ಲಿ ಬಳಕೆದಾರರಿಗೆ ಮನ್ನಾ ಮಾಡಲಾಗುತ್ತದೆ. ಹೆಚ್ಚುವರಿಯಾಗಿ ಅವರಿಗೆ ಆಕರ್ಷಕ ತಿಂಗಳ ಇನ್ಸ್ಟಾಲ್ಮೆಂಟ್ ಆಯ್ಕೆಗಳು ಲಭ್ಯವಾಗುತ್ತದೆ ಮತ್ತು ಶಾಪಿಂಗ್, ಟ್ರಾವೆಲ್, ಇತರೆ ಖರ್ಚುವೆಚ್ಚಗಳಲ್ಲಿ ಎಕ್ಸ್ ಕ್ಲೂಸೀವ್ ರಿಯಾಯಿತಿಗಳು ಅಥವಾ ಆಫರ್ ಗಳು ಲಭ್ಯವಾಗುತ್ತದೆ.

ಪೇಟಿಎಂ ಹೇಳಿಕೆ:

ಪೇಟಿಎಂ ಹೇಳಿಕೆ:

ಪೇಟಿಎಂ ನ ಪೋಷಕ ಸಂಸ್ಥೆ ಒನ್97 ಕಮ್ಯುನಿಕೇಷನ್ ನ ಸಿಇಓ ಮತ್ತು ಚೇರ್ ಮೆನ್ ಆಗಿರುವ ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಫಸ್ಟ್ ಕಾರ್ಡ್ ನ್ನು ಸಿಟಿ ಬ್ಯಾಂಕ್ ಜೊತೆಗೆ ಕೈಜೋಡಿಸಿ ಬಿಡುಗಡೆಗೊಳಿಸುತ್ತಿರುವುದಕ್ಕೆ ಸಂತೋಷವಿದೆ. ನಮ್ಮ ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಡಿಜಿಟಲ್ ಪಾವತಿ ಆಯ್ಕೆಯಲ್ಲಿ ನೀಡುವುದು ಹೊಸ ಆಫರ್ ನ ಉದ್ದೇಶವಾಗಿದೆ. ಕ್ಯಾಷ್ ಲೆಸ್ ಪಾವತಿಗೆ ಇದು ಇನ್ನಷ್ಟು ಬೆಂಬಲ ನೀಡುತ್ತದೆ. ಗ್ರಾಹಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಲಭ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಿಟಿ ಬ್ಯಾಂಕ್ ಸ್ಟೇಟ್ ಮೆಂಟ್:

ಸಿಟಿ ಬ್ಯಾಂಕ್ ಸ್ಟೇಟ್ ಮೆಂಟ್:

ಇನ್ನು ಗ್ಲೋಬಲ್ ಕನ್ಸ್ಯೂಮರ್ ಬ್ಯಾಂಕಿಂಗ್ ಸಿಟಿ ಇಲ್ಲಿನ ಸಿಇಓ ಆಗಿರುವ ಸ್ಟೀಫನ್ ಬರ್ಡ್ ಕೂಡ ಪೇಟಿಎಂ ಫಸ್ಟ್ ಕಾರ್ಡ್ ಮೂಲಕ ತಮ್ಮ ಸಂಸ್ಥೆಯ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸುವುದಕ್ಕೆ ನಾವು ಖುಷಿ ಪಡುತ್ತೇವೆ. ಹೊಸ ಡಿಜಿಟಲ್ ಗ್ರಾಹಕರ ಕೇಂದ್ರವನ್ನು ಇನ್ನಷ್ಟು ಈ ಮೂಲಕ ಬಲಪಡಿಸಲಾಗುತ್ತದೆ. ಗ್ರಾಹಕರು, ಬ್ಯುಸಿನೆಸ್ ಎಲ್ಲವನ್ನೂ ಈ ಮೂಲಕ ಜಾಗತಿಕವಾಗಿ ಅಭಿವೃದ್ಧಿಪಡಿಸುವುದಕ್ಕೆ ಮತ್ತೊಂದು ಹೆಜ್ಜೆ ಇಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Best Mobiles in India

English summary
Paytm First credit card launched, here’s what it means for users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+