ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್...ಇನ್ ಬಾಕ್ಸ್ ನಲ್ಲಿ ಮನರಂಜನೆಗೆ ಒತ್ತು..!
ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಪೇಟಿಎಂ. ಒನ್97 ಕಮ್ಯುನಿಕೇಷನ್ ಒಡೆತನದಲ್ಲಿರುವ ಪೇಟಿಎಂ ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ತನ್ನ ಪೇಟಿಎಂ ಆಪ್ ನ ಇನ್ ಬಾಕ್ಸ್ ಮೋಡ್ ನಲ್ಲಿ ಭರಪೂರ ಮನರಂಜನೆ ಒದಗಿಸಲು ಮುಂದಾಗಿದೆ.
ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಪೋನ್ ಪೇ ಮುಂತಾದ ಡಿಜಿಟಲ್ ಬ್ಯಾಂಕಿಂಗ್ ಆಪ್ ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿರುವ ಪೇಟಿಎಂಗೆ ವಾಟ್ಸ್ ಆಪ್ ಪೇಮೆಂಟ್ ಕೂಡ ದೊಡ್ಡ ಎದುರಾಳಿಯಾಗುವುದನ್ನು ಅರಿತಿದೆ. ಆದ್ದರಿಂದ ಬಳಕೆದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಎಣೆಯುತ್ತದೆ. ಅದರಂತೆ ಈಗ ತನ್ನ ಇನ್ ಬಾಕ್ಸ್ ಮೋಡ್ ನಲ್ಲಿ ಮನರಂಜನೆ ಜೊತೆ ಮಾಹಿತಿ ತುಂಬಲು ಮುಂದಾಗುತ್ತಿದೆ.


ಇನ್ ಬಾಕ್ಸ್ ನಲ್ಲಿ ಏನೆಲ್ಲಾ ಇರಲಿದೆ?
ಪೇಟಿಎಂ ಇನ್ ಬಾಕ್ಸ್ ನಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಇದ್ದು, ನ್ಯೂಸ್, ಲೈವ್ ಟಿವಿ, ಕ್ರಿಕೆಟ್, ಮನರಂಜನಾ ವಿಡಿಯೋಗಳು ಮತ್ತು ಗೇಮ್ಸ್ ಟ್ಯಾಬ್ಸ್ ಅಳವಡಿಸಲಾಗಿದೆ. ಇನ್ ಬಾಕ್ಸ್ ಪೇಟಿಎಂನಡಿಯಿರುವ ಮೇಸೆಂಜಿಂಗ್ ಸೇವೆಯಾಗಿದೆ. ಈಗ ಮೇಸೆಂಜಿಂಗ್ ಸೇವೆ ಜೊತೆ ಮನರಂಜನೆಯು ಉಚಿತವಾಗಿ ದೊರಕಲಿದೆ.

ಯಾವಾಗ ಕೈ ಸೇರುತ್ತೆ ?
ಹೊಸ ಪೇಟಿಎಂ ಇನ್ ಬಾಕ್ಸ್ ಅನ್ನು iOSನಲ್ಲಿ ಪರಿಚಯಿಸಲಾಗಿದ್ದು, ಮುಂದಿನ ವಾರದ ಹೊತ್ತಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಇನ್ ಬಾಕ್ಸ್ ಅಪಡೇಟ್ ಸಿಗಲಿದೆ. ಇದರ ಮೂಲಕ ಬಳಕೆದಾರರು ಮನರಂಜನೆ ಜೊತೆಗೆ ಬ್ಯಾಂಕಿಂಗ್ ಅನುಭವವನ್ನು ಸವಿಯಬಹುದಾಗಿದೆ.

ಯಾವ್ಯಾವ ಚಾನೆಲ್ ಬರಲಿದೆ ?
ಪೇಟಿಎಂ ಇನ್ ಬಾಕ್ಸ್ ನಲ್ಲಿ ಈಗ ಲೈವ್ ಟಿವಿ ನೋಡಬಹುದಾಗಿದೆ. ಪೇಟಿಎಂ ನೇತೃತ್ವ ವಹಿಸಿಕೊಂಡಿರುವ ಸಂಸ್ಥೆ ಒನ್97 ಕಮ್ಯುನಿಕೇಷನ್ ಹೇಳಿದಂತೆ ಸದ್ಯಕ್ಕೆ ಆಜ್ ತಕ್, ಇಂಡಿಯಾ ಟುಡೇ, 9XM, ಇಟಿ ನೌ ಚಾನೆಲ್ ಗಳು ಲೈವ್ ಟಿವಿ ಸೌಲಭ್ಯವನ್ನು ಬೆಂಬಲಿಸುತ್ತವೆ. ಆದರೆ, ಪೇಟಿಎಂ ಅಧಿಕೃತವಾಗಿ ಚಾನೆಲ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ಬಳಕೆದಾರರ ಆಸಕ್ತಿಗನುಗುಣವಾಗಿ ನ್ಯೂಸ್
ಪೇಟಿಎಂ ಇನ್ ಬಾಕ್ಸ್ ಮೋಡ್ ನಲ್ಲಿರುವ ನ್ಯೂಸ್ ಸೆಕ್ಷನ್ ಗ್ರಾಹಕರ ಆಸಕ್ತಿಗನುಗುಣವಾಗಿ ಸುದ್ದಿಯನ್ನು ವರ್ಗೀಕರಣ ಮಾಡುತ್ತದೆ. ಅದಲ್ಲದೇ ಸುದ್ದಿ ಹುಡುಕಲು ಬ್ರೌಸಿಂಗ್ ಆಯ್ಕೆಯನ್ನು ನೀಡಲಾಗಿದೆಯಂತೆ. ಇದರ ಮೂಲಕ ಪೇಟಿಎಂ ಆಲ್ ಇನ್ ಒನ್ ಆಗಲು ಮುಂದಾಗುತ್ತಿರುವದಂತೂ ಸತ್ಯ.

ಮನರಂಜನಾ ಆಯ್ಕೆ
ಪೇಟಿಎಂ ಇನ್ ಬಾಕ್ಸ್ ಮನರಂಜನೆ ಆಯ್ಕೆಯನ್ನು ನೀಡುತ್ತಿದೆ. ಇದರಲ್ಲಿ ವಿಡಿಯೋಗಳನ್ನು ನೋಡಬಹುದಾಗಿದ್ದು, ಹಂಗಾಮಾದಂತಹ ಥರ್ಡ್ ಪಾರ್ಟಿ ಪಬ್ಲಿಷರ್ಸ್ ಗಳ ವಿಡಿಯೋ ಕಂಟೆಂಟ್ ಅಳವಡಿಸುವ ಸಾಧ್ಯತೆಯಿದೆ. ಇದರಿಂದ ಪೇಟಿಎಂ ಇನ್ಪೋಟೇನ್ ಮೆಂಟ್ ಆಪ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಗೇಮ್ಸ್ ಗೆ ಬಹುದೊಡ್ಡ ಪ್ರತಿಕ್ರಿಯೆ
ಪೇಟಿಎಂ ಇನ್ ಬಾಕ್ಸ್ ನಲ್ಲಿ ಗೇಮ್ ಗಳನ್ನು ಸಹ ಅಳವಡಿಸಲಾಗುತ್ತದೆ. ಈ ಗೇಮ್ ಗಳನ್ನು ಪೇಟಿಎಂ ತನ್ನ ಪರೀಕ್ಷಾರ್ಥ ಬೇಟಾ ಅಪ್ ಡೇಟ್ ನಲ್ಲಿ ನೀಡಿತ್ತು. ಕಂಪನಿಯ ಪ್ರಕಾರ ಬಳಕೆದಾರರರಿಂದ ಬಹುದೊಡ್ಡ ಪ್ರತಿಕ್ರಿಯೆ ಬಂದಿದೆ. ಬೇಟಾ ಆವೃತ್ತಿಯಲ್ಲಿ ಪೆಟ್ರೋಲ್ ಕ್ವಿಜ್, ಸ್ಮಾಷ್ ಕ್ರಿಕೆಟ್ ಮತ್ತು ಪಾಸ್ ದಿ ಥಂಬ್ ನಂತಹ ಆಟಗಳನ್ನು ಅಳವಡಿಸಲಾಗಿತ್ತು.

ಹೊಸ ಅಪ್ ಡೇಟ್ ನಲ್ಲಿರಲಿವೆ ಅದ್ಭುತ ಗೇಮ್ಸ್
120 ಮಿಲಿಯನ್ ಬಳಕೆದಾರರರಿರುವ ಪೇಟಿಎಂ ತನ್ನ ಇನ್ ಬಾಕ್ಸ್ ಹೊಸ ಅಪ್ ಡೇಟ್ ನಲ್ಲಿ ಅದ್ಬೂತ ಗೇಮ್ಸ್ ಗಳಿದ್ದು, ಆಕ್ಷನ್, ಅಡ್ವೇಂಚರ್, ಸ್ಪೋರ್ಟ್ಸ್ ಮತ್ತು ಬುದ್ಧಿವಂತಿಕೆಯ ಆಟಗಳು ಇರಲಿದ್ದು, ಗೇಮ್ಸ್ ಪ್ರಿಯರಿಗೆ ಹೊಸ ಆಯ್ಕೆ ಸಿಕ್ಕಂತಾಗಿದೆ.

ಗ್ರಾಹಕರ ಜೊತೆ ಉತ್ತಮ ಸಂಪರ್ಕ
ಲೈವ್ ಟಿವಿ ಮೂಲಕ ನ್ಯೂಸ್, ಮನರಂಜನೆ ವಿಡಿಯೋಗಳು ಮತ್ತು ಗೇಮ್ಸ್ ನೀಡುತ್ತಿರುವುದು ನಮ್ಮ ಗ್ರಾಹಕರ ಜೊತೆಗಿನ ನಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಭಾರತದ ಸೂಪರ್ ಆಪ್ ಆಗಿ ಪೇಟಿಎಂ ಉದಯಿಸಿದೆ. ಮತ್ತು ನಾವು ಈ ರೀತಿಯ ಆಫರ್ ಗಳನ್ನು ಮುಂದುವರೆಸುತ್ತೇವೆ. ಆದ್ದರಿಂದ ನಮ್ಮ ಬಳಕೆದಾರರು ಪೇಟಿಎಂ ಬಳಸುತ್ತಾರೆ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷ ದೀಪಕ್ ಅಬ್ಬಾಟ್ ಹೇಳುತ್ತಾರೆ.


Click it and Unblock the Notifications