'ಪೇಟಿಎಂ' ನೀಡಿದ ಬಂಪರ್ ಆಫರ್‌ಗೆ ಗ್ರಾಹಕರು ಮತ್ತೊಮ್ಮೆ ಫಿದಾ!!

  ಭಾರತದ ಪ್ರಮುಖ ಮೊಬೈಲ್ ವಾಲೆಟ್ ಕಂಪೆನಿ ಪೇಟಿಎಂ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. ಪೇಟಿಎಂ ಆಪ್ ಮೂಲಕ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿದರೆ ಪ್ರತಿಬಾರಿ ₹ 100ವರೆಗೆ ಪೇಟಿಎಂನಲ್ಲಿ ಹಣ ಪಡೆಯಬಹುದು ಎಂದು ಮೊಬೈಲ್‌ ವಾಲೆಟ್‌ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ ತಿಳಿಸಿದೆ.

  ಯಾವುದೇ ಬ್ಯಾಂಕ್ ಶಾಖೆಯಿಂದ ಇತರೆ ಯಾವುದೇ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆ ಮಾಡಬಹುದಾದ ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಪೇಟಿಎಂ ವ್ಯಾಲೆಟ್‍ಗೆ ಕಳುಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಈ ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ ಹಣಗಳಿಸಬಹುದು ಎಂದು ಒನ್97 ಕಮ್ಯುನಿಕೇಷನ್ಸ್ ತಿಳಿಸಿದೆ.

  'ಪೇಟಿಎಂ' ನೀಡಿದ ಬಂಪರ್ ಆಫರ್‌ಗೆ ಗ್ರಾಹಕರು ಮತ್ತೊಮ್ಮೆ ಫಿದಾ!!

  ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡುವ ಸೌಲಭ್ಯವನ್ನು ಪೇಟಿಎಂ ಕಲ್ಪಿಸಿದೆ. ಹಾಗಾದರೆ, ಪೇಟಿಎಂ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ? ಹಣ ವರ್ಗಾವಣೆ ಹೇಗೆ? ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹಣ ವರ್ಗಾವಣೆ ಹೇಗೆ?ಸ್ಟೆಪ್ 1

  ಪೇಟಿಎಂ ಆಪ್ ತೆರೆಯಿರಿ. ಪಾಸ್ ಬುಕ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮ ಪೇಟಿಎಂ ವಾಲೆಟ್ ನಲ್ಲಿರುವ ಮೊತ್ತವನ್ನು ತೋರಿಸುತ್ತದೆ. ಅಲ್ಲಿ ಕೆಳಗಡೆ ಬ್ಯಾಂಕಿಗೆ ಹಣ ಕಳುಹಿಸಿ(send money) ಮತ್ತು ವಾಲೆಟ್ ಗೆ ಹಣ ಸೇರಿಸಿ(add money) ಆಯ್ಕೆಗಳಿರುತ್ತವೆ. ನಂತರ ಬ್ಯಾಂಕಿಗೆ ಹಣ ಕಳುಹಿಸಿ(send money to bank) ಮೇಲೆ ಕ್ಲಿಕ್ ಮಾಡಿ.

  ಹಣ ವರ್ಗಾವಣೆ ಹೇಗೆ?ಸ್ಟೆಪ್ 2

  ಬ್ಯಾಂಕಿಗೆ ಹಣ ಕಳುಹಿಸಿ(send money to bank) ಮೇಲೆ ಕ್ಲಿಕ್ ಮಾಡಿದ ನಂತರ ಮುಂದಿನ ಪುಟದಲ್ಲಿ ಬಲಗಡೆಯಲ್ಲಿರುವ ವರ್ಗಾವಣೆ ಆಯ್ಕೆಯನ್ನು(transfer option) ಕ್ಲಿಕ್ ಮಾಡಿಪೇಟಿಎಂ ನಿಂದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಾಗಿರುವ ಮೊತ್ತ, ಖಾತೆ ಸಂಖ್ಯೆ, IFSC ಕೋಡ್ ಗಳನ್ನು ನಮೂದಿಸಿದ ನಂತರ ಕೊನೆಯದಾಗಿ ಕಳುಹಿಸಿ(send) ಮೇಲೆ ಕ್ಲಿಕ್ ಮಾಡಿ.

  ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ? ಸ್ಟೆಪ್ 1

  ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿದ ನಂತರ ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ. ಬಿಲ್ ವಿವರವನ್ನು ಪರಿಶೀಲಿಸಿ.

  ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ? ಸ್ಟೆಪ್ 2

  ಬಿಲ್ ವಿವರವನ್ನು ಪರಿಶೀಲಿಸಿ ನಂತರ ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ. 10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

  ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಹಣ ವರ್ಗಾವಣೆ

  ಗ್ರಾಹಕರು ಮತ್ತು ವ್ಯಾಪಾರಿಗಳು ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡುವ ಸೌಲಭ್ಯವನ್ನು ಪೇಟಿಎಂ ಕಲ್ಪಿಸಿದೆ. ಪೇಟಿಎಂ ಆ್ಯಪ್ ಮೂಲಕ ಹಣ ವರ್ಗಾವಣೆಗೆ ‘ಕೆವೈಸಿ'ಯ ಅಗತ್ಯವೂ ಇರುವುದಿಲ್ಲ.ಪೇಟಿಎಂ ಬ್ಯಾಂಕ್ ಟ್ರಾನ್ಸಫರ್ ಮೂಲಕ ಗ್ರಾಹಕರು ಸುಲಭವಾಗಿ ಮತ್ತು ತಕ್ಷಣಕ್ಕೆ ಹಣ ವರ್ಗಾವಣೆ ಮಾಡಬಹುದು

  Riversong Jelly Kids GPS tracker hands-on - GIZBOT KANNADA
  ₹100 ಗಳಿಕೆ ಹೇಗೆ?

  ₹100 ಗಳಿಕೆ ಹೇಗೆ?

  ಪೇಟಿಎಂ ಆಪ್‌ನಲ್ಲಿ ಇರುವ 'ಬ್ಯಾಂಕ್ ಟ್ರಾನ್ಸಫರ್' ಕ್ಲಿಕ್ ಮಾಡಿ ಬ್ಯಾಂಕ್ ಆಯ್ಕೆಮಾಡಿ. ತಕ್ಷಣವೇ ಅದು ಆಯಪ್‍ಗೆ ಸಂಪರ್ಕಗೊಳ್ಳುತ್ತದೆ. ಆಗ ಖಾತೆಗೆ ₹ 10 ಸಂದಾಯವಾಗುತ್ತದೆ. 'ಬ್ಯಾಂಕ್ ಟ್ರಾನ್ಸಫರ್'ನಲ್ಲಿ ಹಣ ಕಳುಹಿಸಬೇಕಾದವರ ಖಾತೆ ಸಂಖ್ಯೆ ಅಥವಾ ಯುಪಿಐ ಐಡಿಗೆ ಹಣವನ್ನು ವರ್ಗಾವಣೆ ಮಾಡಿ. ತಕ್ಷಣವೇ ಪೇಟಿಎಂ ಖಾತೆಗೆ ₹ 50 ಸಂದಾಯವಾಗುತ್ತದೆ.
  ಆಪ್‌ನಲ್ಲಿ 'ಪೇಟಿಎಂ ಭೀಮ್ ಯುಪಿಐ' ಬಳಸಿಕೊಂಡು ಮೊಬೈಲ್ ರೀಚಾರ್ಜ್ ಅಥವಾ ಯಾವುದೇ ಬಿಲ್‍ಗಳನ್ನು ಪಾವತಿ ಮಾಡಿದರೆ ಖಾತೆಗೆ ₹ 30 ಜಮೆ ಆಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  paytm has announced a new cashback offer to promote its recently launched Bank transfers feature. The company is giving a cashback of up to Rs 100 on using the Bank Transfers feature in the app.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more