ಪೇಟಿಎಂನಲ್ಲಿ ಈ ಸ್ಮಾರ್ಟ್‌ಫೋನ್‌ಗಳಿಗೆ ದೊರೆಯುತ್ತಿದೆ 15% ಕ್ಯಾಷ್‌ಬ್ಯಾಕ್..!
ಹೊಸ ಆಂಡ್ರಾಯ್ಡ್ ಫೋನ್ ಖರೀದಿಸಲು ಆಲೋಚನೆ ಮಾಡುತ್ತಿದ್ದಾರಾ ಮತ್ತು ಅತ್ಯುತ್ತಮ ಆಫರ್ ಗಳು, ರಿಯಾಯಿತಿಗಳು ಎಲ್ಲಿದೆ? ಯಾವ ಫೋನ್ ಗಿದೆ ಎಂದು ನೀವು ನೋಡುತ್ತಿದ್ದೀರಾದರೆ ಇಲ್ಲಿದೆ ನೋಡಿ ಸೂಪರ್ ಆಫರ್ ಗಳು.ಭಾರತೀಯ ಇ-ಟೇಲರ್ ಪೇಟಿಮ್ ಮಾಲ್ ಅತ್ಯುತ್ತಮ ರಿಯಾಯಿತಿಯನ್ನು ಕೆಲವು ಸ್ಮಾರ್ಟ್ ಫೋನ್ ಗಳ ಮೇಲೆ ನೀಡುತ್ತಿದೆ.

ಶೇಕಡಾ 15 ರ ಕ್ಯಾಷ್ ಬ್ಯಾಕ್ ರಿಯಾಯಿತಿ ಆಫರ್ ಗಳು ಈ ಕೆಳಗಿನ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ಮೇಲೆ ಲಭ್ಯವಿದೆ. ಓಪೋ, ಮೋಟೋರೊಲಾ ಮತ್ತ ಹಾನರ್ ಸೇರಿದಂತೆ ಹಲವು ಕಂಪೆನಿಯ ಸ್ಮಾರ್ಟ್ ಪೋನ್ ಗಳ ಮೇಲೆ ಈ ಭರ್ಜರಿ ರಿಯಾಯಿತಿ ನಡೆಯುತ್ತಿದೆ. ವಿವರಗಳನ್ನು ತಿಳಿಯಲು ಮುಂದೆ ಓದಿ.

ಓಪೋ ಎಫ್5 ಯ್ಯೂತ್
ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿರುವ ಓಪೋ ಎಫ್5 ಯ್ಯೂತ್ ಫೋನಿನ ಮೇಲೆ ಶೇಕಡಾ 15 ರಷ್ಟು ಕ್ಯಾಷ್ ಬ್ಯಾಕ್ ರಿಯಾಯಿತಿ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲದೆ ಕಂಪೆನಿಯು ಈ ಪೋನಿನ ಮೇಲೆ 3,499 ರುಪಾಯಿಯ ಫ್ಲ್ಯಾಟ್ ಡಿಸ್ಕೌಂಟ್ ಕೂಡ ನೀಡುತ್ತಿದೆ. ಇದರ ಬೆಲೆ 17,999 ರುಪಾಯಿ ಆದರೆ ಗ್ರಾಹಕರು ಈ ಎಲ್ಲಾ ಆಫರ್ ಗಳನ್ನು ಪಡೆದು ಕೇವಲ 14,500 ರುಪಾಯಿಗೆ ಈ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವಿದೆ. ಈ ಕ್ಯಾಷ್ ಬ್ಯಾಕ್ ಸೌಲಭ್ಯ ಪಡೆಯಲು ಗ್ರಾಹಕರು ಹಣ ಪಾವತಿಯ ಸಂದರ್ಬದಲ್ಲಿ MOB15 ಎಂಬ ಪ್ರೋಮೋ ಕೋಡನ್ನು ಬಳಕೆ ಮಾಡಬೇಕು. ಫೋನ್ ಶಿಪ್ ಆದ 24 ಗಂಟೆಯೊಳಗೆ ನಿಮ್ಮ ಕ್ಯಾಷ್ ಬ್ಯಾಕ್ ಹಣ ನಿಮಗೆ ಮರುಪಾವತಿ ಆಗಲಿದೆ.

ಓಪೋ ಎಫ್7 ಡೈಮಂಡ್ ಬ್ಲಾಕ್ ಎಡಿಷನ್
ಓಪೋ ದ ಈ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಕೂಡ ಅತ್ಯುತ್ತಮ ಬೆಲೆಯಲ್ಲಿ ಖರೀದಿಸಲು ಲಭ್ಯವಿದೆ. ಇದರ ಮಾರಾಟದ ಬೆಲೆ 27,990 ಆದರೆ ಈಗ 23,990 ರುಪಾಯಿಗೆ ಖರೀದಿಸುವ ಅವಕಾಶವಿದ್ದು ಫ್ಲ್ಯಾಟ್ ಡಿಸ್ಕೌಂಟ್ 4000 ರುಪಾಯಿ ಸಿಗುತ್ತದೆ ಮತ್ತು MOB15 ಪ್ರೋಮೋ ಕೋಡ್ ಬಳಸಿ ಹೆಚ್ಚುವರಿ ಶೇಕಡಾ15 ರ ರಿಯಾಯಿತಿಯನ್ನೂ ಗ್ರಾಹಕರು ಪಡೆದು ಇನ್ನೂ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ.

ಮೋಟೋ ಜಿ6
ಪೇಟಿಎಮ್ ನ ಕ್ಯಾಷ್ ಬ್ಯಾಕ್ ಆಫರ್ ನಲ್ಲಿ ಮೋಟೋ ಜಿ6 ನ್ನು ಕೂಡ ಅತ್ಯುತ್ತಮ ಬೆಲೆಗೆ ಖರೀದಿಸಬಹುದಾಗಿದೆ. 19,999 ರುಪಾಯಿ ಯ ಈ ಸ್ಮಾರ್ಟ್ ಫೋನ್ ಈಗ 16,998 ರುಪಾಯಿಗೆ ಖರೀದಿಸುವ ಬಂಪರ್ ಆಫರ್ ನಿಮಗೆ ಲಭ್ಯವಿದೆ.ಇದರ ಜೊತೆಗೆ ಗ್ರಾಹಕರು ಶೇಕಡಾ 15 ರ ಹೆಚ್ಚುವರಿ ಕ್ಯಾಷ್ ಬ್ಯಾಕ್ ನ್ನು ಪೇಟಿಎಮ್ ನಲ್ಲಿ MOB15 ಪ್ರೋಮೋ ಕೋಡ್ ಬಳಸಿ ಖರೀದಿಸಿದರೆ 2210 ರುಪಾಯಿಯ ಇನ್ನೂ ಉಳಿಯುತ್ತದೆ.

ಮೋಟೋ ಜಿ6 ಪ್ಲೇ
ಮೋಟೋ ಜಿ6 ಜೊತೆಗೆ ಬಿಡುಗಡೆಗೊಂಡಿರುವ ಮೋಟೋ ಜಿ6 ಪ್ಲೇ ಕೂಡ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ದರದಲ್ಲಿ ಪೇಟಿಎಂನಲ್ಲಿ ಲಭ್ಯವಿದೆ.ಫ್ಲ್ಯಾಟ್ ಡಿಸ್ಕೌಂಟ್ 1,744 ಪಡೆದು ಇದನ್ನು 12,225 ರುಪಾಯಿಗೆ ಖರೀದಿಸಬಹುದು ಮತ್ತು MOB15 ಪ್ರೋಮೋ ಕೋಡ್ ಬಳಸಿ ಇದರ ಜೊತೆಗೆ 1593 ರುಪಾಯಿಯ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಿದೆ. ಗ್ರಾಹಕರು ಇದನ್ನು ಉಪಯೋಗಿಸಿಕೊಳ್ಳಬಹುದು.

ಹಾನರ್ 9 ಲೈಟ್
ಈ ವರ್ಷ ಆರಂಭದಲ್ಲಿ ಬಿಡುಗಡೆಗೊಂಡಿರುವ ಹಾನರ್ 9 ಲೈಟ್ 2018 ರಲ್ಲಿ ಹಾನರ್ ಸಂಸ್ಥೆ ಬಿಡುಗಡೆಗೊಳಿಸಿರುವ ಮೊದಲ ಫೋನ್ ಆಗಿದೆ. ಗ್ಲಾಸ್ ಯುನಿಬಾಡಿ ಡಿಸೈನ್ ಹೊಂದಿರುವ ಈ ಫೋನ್ ಸದ್ಯ ಪೇಟಿಎಮ್ ನಲ್ಲಿ ಶೇಕಡಾ 15 ರ ಕ್ಯಾಷ್ ಬ್ಯಾಕ್ ದರದಲ್ಲಿ ಲಭ್ಯವಿದೆ. ಅದಕ್ಕಾಗಿ ಗ್ರಾಹಕರು MOB15 ಪ್ರೋಮೋ ಕೋಡ್ ಬಳಸಬೇಕು ಮತ್ತು 2,248 ರುಪಾಯಿ ಕ್ಯಾಷ್ ಬ್ಯಾಕ್ ನ್ನು ಅವರು ಇದರಿಂದ ಪಡೆಯಬಹುದು. ಜೊತೆಗೆ ಪ್ಲ್ಯಾಟ್ ಡಿಸ್ಕೌಂಟ್ 2000 ರುಪಾಯಿಗ ದೊರೆಯಲಿದೆ ಹಾಗಾಗಿ ಈ ಮೊಬೈಲ್ 14,988 ರುಪಾಯಿಯ ಬೆಲೆಯಲ್ಲಿ ಗ್ರಾಹಕರು ಖರೀದಿಸುವ ಅವಕಾಶ ಸದ್ಯ ಲಭ್ಯವಿದೆ.

ಹಾನರ್ 7ಎಕ್ಸ್
ಹಾನರ್ 7ಎಕ್ಸ್ ಒಂದು ಬಜೆಟ್ ಸ್ಮಾರ್ಟ್ ಫೋನ್ ಆಗಿದ್ದು ಕಳೆದ ವರ್ಷ ಡಿಸೆಂಬರ್ ನಲ್ಲಿ ಮಾರುಕಟ್ಟೆ ಪ್ರವೇಶ ಮಾಡಿದೆ.ಈ ಡುಯಲ್ ಹಿಂಭಾಗದ ಕ್ಯಾಮರಾ ಒಳಗೊಂಡಿರುವ ಸ್ಮಾರ್ಟ್ ಫೋನ್ ಸದ್ಯ ಶೇಕಡಾ 15 ರ ರಿಯಾಯಿತಿ ದರದಲ್ಲಿ ಲಭ್ಯವಿದೆ. ಗ್ರಾಹಕರು ಪೇಟಿಎಂನಲ್ಲಿ ಶೇಕಡಾ 15 ರ ರಿಯಾಯಿತಿಯನ್ನು ಇದಕ್ಕೆ ಪಡೆಯಬಹುದು ಅದಕ್ಕಾಗಿ MOB15 ಪ್ರೋಮೋ ಕೋಡ್ ಬಳಸಿದರೆ ಅವರಿಗೆ 2516 ರುಪಾಯಿ ರಿಯಾಯಿತಿ ಲಭ್ಯವಾಗುತ್ತದೆ ಮತ್ತು ಸ್ಮಾರ್ಟ್ ಫೋನ್ 16,770 ರುಪಾಯಿಗೆ ಖರೀದಿಸುವ ಅವಕಾಶವಿದೆ.


Click it and Unblock the Notifications