ಕೋವಿಡ್ -19 ವ್ಯಾಕ್ಸಿನ್‌ ಫೈಂಡರ್ ಫೀಚರ್ಸ್‌ ಪರಿಚಯಿಸಿದ ಪೇಟಿಎಂ!

|

ಪ್ರಸ್ತುತ ಭಾರತದಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಕೋವಿಡ್‌ ಲಸಿಕೆಯನ್ನು ಹಾಕಲಾಗುತ್ತಿದೆ. ಇದರ ನಡುವೆ ಭಾರತದಲ್ಲಿ ಕೊರೊನಾ ಎರಡನೇ ಅಲೆ ಕೂಡ ವ್ಯಾಪಕವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಹಲವು ರಾಜ್ಯಗಳು ಲಾಕ್‌ಡೌನ್‌ ಘೋಷಿಸಿವೆ, ಕರ್ನಾಟಕ ರಾಜ್ಯ ಕೂಡ ಹದಿನಾಲ್ಕು ದಿನಗಳ ಕಾಲ ಜನತಾ ಕರ್ಪ್ಯೂ ವಿಧಿಸಿದೆ. ಇನ್ನು ಕೋವಿಡ್‌-19 ವ್ಯಾಕ್ಸಿನೇಷನ್‌ ಕೇಂದ್ರಗಳನ್ನು ಹುಡುಕಲು ಗೂಗಲ್‌ ಸೇರಿದಂತೆ ಹಲವು ವೆಬ್‌ಸೈಟ್‌ಗಳು ಉಪಯುಕ್ತವಾಗಿದೆ. ಇದೀಗ ಪೇಟಿಎಂ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಹೊಸ ಫೀಚರ್ಸ್‌ ಪರಿಚಯಿಸಿದೆ.

ಕೋವಿಡ್‌-19

ಹೌದು, ಕೋವಿಡ್‌-19 ಲಸಿಕೆ ಪಡೆದುಕೊಳ್ಳಲು ನಿಮ್ಮ ಹತ್ತಿರದ ಕೋವಿಡ್‌ ಸೆಂಟರ್‌ ಅನ್ನು ತಿಳಿದುಕೊಳ್ಳುವು ಅತಿ ಅವಶ್ಯಕ. ಇದಕ್ಕಾಗಿ ನೀವು ಆರೋಗ್ಯಾ ಸೇತು, ಕೋವಿನ್‌ ಪೋರ್ಟಲ್‌ ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಇದೀಗ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಪೇಟಿಎಂ ತನ್ನ ಮಿನಿ ಆಪ್ ಸ್ಟೋರ್‌ನಲ್ಲಿ ಕೋವಿಡ್ -19 ವ್ಯಾಕ್ಸಿನ್‌ ಫೈಂಡರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಇದರ ಮೂಲಕ ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಸೆಂಟರ್‌ ಅನ್ನು ಸರ್ಚ್‌ ಮಾಡಬಹುದು. ಹಾಗಾದ್ರೆ ಪೇಟಿಎಂ ಮೂಲಕ ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಸೆಂಟರ್‌ ಅನ್ನು ಸರ್ಚ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

Paytm ಅಪ್ಲಿಕೇಶನ್‌ ಮೂಲಕ ನಿಮ್ಮ ಹತ್ತಿರದ ಕೋವಿಡ್‌-19 ವ್ಯಾಕ್ಸಿನೇಷನ್‌ ಸೆಂಟರ್‌ ಹುಡುಕುವುದು ಸುಲಭವಾಗಿದೆ. ಇದಕ್ಕಾಗಿ ಪೇಟಿಎಂ ವ್ಯಾಕ್ಸಿನ್‌ ಫೈಂಡರ್‌ ಫೀಚರ್ಸ್‌ ಪರಿಚಯಿಸಿದೆ. ಇದರ ಮೂಲಕ ನಿಮ್ಮ ಹತ್ತಿರದ ಕೋವಿಡ್‌-19 ವ್ಯಾಕ್ಸಿನೇಷನ್‌ ಸೆಂಟರ್‌ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ರಿಯಲ್‌ ಟೀ ಆಲರ್ಟ್‌ ಅನ್ನು ಆರಿಸಿಕೊಳ್ಳಬಹುದು. ಇನ್ನು ಈ ಹೊಸ ಸ್ಲಾಟ್‌ಗಳನ್ನು ಪದೇ ಪದೇ ಪರಿಶೀಲಿಸಲು ಪ್ಲಾಟ್‌ಫಾರ್ಮ್‌ ರಿಫ್ರೆಶ್ ಮಾಡುವ ತೊಂದರೆಯನ್ನು ಕಡಿಮೆ ಮಾಡಲು ಈ ಪ್ರಕ್ರಿಯೆಯು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಕೋವಿನ್ ಎಪಿಐನಿಂದ ಡೇಟಾವನ್ನು ರಿಯಲ್‌-ಟೈಂ ಆಧಾರದ ಮೇಲೆ ಪಡೆಯಲಾಗುತ್ತದೆ ಎಂದು ಪೇಟಿಎಂ ಸ್ಪಷ್ಟಪಡಿಸಿದೆ.

ಪೇಟಿಎಂ

ನಿಮ್ಮ ಹತ್ತಿರದ ಪ್ರದೇಶದಲ್ಲಿ COVID ಲಸಿಕೆ ಸ್ಲಾಟ್‌ಗಳನ್ನು ಕಂಡುಹಿಡಿಯಲು ನಾವು ಹೊಸ ಫೀಚರ್ಸ್‌ ಪರಿಚಯಿಸಿದ್ದೇವೆ. ಇದರಲ್ಲಿ ಹೊಸ ಸ್ಲಾಟ್‌ಗಳು ತೆರೆದಾಗ ಆಲರ್ಟ್‌ಗಳನ್ನು ಸೆಟ್‌ ಮಾಡಿದ್ದೇವೆ ಎಂದು ಪೇಟಿಎಂ ಸಂಸ್ಥೆ ಹೇಳಿಕೊಂಡಿದೆ. ಆದರೆ ಪೇಟಿಎಂ ಅಪ್ಲಿಕೇಶನ್‌ನಿಂದ ವ್ಯಾಕ್ಸಿನೇಷನ್‌ಗಾಗಿ ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಸರ್ಕಾರಿ ಅಪ್ಲಿಕೇಶ್‌ಗಳಾದ ಆರೋಗಾ ಸೇತು, ಉಮಾಂಗ್, ಮತ್ತು ಕೋವಿನ್ ಮೂಲಕ ಲಭ್ಯವಿದೆ.

Paytm ಮೂಲಕ ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಕೇಂದ್ರವನ್ನು ತಿಳಿಯುವುದು ಹೇಗೆ?

Paytm ಮೂಲಕ ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಕೇಂದ್ರವನ್ನು ತಿಳಿಯುವುದು ಹೇಗೆ?

ಹಂತ:1 ನಿಮ್ಮ ಫೋನ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ. ಮಿನಿ ಆಪ್ ಸ್ಟೋರ್ ವಿಭಾಗಕ್ಕೆ ಹೋಗಿ.

ಹಂತ:2 ವ್ಯಾಕ್ಸಿನ್‌ ಫೈಂಡರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ:3 ನಿಮ್ಮ ಪ್ರದೇಶದಲ್ಲಿ ಲಭ್ಯತೆ ಇದೆಯೇ ಎಂದು ಪರಿಶೀಲಿಸಲು ನಿಮ್ಮ ಪಿನ್ ಕೋಡ್ ನಮೂದಿಸಿ.

ಹಂತ:4 ಹೆಚ್ಚಿನ ಹುಡುಕಾಟಕ್ಕಾಗಿ "ಸರ್ಚ್‌ ಬೈ ಡಿಸ್ಟ್ರಿಕ್ಟ್‌" ಟ್ಯಾಪ್ ಮಾಡಿ.

ಹಂತ:5 ನಿಮ್ಮ ಪ್ರದೇಶದಲ್ಲಿ "Notify me when slots are available" ಗಾಗಿ ನೀವು ಸೈನ್ ಅಪ್ ಮಾಡಬಹುದು.

Best Mobiles in India

English summary
Paytm users can now sign up for real-time notifications for the availability of Covid-19 vaccines in their area.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X