Paytm ಆಪ್‌ನಲ್ಲಿ ಹೊಸ ಆಫರ್: ಪ್ರತಿ ಪಾವತಿಗೂ ಗೋಲ್ಡ್ ರಿವಾರ್ಡ್!
ಭಾರತದ ಪ್ರಮುಖ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ Paytm ತನ್ನ ಆಪ್‌ಗೆ ಹೊಸ ವಿನ್ಯಾಸ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಹೊಸ ಅಪ್‌ಡೇಟ್ ನಿಂದ Paytm ಆಪ್ ಅನ್ನು ಹೆಚ್ಚು ವೇಗದ, ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸುವ ಉದ್ದೇಶವನ್ನು ಹೊಂದಿದ್ದು, ಹಲವಾರು ಬದಲಾವಣೆಗಳನ್ನು ತರಲಾಗಿದೆ. ಜೊತೆಗೆ, ಈ ಹೊಸ ಆವೃತ್ತಿಯ ಪ್ರಮುಖ ಆಕರ್ಷಣೆಯಾಗಿ ಪ್ರತಿ ಪಾವತಿಗೂ ಡಿಜಿಟಲ್ ಚಿನ್ನದ ಬಹುಮಾನ (Digital Gold Reward) ನೀಡುವ ವ್ಯವಸ್ಥೆಯನ್ನು ತರಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಹೊಸ ವಿನ್ಯಾಸ: ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿ ಒಂದೇ ಜಾಗದಲ್ಲಿ
ಪೇಟಿಎಂ ಆಪ್ ಈಗ 'ಟೋಟಲ್ ಬ್ಯಾಲೆನ್ಸ್' ಎಂಬ ಹೊಸ ಡ್ಯಾಶ್‌ಬೋರ್ಡ್ ಅನ್ನು ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ತಮ್ಮ ಎಲ್ಲಾ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳ ಹಣವನ್ನು ಒಂದೇ ಜಾಗದಲ್ಲಿ ಪರಿಶೀಲಿಸಬಹುದು. ಇದು ಪ್ರತ್ಯೇಕ ಬ್ಯಾಂಕ್ ಆಪ್ ತೆರೆಯುವ ಅವಶ್ಯಕತೆಯನ್ನು ನಿವಾರಿಸುತ್ತದೆ. ಪೇಟಿಎಂ ಪ್ರಕಟಣೆಯ ಪ್ರಕಾರ, ಈ ಹೊಸ ಇಂಟರ್‌ಫೇಸ್ ಹೆಚ್ಚು ಸ್ಪಷ್ಟ ವಿನ್ಯಾಸ ಹೊಂದಿದ್ದು, ಬಳಕೆದಾರರಿಗೆ ತಮ್ಮ ವ್ಯವಹಾರಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ.
AI ಆಧಾರಿತ ವೈಶಿಷ್ಟ್ಯಗಳು: ಹಣಕಾಸಿನ ನಿಯಂತ್ರಣಕ್ಕೆ ಸಹಾಯ
ಪೇಟಿಎಂ ಆಪ್ ಹೊಂದಿರುವ ಹೊಸ ಅಪ್ಡೇಟ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಪೇಟಿಎಂ ಈಗ ಖರ್ಚುಗಳನ್ನು ಶಾಪಿಂಗ್, ಟ್ರಾವೆಲ್, ಬಿಲ್ ಪೇಮೆಂಟ್ ಮುಂತಾದ ವಿಭಾಗಗಳಲ್ಲಿ ಸ್ವಯಂಚಾಲಿತವಾಗಿ ವರ್ಗೀಕರಿಸುತ್ತದೆ.'ಮಂತ್ಲಿ ಸ್ಪೆಂಡ್ ಸಮ್ಮರಿ' ಎಂಬ ವಿಭಾಗದಲ್ಲಿ ತಿಂಗಳಾದ್ಯಂತದ ಖರ್ಚಿನ ಸಂಪೂರ್ಣ ವಿವರ ಸಿಗುತ್ತದೆ. ಜೊತೆಗೆ ಹಳೆಯ ಪಾವತಿಗಳನ್ನು ಹುಡುಕಲು ಪೇಮೆಂಟ್ ಸರ್ಚ್ ಆಯ್ಕೆ ಸಹಕಾರಿ. ಇದರಿಂದ ಬಳಕೆದಾರರು ತಮ್ಮ ಹಣಕಾಸಿನ ಯೋಜನೆಯನ್ನು ಸುಲಭವಾಗಿ ರೂಪಿಸಬಹುದು.

ಮ್ಯಾಜಿಕ್ ಪೇಸ್ಟ್ ಫೀಚರ್: ಪಾವತಿಗಳು ಈಗ ಇನ್ನಷ್ಟು ವೇಗ
- ಪೇಟಿಎಂ "ಮ್ಯಾಜಿಕ್ ಪೇಸ್ಟ್" ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದು WhatsApp ಅಥವಾ ಇತರ ಆಪ್‌ಗಳಿಂದ ಕಾಪಿ ಮಾಡಿದ ಪಾವತಿ ವಿವರಗಳನ್ನು ಸ್ವಯಂಚಾಲಿತವಾಗಿ ಟ್ರಾನ್ಸ್‌ಫರ್ ಫಾರ್ಮ್‌ನಲ್ಲಿ ತುಂಬುತ್ತದೆ.
- ಇನ್ನೊಂದು ಉಪಯುಕ್ತ ಆಯ್ಕೆಯಾದ 'ರಿಸೀವ್ ಮನಿ ವಿಡ್ಜೆಟ್' ಅನ್ನು ಸಹ ಈಗ ಹೋಮ್‌ಸ್ಕ್ರೀನ್‌ನಲ್ಲಿ ಸೇರಿಸಬಹುದು. ಇದರಿಂದ ಆಪ್ ತೆರೆಯದೆ QR ಕೋಡ್ ಮೂಲಕ ಹಣ ಸ್ವೀಕರಿಸಬಹುದು.
- ಜೊತೆಗೆ "ಗೋಲ್ಡ್ ಕಾಯಿನ್ಸ್" ಯೋಜನೆಯಡಿ ಪ್ರತಿಯೊಂದು ಪಾವತಿಗೂ ಡಿಜಿಟಲ್ ಚಿನ್ನವನ್ನು (digital gold reward) ಬಹುಮಾನವಾಗಿ ನೀಡುವುದಾಗಿ ತಿಳಿಸಿದೆ. ಇದನ್ನು ಆಪ್‌ನಲ್ಲಿಯೇ ಡಿಜಿಟಲ್ ಚಿನ್ನವಾಗಿ ಪರಿವರ್ತಿಸಬಹುದು ಎಂದು ಪೇಟಿಎಂ ಹೇಳಿದೆ.
NRI ಬಳಕೆದಾರರಿಗೆ ಬೆಂಬಲ
ಪೇಟಿಎಂ ಈಗ 12 ದೇಶಗಳ ಎನ್‌ಆರ್‌ಐ (NRI) ಬಳಕೆದಾರರಿಗೂ ಬೆಂಬಲ ನೀಡುತ್ತಿದೆ. ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆ ಹೊಂದಿರುವವರು ಯಾವುದೇ ಹೆಚ್ಚುವರಿ ಫಾರೆಕ್ಸ್ ಶುಲ್ಕವಿಲ್ಲದೆ ಭಾರತದಲ್ಲಿ ಪಾವತಿಗಳನ್ನು ಮಾಡಬಹುದು.ಅದರ ಜೊತೆಗೆ, "ಪೇಟಿಎಂ ಪ್ಲೇಬ್ಯಾಕ್" ಎಂಬ ವಿಶಿಷ್ಟ ಫೀಚರ್ ಬಳಕೆದಾರರ ಇತ್ತೀಚಿನ ಖರ್ಚುಗಳ ಆಧಾರದ ಮೇಲೆ AI ಮೂಲಕ ಸೃಷ್ಟಿಸಲಾದ ವೈಯಕ್ತಿಕ ರ್ಯಾಪ್ ಸಾಂಗ್ ಅನ್ನು ನೀಡುತ್ತದೆ.! ಒಟ್ಟಾರೆ ಸಾರಾಂಶವಾಗಿ, ಪೇಟಿಎಂ ಹೊಸ ಆವೃತ್ತಿ ಡಿಜಿಟಲ್ ಪಾವತಿಯ ಹೊಸ ಅಧ್ಯಾಯವನ್ನು ತೆರೆಯಲು ಸಿದ್ಧವಾಗಿದೆ. ಈ ಹೊಸ ಅಪ್ಡೇಟ್ ಪೇಟಿಎಂ ಬಳಕೆದಾರರಿಗೆ ಸುಗಮ, ಬುದ್ಧಿವಂತ ಮತ್ತು ಆಕರ್ಷಕ ಅನುಭವವನ್ನು ನೀಡುವ ಭರವಸೆಯನ್ನು ತಂದಿದೆ. ಈ ಬದಲಾವಣೆಯು ಪೇಟಿಎಂ ಬಳಕೆಯನ್ನು ಹೆಚ್ಚಿಸಲಿದೆಯೇ? ಎಂಬುದನ್ನು ಕಾದುನೋಡಬೇಕು.


Click it and Unblock the Notifications