Home
ಸುದ್ದಿಜಾಲ

ಪೇಟಿಎಂ ಮೂಲಕ ಈಗ ಕಾರುಗಳನ್ನು ಸಹ ಖರೀದಿಸಬಹುದು!

ಆನ್‌ಲೈನಿನಲ್ಲಿ ಬೈಕ್ ಬುಕ್ ಮಾಡುವ ಸೌಲಭ್ಯವನ್ನು ನೀಡಿದ್ದ ಪೇಟಿಎಂ ಸಂಸ್ಥೆ ಇದೀಗ ಆನ್‌ಲೈನಿನಲ್ಲೇ ಕಾರನ್ನು ಖರೀದಿಸುವ ಆಯ್ಕೆಯನ್ನು ತಂದಿದೆ. ಇದೀಗ 'ಅಂತರ್ಜಾಲ ತಾಣ ಅಥವಾ ಮೊಬೈಲ್ ಆಪ್ ಮೂಲಕ ₹ 10 ಸಾವಿರ ಮುಂಗಡ ಪಾವತಿಸಿ ಕಾರ್‌ ಬುಕಿಂಗ್ ಮಾಡಬಹುದು. ಸಮೀಪದ ಡೀಲರ್ ಬಳಿ‌ ಬಾಕಿ ಹಣ ಪಾವತಿಸಿ ಕಾರ್‌ ಖರೀದಿಸಬಹುದು' ಎಂದು ಪೇಟಿಎಂ ಮಾಲ್‌ನ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೊಥೆ ತಿಳಿಸಿದ್ದಾರೆ.

ಹೌದು, ಪೇಟಿಎಂ ಮಾಲ್ ನಲ್ಲಿ ಆನ್ಲೈನ್ ಮೂಲಕ ರೆನೊ ಕಂಪನಿಯ ಕಾರುಗಳನ್ನು ಖರೀದಿಸುವ ಸೌಲಭ್ಯಗೆ ಚಾಲನೆ ದೊರೆತಿದ್ದು, ಪೇಟಿಎಂ ಸಂಸ್ಥೆ ಒಡೆತನದ ಪೇಟಿಎಂ ಮಾಲ್ ಮತ್ತು ರೆನೊ ಕಂಪನಿಗಳು ಸಹಭಾಗಿತ್ವ ಹೊಂದಿವೆ. ಹಾಗಾಗಿ, ರೆನೊ ಕಂಪನಿಯ ಕಾರುಗಳ ಖರೀದಿಯನ್ನು ಸುಲಭವಾಗಿಸುವ ಉದ್ದೇಶದಿಂದ ಪೇಟಿಎಂ ಮಾಲ್ ಡಿಜಿಟಲ್ ಎಕ್ಸ್‌ಪೀರಿಯನ್ಸ್ ಝೋನ್ ಪರಿಚಯಿಸಿದೆ. ಇದರಿಂದ ಕೇವಲ 10 ಸಾವಿರ ಮುಂಗಡ ಪಾವತಿಸಿ ರೆನೊ ಕಾರ್‌ ಬುಕಿಂಗ್ ಮಾಡಬಹುದಾಗಿದೆ.

ಪೇಟಿಎಂ ಮೂಲಕ ಈಗ ಕಾರುಗಳನ್ನು ಸಹ ಖರೀದಿಸಬಹುದು!

ಪೇಟಿಎಂ ಮಾಲ್‌ನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿದ ಮೊದಲ ಸಂಸ್ಥೆಯಾಗಿ ರೆನೊ ಗುರುತಿಸಿಕೊಂಡಿದ್ದು, ಪೇಟಿಎಂ ಮಾಲ್‌ನಲ್ಲಿ ಲಿಸ್ಟ್ ಮಾಡಲಾದ ಮೊದಲ ಫೊರ್ ವೀಲರ್ ಕಾರ್ ಬ್ರ್ಯಾಂಡ್ ರೆನೊ ಆಗಿದೆ. ಪೇಟಿಎಂ ತಾಣದಲ್ಲಿ ಅಥವಾ ಪೇಟಿಎಂ ಮೊಬೈಲ್ ಆಪ್ ಮೂಲಕ ಲಾಗಿನ್ ಆಗಿ ರೆನೊ‌ ಕಂಪನಿಯ ಕಾರುಗಳನ್ನು ಬುಕಿಂಗ್ ಮಾಡಬಹುದು. ಜೊತೆಗೆ ಗ್ರಾಹಕರು ಕಾರು ಖರೀದಿಸುವಾಗ ಸಂಶೋಧನೆ ಹಾಗೂ ಹೋಲಿಕೆ ಮಾಡಿ ತಮ್ಮಿಷ್ಟದ ಕಾರನ್ನು ಖರೀದಿಸಬಹುದಾಗಿದೆ.

ನಮ್ಮ ವೇದಿಕೆಯಲ್ಲಿ ಕಾರು ಬುಕಿಂಗ್ ಸೇವೆಗೆ ಚಾಲನೆ ನೀಡಲು ರೆನೊ ಸಂಸ್ಥೆಯ ಜೊತೆ ಸಹಭಾಗಿತ್ವ ಹೊಂದಿರುವುದು ನಮಗೆ ಅತೀವ ಸಂತಸ ತಂದಿದೆ. ರೆನೊ ಸಂಸ್ಥೆಯು ವೇಗವಾಗಿ ‌ಬೆಳೆಯುತ್ತಿದ್ದು ಈ ಸಂಸ್ಥೆಯ ಕಾರುಗಳು ಪ್ರಸಿದ್ಧಿ ಹೊಂದಿವೆ. ಕಾರು ಬುಕಿಂಗ್ ಪ್ರಕ್ರಿಯೆಯನ್ನು ಸುಲಭವಾಗಿಸಲು ರೆನೊ ಜೊತೆಗಿನ ಸಹಭಾಗಿತ್ವ ಅನುಕೂಲವಾಗಲಿದೆ ಎಂದು ಪೇಟಿಎಂ ಮಾಲ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಶ್ರೀನಿವಾಸ್ ಮೊಥೆ ಅವರು ಹೇಳಿದ್ದಾರೆ.

ಪೇಟಿಎಂ ಮೂಲಕ ಈಗ ಕಾರುಗಳನ್ನು ಸಹ ಖರೀದಿಸಬಹುದು!

ಗ್ರಾಹಕರು ಆನ್‌ಲೈನಿನಲ್ಲಿ ಸಂಶೋಧನೆ ಹಾಗೂ ಹೋಲಿಕೆ ಮಾಡಿ ತಮ್ಮಿಷ್ಟದ ಕಾರನ್ನು ಬೆರಳ ತುದಿಯಲ್ಲಿ ಬುಕಿಂಗ್ ಮಾಡಬಹುದಾದ್ದರಿಂದ ಇದೊಂದು ಮಹತ್ತರ ಯೋಜನೆಯಾಗಲಿದೆ. ಆನ್‌ಲೈನಿನಲ್ಲಿ ಕೇವಲ 10,000 ಮುಂಗಡ ಪಾವತಿ ಮಾಡಿ‌ ಕಾರನ್ನು ಖರೀದಿಸುವ ಆಯ್ಕೆಯನ್ನು ಇದೇ ಮೊದಲ ಬಾರಿಗೆ ಆನ್‌ಲೈನ್ ತಾಣವೊಂದು ಪರಿಚಯಿಸಿದೆ. ನೀವೂ ಕಾರು ಪ್ರಿಯರಾಗಿದ್ದರೆ, ಇದೊಂದು ಅತ್ಯುತ್ತಮ ಅವಕಾಶ ಕೂಡ ಎಂದು ಹೇಳಬಹುದು.

Best Mobiles in India

English summary
Paytm Mall has entered into a strategic partnership with Renault providing seamless car booking and payment solution on its platform. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+