Subscribe to Gizbot

ಮೇ 23ಕ್ಕೇ ಪೇಟಿಎಂ ಪೇಮೆಂಟ್ ಬ್ಯಾಂಕ್ ಓಪನ್!!...ತಿಳಿಯಬೇಕಿರುವ ಮಾಹಿತಿಗಳೇನು!!?

Written By:

ಡಿಜಿಟಲ್ ಪೇಮೆಂಟ್ ದಿಕ್ಕನ್ನೆ ಬದಲಾಯಿಸಿದ ಪೇಟಿಎಂ ಇದೀಗ ತನ್ನದೇ ಪೇಟಿಎಂ ಪೇಮೆಂಟ್ ಬ್ಯಾಂಕ್ ತೆರೆದಿದೆ. ಒನ್97 ಕಮ್ಯುನಿಕೇಶನ್ ಸಹಯೋಗದೊಂದಿಗೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (PPBL) ತೆರೆದಿದ್ದು, ಇದೇ ತಿಂಗಳ 23 ನೇ ತಾರೀಖು ಪೇಟಿಎಂ ಕಾರ್ಯಾಚರಣೆ ಶುರುವಾಗಲಿದೆ.!!

ಸಾಂಪ್ರದಾಯಿಕ ಬ್ಯಾಂಕ್‌ಗಳ ಜತೆಗೆ ಸ್ಪರ್ಧೆಗೆ ಇಳಿಯುವ ಉದ್ದೇಶ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಇಲ್ಲ. ನಮ್ಮ ಬ್ಯಾಂಕಿಂಗ್‌ ಸೇವೆ ಹೊಸ ಮಾದರಿಯಲ್ಲಿ ಇರಲಿದೆ. ಇದುವರೆಗೆ ಬ್ಯಾಂಕಿಂಗ್‌ ಸೌಲಭ್ಯದಿಂದ ವಂಚಿತರಾದವರನ್ನು ಬ್ಯಾಂಕ್‌ ವ್ಯಾಪ್ತಿಗೆ ತರುವುದು ನಮ್ಮ ಉದ್ದೇಶವಾಗಿದೆ. 2020ರ ವೇಳೆಗೆ 50 ಕೋಟಿ ಗ್ರಾಹಕರನ್ನು ತಲುಪುವ ಗುರಿ ನಿಗದಿಪಡಿಸಲಾಗಿದೆ ಎಂದು ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ತಿಳಿಸಿದ್ದಾರೆ.

ಇನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್‌ನಲ್ಲಿ ಇಟ್ಟಹಣಕ್ಕೆ ಬಡ್ಡಿಯನ್ನು ಸಹ ಪಡೆಯಬಹುದಾಗಿದ್ದು, ಆದರೆ ಏರ್‌ಟೆಲ್‌ನಂತೆ ಬಡ್ಡಿ ಹಣದ ದರವನ್ನು ಪೇಟಿಎಂ ತಿಳಿಸಿಲ್ಲ. ಆದರೆ, ಪೇಟಿಎಂ ಮತ್ತು ಪೇಟಿಎಂ ಬ್ಯಾಂಕ್ ನಡುವಿನ ವ್ಯವಹಾರದ ಬಗ್ಗೆ ಹಲವು ಪ್ರಶ್ನೆಗಳಿಗೆ ಪೇಟಿಎಂ ಉತ್ತರಿಸಿದ್ದು, ಅವುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೆಟಿಎಂ ವಾಲೆಟ್ ನಲ್ಲಿರುವ ನನ್ನ ಹಣ ಏನಾಗುತ್ತದೆ?

ಪೆಟಿಎಂ ವಾಲೆಟ್ ನಲ್ಲಿರುವ ನನ್ನ ಹಣ ಏನಾಗುತ್ತದೆ?

ನಿಮ್ಮ ಹಣ ಪೆಟಿಎಂ ವಾಲೆಟ್ ನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ . ಇದು ಯಾವಾಗಲೂ ನಿಮ್ಮದು ಮತ್ತು ನೀವು ಎಂದಿಗೂ ಕಳೆದುಕೊಳ್ಳುವುದಿಲ್ಲ. ನಿಮ್ಮ ಪ್ರಸ್ತುತ ಪೆಟಿಎಂ ವಾಲೆಟ್ ನಲ್ಲಿ ಯಾವುದೇ ಬ್ಯಾಲೆನ್ಸ್ ಹೊಂದಿದ್ದರೆ, ಅದು ನಿಮ್ಮ ಹೊಸ ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ನಲ್ಲಿ ಪ್ರತಿಬಿಂಬಿಸುತ್ತದೆ ನಿಮ್ಮ ವಾಲೆಟ್ ಕಳೆದ ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದು ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೆ, ನೀವು ಅಪ್ಲಿಕೇಶನ್, ವೆಬ್ ಅಥವಾ ಇಮೇಲ್ ಮೂಲಕ ಲಾಗ್ ಇನ್ ಮಾಡುವಾಗ ನಿರ್ದಿಷ್ಟವಾಗಿ ಅನುಮತಿ ನೀಡುವವರೆಗೆ ಇದು ಪೆಟಿಎಂ ಪೇಮೆಂಟ್ ಬ್ಯಾಂಕ್ ವಾಲೆಟ್ ಗೆ ವರ್ಗಾವಣೆ ಆಗುವುದಿಲ್ಲ.

ಪೆಟಿಎಂ ಪೇಮೆಂಟ್ ಬ್ಯಾಂಕ್ ಜೊತೆ ನಾನು ಒಂದು ಬ್ಯಾಂಕ್ ಖಾತೆಯನ್ನು ಪಡೆಯುತ್ತೇನೆ?

ಪೆಟಿಎಂ ಪೇಮೆಂಟ್ ಬ್ಯಾಂಕ್ ಜೊತೆ ನಾನು ಒಂದು ಬ್ಯಾಂಕ್ ಖಾತೆಯನ್ನು ಪಡೆಯುತ್ತೇನೆ?

ಇಲ್ಲ. ಇದು ಪೆಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ಎಂಬ ಹೊಸ ಕಂಪನಿಗೆ ವಾಲೆಟ್ ಮಾಲೀಕತ್ವವನ್ನು ಕೇವಲ ವರ್ಗಾವಣೆ ಮಾಡುವುದು. ಒಮ್ಮೆ ನಾವು ಬ್ಯಾಂಕ್ ಬಿಡುಗಡೆಗೊಳಿಸಿದ ನಂತರ, ನೀವು ನಮ್ಮೊಂದಿಗೆ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲು ಆಯ್ಕೆಯನ್ನು ನೀಡಲಾಗುವುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Having a Paytm Wallet does not translate into an automatic Bank Account, which will have to be opened like a usual account.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot