Just In
Don't Miss
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Sports
ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ
- Automobiles
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- Lifestyle
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥಾ ಆಹಾರಗಳಿಂದ ದೂರವಿರಿ
- Movies
ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಪಕ ಆಸ್ಪತ್ರೆಗೆ ದಾಖಲು: ಹೇಗಿದೆ ಸ್ಥಿತಿ?
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಪೇಟಿಎಂಗೆ ಬಿಗ್ ಶಾಕ್! 1 ಕೋಟಿ ದಂಡ ವಿಧಿಸಿದ ಆರ್‌ಬಿಐ!
ಜನಪ್ರಿಯ ನಗದು ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಪೇಟಿಎಂಗೆ ಆರ್‌ಬಿಐ ಬಿಗ್ ಶಾಕ್ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮೇಲೆ 1 ಕೋಟಿ ರೂ. ದಂಡ ವಿಧಿಸಿದೆ. ಅಲ್ಲದೆ ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವಿಸಸ್ ಮೇಲೆ 27.78 ಲಕ್ಷ ದಂಡ ವಿಧಿಸಿದೆ. ವಾಸ್ತವಿಕ ಸ್ಥಿತಿಯನ್ನು ಒಳಗೊಂಡ ಮಾಹಿತಿ ಸಲ್ಲಿಸದ ಕಾರಣಕ್ಕೆ ಪೇಟಿಎಂ ಮೇಲೆ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಹೌದು, ಪೇಟಿಎಂ ಮೇಲೆ ಆರ್‌ಬಿಐ ದಂಡಾಸ್ತ್ರ ಪ್ರಯೋಗಿಸಿದೆ. ಆರ್‌ಬಿಐ ಅಂತಿಮ ದೃಡೀಕರಣ ಪ್ರಮಾಣಪತ್ರ (CoA) ವಿತರಣೆಗಾಗಿ ಪೇಟಿಎಂನ ಅರ್ಜಿಯನ್ನು ಪರಿಶೀಲಿಸಿದಾಗ, ದೋಷ ಕಂಡುಬಂದಿದೆ. "ಇದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯಿದೆ, 2007 ರ ಸೆಕ್ಷನ್ 26 (2) ರಲ್ಲಿ ಉಲ್ಲೇಖಿಸಲಾಗಿರುವ ಅಪರಾಧವಾಗಿದೆ. ಆದರಿಂದ ಆರ್‌ಬಿಐ ದಂಡ ವಿಧಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಆರ್‌ಬಿಐ PPBL ಗೆ ನೋಟಿಸ್ ನೀಡಿದೆ. ಹಾಗಾದ್ರೆ ಆರ್‌ಬಿಐ ಪೇಟಿಎಂಗೆ ದಂಡ ವಿಧಿಸಲು ಪ್ರಮುಖ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆರ್‌ಬಿಐ ಪೇಟಿಎಂ ಸಲ್ಲಿಸಿದ್ದ CoA ಅರ್ಜಿಯನ್ನು ಪರಿಶೀಲಿಸಿದ ನಂತರ ಒಂದು ಕೋಟಿ ಮೊತ್ತದ ದಂಡವನ್ನು ವಿಧಿಸಿದೆ. ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಲಿಖಿತ ಪ್ರತಿಕ್ರಿಯೆಗಳು ಮತ್ತು ಮೌಖಿಕ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ, ಆರ್‌ಬಿಐ ಈ ದಂಡವನ್ನು ವಿಧಿಸಿದೆ. ಅಕ್ಟೋಬರ್ 1 ರಂದು ನೋಟಿಸ್ ಮೂಲಕ ಪಿಪಿಬಿಎಲ್ ಮೇಲೆ 1 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ. ದೇಶದಲ್ಲಿ ಮಾರ್ಕೆಟಿಂಗ್ ಪ್ರಚಾರ ನಡೆಸುತ್ತಿರುವ ಪೇಟಿಎಂಗೆ ಇದು ಬಿಗ್ ಶಾಕ್ ಅಂತಾನೇ ಹೇಳಬಹುದಾಗಿದೆ. ವಿತ್ತೀಯ ನೀತಿಯಲ್ಲಿ ಕೆಲವು ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಇನ್ನು ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವೀಸಸ್ ಮೇಲೂ ಕೂಡ ಆರ್‌ಬಿಐ ದಂಡವನ್ನು ವಿಧಿಸಿದೆ. ಕಂಪನಿಯು 2019 ಮತ್ತು 2020 ರ ಅವಧಿಯಲ್ಲಿ ಪ್ರತಿ ಫಲಾನುಭವಿಗೆ 30 ರವಾನೆಯ ಸೀಲಿಂಗ್ ಉಲ್ಲಂಘಿಸಿದ ಪ್ರಕರಣಗಳನ್ನು ಆರ್‌ಬಿಐ ವರದಿ ಮಾಡಿದೆ. ಈ ಅವಧಿಯಲ್ಲಿ ನಡೆದಿರುವ ನಿಯಮ ಉಲ್ಲಂಘನೆಯ ಆಧಾರದ ಮೇಲೆ 27.78 ಲಕ್ಷ ದಂಡ ವಿಧಿಸಿದೆ. ಕಪೌಂಡಿಂಗ್ ಅರ್ಜಿಯನ್ನು ವಿಶ್ಲೇಷಿಸಿದ ನಂತರ ಮತ್ತು ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮೌಖಿಕ ಸಲ್ಲಿಕೆಗಳನ್ನು ಅನುಸರಿಸಿದ ನಂತರ ವಿತ್ತೀಯ ದಂಡವನ್ನು ವಿಧಿಸುವುದನ್ನು ಆರ್‌ಬಿಐ ನಿರ್ಧರಿಸಿದೆ. ಇನ್ನು ಆರ್‌ಬಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ಪೇಟಿಎಂ ಯಾವ ನಿರ್ಧಾರ ತೆಗೆದುಕೊಂಡಿದೆ ಅನ್ನೊದು ಬಹಿರಂಗವಾಗಿಲ್ಲ.

ಇದರ ನಡುವೆಯೂ ಹಬ್ಬದ ಸಮಯದಲ್ಲಿ ಮಾರ್ಕೆಟಿಂಗ್ ಅಭಿಯಾನಗಳಿಗಾಗಿ ಪೇಟಿಎಂ 100 ಕೋಟಿ ರೂ ವೆಚ್ಚ ಮಾಡುತ್ತಿದೆ. ತನ್ನ ಮಾರ್ಕೆಟಿಂಗ್ ಪ್ರಚಾರಕ್ಕಾಗಿಯೇ 100 ಕೋಟಿಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಕ್ಯಾಶ್‌ಬ್ಯಾಕ್ ಆಫರ್, ಯುಪಿಐ ಪ್ರಚಾರ, ಪೋಸ್ಟ್‌ಪೇಯ್ಡ್ ಸೇವೆ 'Buy Now, Pay Later' ಮತ್ತು ವಾಲೆಟ್ ವ್ಯವಹಾರಗಳಿಗೆ ಈ ಹಣ ಖರ್ಚು ಆಗಲಿದೆ ಎನ್ನಲಾಗಿದೆ. ಭಾರತದ ಎಲ್ಲ ಜಿಲ್ಲೆಗಳಲ್ಲೂ ತನ್ನ ಮಾರ್ಕೆಂಟಿಂಗ್ ಪ್ರಚಾರದ ಭಾಗವಾಗಿ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ 'ಪೇಟಿಎಂ ಕ್ಯಾಶ್‌ಬ್ಯಾಕ್ ಧಮಾಕಾ' ಆರಂಭಿಸಿದೆ.

ಪೇಟಿಎಂ ಕಂಪನಿ ಮತ್ತು ಅದರ ಪಾಲುದಾರರು ದೇಶದಲ್ಲಿ ಮಾರ್ಕೆಟಿಂಗ್‌ಗಾಗಿಯೇ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಈ ಅಭಿಯಾನದ ಮೂಲಕ ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡುತ್ತಿದೆ. Paytm Wallet ಮತ್ತು Paytm Postpaid ಕುರಿತು ಬಳಕೆದಾರರಿಗೆ ತಿಳಿವಳಿಕೆ ನೀಡುವುದಕ್ಕೆ ಮುಂದಾಗಿದೆ. ನವೆಂಬರ್ 14 ರವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ಪೇಟಿಂಎ ಹೇಳಿಕೊಂಡಿದೆ. ಇನ್ನು ಈ ಅಭಿಯಾನದಲ್ಲಿ ಪ್ರತಿದಿನ 10 ಅದೃಷ್ಟಶಾಲಿ ವಿಜೇತರಿಗೆ ತಲಾ 1 ಲಕ್ಷ ಬಹುಮಾನವನ್ನು ನೀಡಲಾಗುತ್ತಿದೆ. 10,000 ಮಂದಿ ವಿಜೇತರು 100ರೂ, ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಇನ್ನೂ 10,000 ಬಳಕೆದಾರರು 50ರೂ, ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ ಎನ್ನಲಾಗಿದೆ. ನವೆಂಬರ್ 1 ರಿಂದ 3ರ ನಡುವೆ ಈ ಬಹುಮಾನವನ್ನು ಗೆಲ್ಲಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086