ಯುಪಿಐ ಆಧಾರಿತ ರುಪೇ ಕ್ರೆಡಿಟ್ ಕಾರ್ಡ್ ಪರಿಚಯಿಸಿದ ಪೇಟಿಎಂ! ಏನೆಲ್ಲಾ ಉಪಯೋಗ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಪೇಟಿಎಂ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಬಳಕೆದಾರರ ಅನುಕೂಲಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ಕ್ರೆಡಿಟ್‌ನಲ್ಲಿ ಪಾವತಿ ಮಾಡುವ ಆಯ್ಕೆಯನ್ನು ನೀಡಿದೆ. ಇನ್ನು ಈ ಕ್ರೆಡಿಟ್ ಕಾರ್ಡ್ ಅನ್ನು ಗ್ರಾಹಕರ UPI ಅಕೌಂಟ್‌ನೊಂದಿಗೆ ಲಿಂಕ್ ಮಾಡಿರುವುದರಿಂದ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಕೂಡ ಪಾವತಿ ಮಾಡಬಹುದಾಗಿದೆ.

ಹೌದು, ಪೇಟಿಎಂ ಹೊಸ ರುಪೇ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಇದು ಆಫ್‌ಲೈನ್ ಮತ್ತು ಆನ್‌ಲೈನ್ ಪಾವತಿಗಳನ್ನು ಬೆಂಬಲಿಸಲಿದ್ದು, ಪಾವತಿಗಳನ್ನು ವೇಗವಾಗಿ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೇಳಿದೆ. ಇನ್ನು ಈ ಹೊಸ ರುಪೇ ಕ್ರೆಡಿಟ್ ಕಾರ್ಡ್ ಅನ್ನು NPCI ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೇಳಿಕೊಂಡಿದೆ. ಹಾಗಾದ್ರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಪೇಟಿಎಂ ರುಪೇ ಕ್ರೆಡಿಟ್ ಕಾರ್ಡ್ ಹೇಗೆ ಕಾರ್ಯನಿರ್ವಹಿಸಲಿದೆ?
ಪೇಟಿಎಂ ಬಿಡುಗಡೆ ಮಾಡಿರುವ ಪೇಟಿಎಂ ರುಪೇ ಕ್ರೆಡಿಟ್ ಕಾರ್ಡ್ NPCI ಸಹಭಾಗಿತ್ವವನ್ನು ಹೊಂದಿದೆ. ಇದನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ಕ್ರೆಡಿಟ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು. ಇನ್ನು ಈ ಕ್ರೆಡಿಟ್ ಕಾರ್ಡ್ ಅನ್ನು ನಿಮ್ಮ ಯುಪಿಐ ಅಕೌಂಟ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರಿಂದ ನೀವು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಪಾವತಿಸುವುದಕ್ಕೆ ಸಾದ್ಯವಾಗಲಿದೆ. ಆದರೆ ಈ ರೀತಿ ಸ್ಕ್ಯಾನ್ ಮಾಡಿ ಪಾವತಿಸುವುದಕ್ಕೆ ಒಂದಿಷ್ಟು ಲಿಮಿಟ್ ಅನ್ನು ಕೂಡ ಬಳಸಿಕೊಳ್ಳಬಹುದಾಗಿದೆ.
ಇನ್ನು UPI ಯೊಂದಿಗೆ RuPay ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಅನುಮೋದಿಸಿದೆ. ಇದರಿಂದ ಬಳಕೆದಾರರು ಕ್ರೆಡಿಟ್ ಕಾರ್ಡ್ ಮೂಲಕ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಅಂದರೆ ರುಪೇ ಕ್ರೆಡಿಟ್ ಕಾರ್ಡ್ ಯುಪಿಐ ಬಳಕೆದಾರರಿಗೆ ಸಾಕಷ್ಟು ಉಪಯೋಗವನ್ನು ನೀಡಲಿದೆ. ರುಪೇ ಕ್ರೆಡಿಟ್ ಕಾರ್ಡ್ ಪ್ರಯೋಜನಗಳನ್ನು ಡಿಜಿಟಲ್ ವೇದಿಕೆಯಲ್ಲಿ ನೀಡಲಿದೆ. ಒಂದೇ ಯುಪಿಐ ಅಪ್ಲಿಕೇಶನ್‌ನ ಮೂಲಕ ಎಲ್ಲಾ ರೀತಿಯ ಪಾವತಿಗಳನ್ನು ಮಾಡುವ ಅನುಕೂಲವನ್ನು ನೀಡಲಿದೆ.

ಇದಲ್ಲದೆ ಪೇಟಿಎಂ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಅದರಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಳೆದ ಡಿಸೆಂಬರ್ 2022 ರಲ್ಲಿ 1,726.94 ಮಿಲಿಯನ್ ವಹಿವಾಟುಗಳನ್ನು ನಡೆಸಿದೆ. ಆದರೆ ಇದೇ ಅವಧಿಯಲ್ಲಿ ಫೋನ್‌ಪೇ 50%ಕ್ಕಿಂತ ಹೆಚ್ಚಿನ ಪಾಲನ್ನು ಬಲಪಡಿಸಿದೆ. ಅದರಂತೆ ಪೇಟಿಎಂ ಮತ್ತು ಫೋನ್‌ಪೇ ಎರಡೂ ಕೂಡ UPI ಲೈಟ್ ಸೇವೆಗಳನ್ನು ತಮ್ಮ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.
Paytm ಹಿಸ್ಟರಿ ಡಿಲೀಟ್ ಮಾಡಬಹುದೇ?
Paytm ಹಿಸ್ಟರಿ ಡಿಲೀಟ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದ್ರೆ, ಹಿಸ್ಟರಿ ಡೌನ್‌ಲೋಡ್ ಮಾಡಬಹುದು ಅಥವಾ ಪೇಟಿಎಂ ಅಪ್ಲಿಕೇಶನ್‌ನಲ್ಲಿ ಚೆಕ್ ಮಾಡಬಹುದಾಗಿದೆ. ನಿಮ್ಮ Paytm ಹಿಸ್ಟರಿಯನ್ನು ಡಿಲೀಟ್ ಮಾಡುವುದಾಗಿ ಹೇಳಿಕೊಂಡರೂ ಸಹ ನಿಮ್ಮ ಖಾತೆಯ ಮಾಹಿತಿಯನ್ನು ಯಾರಿಗೂ ನೀಡದಿರುವುದು ಉತ್ತಮ.

Paytmನಲ್ಲಿ ಬ್ಯಾಂಕ್ ಅಕೌಂಟ್ ಡಿಲೀಟ್ ಮಾಡಲು ಹೀಗೆ ಮಾಡಿರಿ
* ನಿಮ್ಮ ಫೋನಿನಲ್ಲಿ ಪೇಟಿಎಂ ಆಪ್ ಅನ್ನು ತೆರೆಯಿರಿ.
* ನಂತರ ಮೇಲಿನ ಎಡ ಮೂಲೆಯಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಆ ಬಳಿಕ ಪ್ರೊಫೈಲ್ ಆಯ್ಕೆ.
* ಪೇಮೆಂಟ್ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ, ನಂತರ UPI ಮತ್ತು ಲಿಂಕ್ಡ್ ಬ್ಯಾಂಕ್ ಖಾತೆಗಳನ್ನು ಆಯ್ಕೆ ಮಾಡಿ.
* ಈಗ, ನಿಮ್ಮ ಪೇಟಿಎಂ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳ ಲಿಸ್ಟ್ ಕಾಣುತ್ತೀರಿ.
* ಯಾವುದೇ ಬ್ಯಾಂಕ್ ಖಾತೆಯನ್ನು ಡಿಲೀಟ್ ಮಾಡಲು, Remove Account ಆಯ್ಕೆ ಟ್ಯಾಪ್ ಮಾಡಿ ಮತ್ತು ಅದನ್ನು ಖಚಿತಪಡಿಸಿ.


Click it and Unblock the Notifications








