Subscribe to Gizbot

ಕಾರ್ಯಾಚರಣೆ ಆರಂಭಿಸಿದ ಪೇಟಿಎಂ ಪೇಮೆಂಟ್ ಬ್ಯಾಂಕ್‌: ಭರ್ಜರಿ ಆರಂಭಿಕ ಕೊಡುಗೆ..!!!!

Written By:

ದೇಶದಲ್ಲಿ ನೋಟು ನಿಷೇಧದ ನಂತರದಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿದ ಮೊಬೈಲ್ ವ್ಯಾಲೆಟ್ ಪೇಟಿಎಂ, ತನ್ನದೇ ಪೇಟಿಎಂ ಪೇಮೆಂಟ್ ಬ್ಯಾಂಕ್‌ ತೆರೆದಿದ್ದು, ಮಂಗಳವಾರರಿಂದ ಕಾರ್ಯಚರಣೆಯನ್ನು ಆರಂಭಿಸಿದೆ. ಅಲ್ಲದೇ ಪ್ರಾರಂಭಿಕ ಕೊಡುಗೆಯಾಗಿ ಭರ್ಜರಿ ಆಫರ್ ಸಹ ನೀಡಿದೆ.

ಕಾರ್ಯಾಚರಣೆ ಆರಂಭಿಸಿದ ಪೇಟಿಎಂ ಪೇಮೆಂಟ್ ಬ್ಯಾಂಕ್‌: ಭರ್ಜರಿ ಆರಂಭಿಕ ಕೊಡುಗೆ..!!!

ಓದಿರಿ: ಮಾರುಕಟ್ಟೆಗೆ ಲಗ್ಗೆ ಇಡುವ ರೆಡ್‌ಮಿ 4 ಹೇಗಿದೆ ಗೊತ್ತಾ..? ವಿಡಿಯೋ ನೋಡಿ..!!

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಇಲ್ಲಿಯೂ ಕ್ಯಾಷ್ ಬ್ಯಾಕ್ ಆಫರ್ ಘೋಷಣೆ ಮಾಡಿದೆ. ರೂ. 25,000 ಹಣವನ್ನು ಜಮೆ ಮಾಡುವ ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ ರೂ.250 ಅನ್ನು ಕ್ಯಾಷ್ ಬ್ಯಾಕ್ ಆಗಿ ನೀಡಲು ಮುಂದಾಗಿದೆ.

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೆಹಲಿಯಲ್ಲಿ ಮೊದಲ ಶಾಖೆ:

ದೆಹಲಿಯಲ್ಲಿ ಮೊದಲ ಶಾಖೆ:

ದೆಹಲಿಯಲ್ಲಿ ಪೇಟಿಎಂನ ಮೊದಲ ಪೇಟಿಎಂ ಪೇಮೆಂಟ್ ಬ್ಯಾಂಕ್‌ ಶಾಖೆಯೂ ಕಾರ್ಯರಾಂಭ ಮಾಡಿದೆ. ಇಲ್ಲಿ ಗ್ರಾಹಕರು ಗರಿಷ್ಠ ₹1 ಲಕ್ಷದ ವರೆಗೂ ಠೇವಣಿ ಇಡಲು ಅವಕಾಶಕಾಶ ಮಾಡಿಕೊಡಲಾಗಿದೆ.

ಭಾರೀ ಯೋಜನೆ ಹಾಕಿರುವ ಪೇಟಿಎಂ:

ಭಾರೀ ಯೋಜನೆ ಹಾಕಿರುವ ಪೇಟಿಎಂ:

ಕಾರ್ಯ ಆರಂಭಿಸಿದ ಮೊದಲ ವರ್ಷದಲ್ಲೇ ದೇಶದಲ್ಲಿ ಒಟ್ಟು 31 ಪೇಟಿಎಂ ಪೇಮೆಂಟ್ ಬ್ಯಾಂಕ್‌ ಶಾಖೆಯನ್ನು ಆರಂಭಿಸಲಿದೆ, ಇದೇ ಮಾದರಿಯಲ್ಲಿ ಸುಮಾರು 3000 ಪೇಟಿಎಂ ಪೇಮೆಂಟ್ ಬ್ಯಾಂಕ್‌ ಗ್ರಾಹಕ ಸೇವಾ ಕೇಂದ್ರವನ್ನು ತೆರೆಯುವ ಯೋಜನೆಯನ್ನು ಪೇಟಿಎಂ ಹಾಕಿಕೊಂಡಿದೆ ಎನ್ನಲಾಗಿದೆ.

ಭಾರೀ ಹೂಡಿಕೆಗೆ ಮುಂದಾದ ಪೇಟಿಎಂ:

ಭಾರೀ ಹೂಡಿಕೆಗೆ ಮುಂದಾದ ಪೇಟಿಎಂ:

ಮೊಬೈಲ್ ವ್ಯಾಲೆಟ್ ನಲ್ಲಿ ಯಶಸ್ಸು ಸಾಧಿಸಿರುವ ಪೇಟಿಎಂ, ಪೇಟಿಎಂ ಪೇಮೆಂಟ್ ಬ್ಯಾಂಕ್‌ ನಲ್ಲಿ ಭಾರೀ ಮೊತ್ತದ ಹೊಡಿಕೆಯನ್ನು ಮಾಡುತ್ತಿದೆ. ಮೊದಲ ಹಂತವಾಗಿ ಸುಮಾರು 400 ಕೋಟಿ ಬಂಡಾವಳವನ್ನು ತೊಡಗಿಸಲಿದೆ ಎಂದು ವರದಿಯಾಗಿದೆ.

ಪೇಟಿಎಂ ಪೇಮೆಂಟ್ ಬ್ಯಾಂಕ್‌ನಿಂದ ಹಲವು ಆಫರ್‌ಗಳು:

ಪೇಟಿಎಂ ಪೇಮೆಂಟ್ ಬ್ಯಾಂಕ್‌ನಿಂದ ಹಲವು ಆಫರ್‌ಗಳು:

ಪೇಟಿಎಂ ಪೇಮೆಂಟ್ ಬ್ಯಾಂಕ್‌ ತನ್ನ ಗ್ರಾಹಕರಿಗೆ ಅನೇಕ ಆಫರ್ ಗಳನ್ನು ನೀಡುತ್ತಿದೆ. ವಾಲೆಟ್ ನಿಂದ ನಡೆಯುತ್ತಿದ್ದ ವಹಿವಾಟನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್‌ ವರ್ಗಾಯಿಸುತ್ತಿದೆ. ಇದರಲ್ಲಿ ಗ್ರಾಹಕರಿಕೆ ಶೂನ್ಯ ಬಾಕಿ ಖಾತೆ,ಉಚಿತ ಆನ್‌ಲೈನ್‌ ವಹಿವಾಟು ಸೇವೆ ಒದಗಿಸಲಿದೆ ಎಂದು ತಿಳಿಸಿದೆ.

ಪೇಟಿಎಂ ಪೇಮೆಂಟ್ ಬ್ಯಾಂಕ್‌ ನಿಂದ ಶೇ 4ರಷ್ಟು ಬಡ್ಡಿ :

ಪೇಟಿಎಂ ಪೇಮೆಂಟ್ ಬ್ಯಾಂಕ್‌ ನಿಂದ ಶೇ 4ರಷ್ಟು ಬಡ್ಡಿ :

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ 4ರಷ್ಟು ಬಡ್ಡಿ ಯನ್ನು ನೀಡುವುದಾಗಿ ತಿಳಿಸಿದೆ. ಇದರ ಮೂಲಕ ಗ್ರಾಹಕರನ್ನು ಆಕರ್ಷಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Paytm announced the launch of its payments bank in India. to know more visit kannada.gizot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot