ಪೇಟಿಎಂ ಟ್ಯಾಪ್ ಕಾರ್ಡ್: ಪೇಮೆಂಟ್ ನ ಹೊಸ ವಿಧಾನ
ಪೇಟಿಎಂ ಹೊಸದಾಗಿ ಪೇಮೆಂಟ್ ಮೋಡ್ ವೊಂದನ್ನು ಲಾಂಚ್ ಮಾಡಿದ್ದು, ಪೇಟಿಎಂ ಟ್ಯಾಪ್ ಕಾರ್ಡ್ ಎಂಬ ಹೊಸ ಸೇವೆಯನ್ನು ಲಾಂಚ್ ಮಾಡಿದ್ದು, ಇದರಲ್ಲಿ ಆಫ್ ಲೈನ್ ಪೇಮೆಂಟ್ ಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಹೊಸ ಕಾರ್ಡ್ ನಲ್ಲಿ NFC ಸೇವೆಯನ್ನು ಅಳವಡಿಸಿದ್ದು, ಇಂಟರ್ನೆಟ್ ಇಲ್ಲದೇ ಇರುವವರು ಸಹ ಪೇಟಿಎಂ ಸೇವೆಯನ್ನು ಪಡೆದುಕೊಳ್ಳಲು ಇದು ಸಹಾಯಕಾರಿಯಾಗಲಿದೆ. ಈ ಹೊಸ ಸೇವೆಯಲ್ಲಿ ಬಳಕೆದಾರರು ಪಾಯಿಂಟ್ ಆಫ್ ಸೇಲ್ ನಲ್ಲಿ ಬಳಕೆಯಾಗಲಿದೆ.

ಪೇಟಿಎಂ ಟ್ಯಾಪ್ ಕಾರ್ಡ್ ನಲ್ಲಿ ಬಳಕೆದಾರರಿಗೆ ಸೇಫ್ ಆಗಿ ಮತ್ತು ಸುಲಭವಾಗಿ ಪೇಮೆಂಟ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಈ ಕಾರ್ಡ್ ಸೇವೆಯಲ್ಲಿ ಇಂಟರ್ನೆಟ್ ಸೇವೆಯೂ ಇಲ್ಲದಿದ್ದರೂ ಸಹ ಪೇಟಿಎಂ ಸೇವೆಯನ್ನು ಪಡೆದುಕೊಳ್ಳಬುದಾಗಿದೆ. ಕೆಲವೇ ಸೆಕೆಂಡ್ ಗಳಲ್ಲಿ ಪೇಮೆಂಟ್ ಮಾಡಬಹುದಾಗಿದೆ. ಕಾರ್ಡ್ ಗಳಿಗೆ ಪೇಟಿಎಂ ನಿಂದ ಹಣವನ್ನು ತುಂಬಿಸಿಕೊಳ್ಳಬಹುದಾಗಿದೆ.
ಇದನ್ನು ಎಲ್ಲಿ ಬೇಕಾದರು ಬಳಕೆ ಮಾಡಬಹುದಾಗಿದೆ. ಕಾರ್ಪೋರ್ಟೆಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ವೇಗವಾಗಿ ಪೇಮೆಂಟ್ ಮಾಡಲು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಎಟಿಎಂ ಕಾರ್ಡ್ ಮಾದರಿಯಲ್ಲಿ ಸ್ಪೇಪ್ ಮಾಡಬಹುದಾಗಿದೆ. ಇದರಿಂದಾಗಿ ಫೋನ್ ಗಳನ್ನು ತೆಗೆದುಕೊಂಡು ಹೋಗಲಿಲ್ಲ ಎಂದರೂ ಪೇಮೆಂಟ್ ಮಾಡಲು ಸಹಾಯ ಮಾಡಲಿದೆ.
ದೇಶದಲ್ಲಿ ಹೆಚ್ಚಿನ ಮಂದಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಂಡಿಲ್ಲವಾಗಿರುವುದರಿಂದಾಗಿ ಹೆಚ್ಚಿನ ಮಂದಿಗೆ ಸಹಾಯವನ್ನು ಮಾಡುವ ಸಲುವಾಗಿ ಈ ಹೊಸ ಟಾಪ್ ಕಾರ್ಡ್ ಸೇವೆಯನ್ನು ಪೇಟಿಎಂ ಆರಂಭಿಸಿದೆ ಎನ್ನಲಾಗಿದೆ. ಇದು ಹೊಸ ಮಾದರಿಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಪೇಟಿಎಂ ಬಳಕೆಯೂ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಆಫ್ ಲೈನ್ ಪೇಮೆಂಟ್ ನಲ್ಲಿಯೂ ಖ್ಯಾತಿಯನ್ನು ಪಡೆದುಕೊಳ್ಳುವ ಸಲುವಾಗಿ ಈ ಕಾರ್ಡ್ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಬಳಕೆದಾರರ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು ಈ ಸೇವೆಯನ್ನು ನೀಡಲಾಗುತ್ತಿದೆ. ಬಳಕೆದಾರರಿಗೆ ಇದರಿಂದ ಸಾಕಷ್ಟು ಸಹಾಯವಾಗಲಿದೆ.


Click it and Unblock the Notifications