Home
ಸುದ್ದಿಜಾಲ

ಹೊಸ ದಾಖಲೆ ಬರೆದ ಪೇಟಿಎಂ? ಈ ಪರಿಯ ದಾಖಲೆ ನೀವು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ?

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಪೇಟಿಎಂ ಇದೀಗ ಭಾರತದಲ್ಲಿ ಹೊಸ ದಾಖಲೆ ಬರೆದಿದೆ. ತನ್ನ ಹೊಸ ಪೇಟಿಎಂ ಯುಪಿಐ ಲೈಟ್‌ನಲ್ಲಿ 4.3 ಮಿಲಿಯನ್ ಬಳಕೆದಾರರನ್ನು ಪಡೆದಿರುವುದಾಗಿ ಘೋಷಿಸಿದೆ. ಅಲ್ಲದೆ ಪೇಟಿಎಂ ಸೂಪರ್‌ ಅಪ್ಲಿಕೇಶನ್‌ ಮೂಲಕ 10 ಮಿಲಿಯನ್‌ಗಿಂತಲೂ ಹೆಚ್ಚು ವಹಿವಾಟುಗಳನ್ನು ನಡೆಸಿರುವುದಾಗಿ ಹೇಳಿದೆ.

ಹೌದು, ಪೇಟಿಎಂ ಯುಪಿಐ ಲೈಟ್‌ ದಿನೇ ದಿನೇ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಸಿಂಗಲ್‌ ಟ್ಯಾಪ್‌ನಲ್ಲಿ ಕಡಿಮೆ ಮೌಲ್ಯದ ವಹಿವಾಟು ನಡೆಸಲು ಅನುಮತಿಸಲಿದ್ದು, ಹೆಚ್ಚು ಜನರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ತಲುಪಿದೆ. ಹಾಗಾದ್ರೆ ಪೇಟಿಎಂ ಲೈಟ್‌ ಭಾರತದಲ್ಲಿ ಮಾಡಿರುವ ದಾಖಲೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ದಾಖಲೆ ಬರೆದ ಪೇಟಿಎಂ? ಈ ಪರಿಯ ದಾಖಲೆ ನೀವು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ?

ಇನ್ನು ಪೇಟಿಎಂ ಯುಪಿಐ ಲೈಟ್‌ನಲ್ಲಿ ಪಿನ್‌ ನಮೂದಿಸಿದೆ ಹಣ ಪಾವತಿಸಲು ಅನುಮತಿಸಲಿದೆ. ಆದರೆ ಇದರಲ್ಲಿ ಸಿಂಗಲ್‌ ಟ್ಯಾಪ್‌ನಲ್ಲಿ ಕೇವಲ 200ರೂ. ವರೆಗಿನ ಕಡಿಮೆ-ಮೌಲ್ಯದ ವಹಿವಾಟುಗಳನ್ನು ನಡೆಸಲು ಅವಕಾಶ ನೀಡಲಿದೆ. ಇದೇ ಕಾರಣಕ್ಕೆ ಅತಿ ಕಡಿಮೆ ಅವಧಿಯಲ್ಲಿಯೇ 4.3 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇದೇ ಅವಧಿಯಲ್ಲಿ 10 ಮಿಲಿಯನ್‌ ವಹಿವಾಟಗಳನ್ನು ನಡೆಸಿದ್ದೇವೆ ಎಂದು ಹೇಳಿಕೊಂಡಿದೆ.

ಪ್ರಸ್ತುತ, ಪೇಟಿಎಂ ಯುಪಿಐ ಲೈಟ್‌ ಅನ್ನು 10 ಬ್ಯಾಂಕ್‌ಗಳು ಬೆಂಬಲಿಸಲಿವೆ. ಇದರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಸೇರಿವೆ. ಇದರೊಂದಿಗೆ ಇನ್ನು ಹಲವು ಪ್ರಮುಖ ಬ್ಯಾಂಕ್‌ಗಳು ಶೀಘ್ರದಲ್ಲೇ ಪೇಟಿಎಂ ಯುಪಿಐ ಲೈಟ್‌ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಹೊಸ ದಾಖಲೆ ಬರೆದ ಪೇಟಿಎಂ? ಈ ಪರಿಯ ದಾಖಲೆ ನೀವು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ?

ಪೇಟಿಎಂ ಯುಪಿಐ ಲೈಟ್‌ ಅನ್ನು ಪೇಟಿಎಂ ಬ್ಯಾಂಕ್‌ನ ಸೆಕ್ಯುರಿಟಿ ಮತ್ತು ಟೆಕ್ನಾಲಜಿಯ ಮೂಲಕ ನಡೆಸಲಾಗುತ್ತಿದೆ. ನಿಮ್ಮ ದೈನಂದಿನ ಗರಿಷ್ಠ ವಹಿವಾಟು ಮಿತಿ ಮೀರಿದ ನಂತರವೂ ಅನುಕೂಲಕ್ಕಾಗಿ ಯುಪಿಐ ಲೈಟ್‌ ಅನ್ನು ಬಳಸಬಹುದಾಗಿದೆ. ಇದೆಲ್ಲದರ ಜೊತೆಗೆ ಪೇಟಿಎಂ UPI Lit ಮೂಲಕ ಮಾಡಲಾದ ವೈಯುಕ್ತಿಕ ಪಾವತಿಗಳನ್ನು ಬ್ಯಾಲೆನ್ಸ್‌ ನಲ್ಲಿ ತೋರಿಸುವುದಿಲ್ಲ. ಬದಲಿಗೆ UPI Lite ಬ್ಯಾಲೆನ್ಸ್ ಅನ್ನು ಲೋಡ್ ಮಾಡಲು ಕ್ಲೀನ್ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ನೀಡುತ್ತದೆ.

ಹೊಸ ದಾಖಲೆ ಬರೆದ ಪೇಟಿಎಂ? ಈ ಪರಿಯ ದಾಖಲೆ ನೀವು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ?

ಇನ್ನು ಪೇಟಿಎಂ ಯುಪಿಐ ಲೈಟ್‌ ಆನ್ ಡಿವೈಸ್ ವ್ಯಾಲೆಟ್ ಬಳಸಿಕೊಂಡು ವಹಿವಾಟು ನಡೆಸಲು ಅನುಮತಿಸುತ್ತದೆ. ಅಂದರೆ, ಇದು ನೇರವಾಗಿ ಲಿಂಕ್‌ ಮಾಡಲಾದ ಯಾವುದೇ ಬ್ಯಾಂಕ್‌ನಿಂದ ವ್ಯವಹಾರ ನಡೆಸುವ ಮಾರ್ಗವಲ್ಲ. ಯುಪಿಐ ಲೈಟ್ ಬಳಸಿ ವಹಿವಾಟುಗಳನ್ನು ಪ್ರಾರಂಭಿಸಲು ಪೇಟಿಎಂ ವ್ಯಾಲೆಟ್‌ನಲ್ಲಿ ಹಣ ಇರಿಸಿಕೊಂಡಿರಬೇಕಾಗುತ್ತದೆ. ಸದ್ಯ ಪೇಟಿಎಂ ಯುಪಿಐ ಲೈಟ್‌ ಬ್ಯಾಲೆನ್ಸ್‌ ಅನ್ನು ಯಾವುದೇ UPI QR ಗೆ ಸೂಪರ್‌ಫಾಸ್ಟ್ UPI ಪಾವತಿಗಳನ್ನು ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಆಟೋ ಪೇ ಮೂಲಕ ಪೇಟಿಎಂ ಅಪ್ಲಿಕೇಶನ್‌ಗೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಗೆ ವರ್ಗಾಯಿಸಬಹುದಾಗಿದೆ.

Best Mobiles in India

English summary
Paytm UPI Lite with more than over 10 million transactions so far through the Paytm Super App.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+