Home
ಸುದ್ದಿಜಾಲ

ಪೇಟಿಎಂ ಬಳಕೆದಾರರಿಗೆ ಎಚ್ಚರಿಕೆ ಸಂದೇಶ!

ಭಾರತದ ಡಿಜಿಟಲ್​ ಪೆಮೆಂಟ್​ ಆಪ್​ಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ಪೆಟಿಎಂ ಆಪ್ ಮಾಲಿಕತ್ವದ ಪೇಟಿಎಂ ಸಂಸ್ಥೆ​ ತನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ಹೊರಡಿಸಿದೆ. ಕೆವೈಸಿ (ನೋ ಯುವರ್​ ಕಸ್ಟಮರ್​) ಪೂರ್ಣಗೊಳಿಸುವ ಸಲುವಾಗಿ ವಿಶೇಷ ಆಪ್ ಒಂದನ್ನು ಡೌನ್​ಲೋಡ್​ ಮಾಡುವಂತೆ ಯಾವುದಾರರು ಎಸ್​ಎಮ್​ಎಸ್​, ಕರೆ ಬಂದರೆ ಅವುಗಳನ್ನು ಬಳಸದಿರಿ. ಇದರಿಂದ ನೀವು ಹಣ ಕಳೆದುಕೊಳ್ಳುವ ಅಥವಾ ಇನ್ನಿತರ ರೀತಿಯಲ್ಲಿ ಮೋಸಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.

ಡಿಜಿಟಲ್​ ಪೇಮೆಂಟ್

ಹೌದು, ಇಂದು ಡಿಜಿಟಲ್​ ಪೇಮೆಂಟ್​ ಎಂಬುದು ಜನರ ಜೀವನದ ಒಂದು ಭಾಗವಾಗಿದ್ದು, ಸಾಕಷ್ಟು ಮಂದಿ ಇದನ್ನು ಬಳಸುತ್ತಿದ್ದಾರೆ. ಆದರೆ, ಈ ಡಿಜಿಟಲ್​ ಪೇಮೆಂಟ್​ ಬಳಕೆ ಬಗ್ಗೆ ಹೆಚ್ಚು ಜನರಿಗೆ ಸರಿಯಾದ ಮಾಹಿತಿ ಇಲ್ಲ. ಇದನ್ನೇ ದುರುಪಯೋಗಪಡಿಸಿಕೊಳ್ಳಿತ್ತಿರುವ ಹ್ಯಾಕರ್ಸ್​ ಗುಂಪೊಂದು ಇದೀಗ ಪೇಟಿಎಂ ಬಳಕೆದಾರರ ಮೇಲೆ ಕಣ್ಣಿಟ್ಟಿದೆ. ಬಳಕೆದಾರರ ಖಾಸಗಿ ಮಾಹಿತಿಯನ್ನು ಮತ್ತು ಬ್ಯಾಂಕ್ ನಲ್ಲಿದ್ದ ಹಣವನ್ನು ಎಗರಿಸುವ ಹ್ಯಾಕರ್ಸ್​ ಗುಂಪೊಂದು ಬಗ್ಗೆ ಪೇಟಿಎಂ ಸಂಸ್ಥೆಯ ಗಮನಕ್ಕೆ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ನಕಲಿ ಕರೆ

ಹ್ಯಾಕರ್ಸ್​ ಗುಂಪೊಂದು ನಕಲಿ ಕರೆಯನ್ನು ಮಾಡಿ ಬಳಕೆದಾರರ ಖಾಸಗಿ ಮಾಹಿತಿಯನ್ನು ಮತ್ತು ಬ್ಯಾಂಕ್ ನಲ್ಲಿದ್ದ ಹಣವನ್ನು ಎಗರಿಸುತ್ತಿದೆ. ಆಪ್ ರಿ- ಇನ್​​ಸ್ಟಾಲ್​ ಮಾಡುವಾಗ ಎನಿಡೆಸ್ಕ್​, ಟೀಮ್​ವ್ಯೂವರ್​ ಕ್ವಿಕ್​ ಸಪೋರ್ಟ್​ ಮೂಲಕ ಪರ್ಮಿಷನ್​ ಕೇಳುತ್ತದೆ .ಇನ್​ಸ್ಟಾಲ್​ ಮಾಡಿದಂತೆ 9 ಸಂಖ್ಯೆಯ ಕೋಡ್​ ಅನ್ನು ಕೂಡ ಕೇಳುತ್ತದೆ. ಜಾಗರೂಕರಾಗದೆ ಆ ಕೋಡ್​ ಟೈಪ್ ಮಾಡಿದರೆ ನಿಮ್ಮ ಪೇಟಿಎಂ ಖಾತೆ ಬೇರೆಯವರು ಹಿಡಿತದಲ್ಲಿರುತ್ತದೆ ಮಾತ್ರವಲ್ಲದೆ ಹಣವೂ ಕೂಡ ಹ್ಯಾಕರ್ಸ್ ಗಳ ಪಾಲಾಗುತ್ತದೆ ಎಂದು ತಿಳಿಸಿದೆ.

ಎಸ್​ ಎಮ್ ​ಎಸ್

ಇದರ ಜೊತೆಗೆ ಎಸ್​ ಎಮ್ ​ಎಸ್ ​ ರೂಪದಲ್ಲಿ ಕ್ಯಾಶ್​ಬ್ಯಾಕ್​ ಸೇರಿದಂತೆ ಹಲವಾರು ಆಫರ್​ಗಳು ಬರುತ್ತವೆ. ಅಲ್ಲಿ ಕಾಣುವ ಲಿಂಕ್​ ಅನ್ನು ಕ್ಲಿಕ್ ಮಾಡದೇ ತಕ್ಷಣವೇ ಡಿಲೀಟ್ ಮಾಡಿ ಎಂದು ಪೇಟಿಎಂ ತಿಳಿಸಿದೆ. ಇಲ್ಲಿಯವರೆಗೆ ಆಫರ್​ ಅಥವಾ ಸಂದೇಶದ ಮೂಲಕ ಯಾವುದೇ ಲಿಂಕ್​ ಅನ್ನು ಕಳುಹಿಸಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಪೇಟಿಎಂ ಹೆಸರನ್ನು ಹೇಳಿಕೊಂಡು ಯಾವುದೇ ವ್ಯಕ್ತಿ ನಿಮಗೆ ಕರೆ ಮಾಡಿದರೆ ಅಂತವರನ್ನು ದೂರವಿಡುವುದು ಒಳ್ಳೆಯದು. ಇಲ್ಲವಾದಲ್ಲಿ ನೀವು ಮೋಸಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ.

 ಪೇಮೆಂಟ್ ಆಪ್‌

ದೇಶದಲ್ಲಿ ಪೇಮೆಂಟ್ ಆಪ್‌ಗಳ ಬಳಕೆ ಹೆಚ್ಚುತ್ತಿದೆ. ಪೇಮೆಂಟ್ ಆಪ್‌ಗಳ ಸಹಾಯದಿಂದ ಆನ್ ಲೈನ್ ಬ್ಯಾಂಕಿಂಗ್, ರೀಚಾರ್ಜ್ ಸೇರಿದಂತೆ ಹಲವಾರು ಉಪಯುಕ್ತ ಸೇವೆಗಳನ್ನು ಕುಳಿತಲ್ಲಿಂದಲೇ ಜನರು ಬಳಸುತ್ತಿದ್ದಾರೆ. ಆದರೆ, ಆನ್​ಲೈನ್​ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹ್ಯಾಕರ್ಸ್​ಗಳ ಉಪಟಳವೂ ಮಿತಿಮೀರುತ್ತಿದೆ. ಹಾಗಾಗಿ, ಫೋನ್ ಪೇ, ಗೂಗಲ್ ಪೇ ಮುಂತಾದ ಬಳಕೆದಾರರೂ ಕೂಡ ಈ ಕುರಿತು ಎಚ್ಚರವಹಿಸುವುದು ಸೂಕ್ತ. ಇಲ್ಲವಾದರೆ ನೀವು ಹಣ ಕಳೆದುಕೊಳ್ಳುವುದು ಗ್ಯಾರಂಟಿ.

Best Mobiles in India

English summary
PayTM warns customers against fraudulent messages, calls; says attempt to hack their accounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+