ವಾಟ್ಸ್ಆಪ್ ಬಳಕೆದಾರರು ಓದಲೇಬೇಕಾದಂತಹ ಶಾಕಿಂಗ್ ಸುದ್ದಿ ಇದು!

|

ಇತ್ತೀಚಿಗಷ್ಟೇ ವಾಟ್ಸ್ಆಪ್ ಅನ್ನು ಹ್ಯಾಕ್ ಮಾಡಿದ್ದ ಸುದ್ದಿ ನಿಮಗೆ ಈಗಾಗಲೇ ತಿಳಿದಿರಬಹುದು. ಇದೀಗ ಆ ಸುದ್ದಿಗೆ ಮತ್ತೊಂದು ಪ್ರಮುಖ ಅಪ್‌ಡೇಟ್ ದೊರೆತಿದೆ. ಇಸ್ರೇಲ್‌ನ ತಂತ್ರಾಂಶದ ಮೂಲಕ ನಡೆಸಿರುವ ದಾಳಿಯಲ್ಲಿ ಮೂಲಕ ಭಾರತದ 121 ವಾಟ್ಸ್ಆಪ್ ಬಳಕೆದಾರರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಅವರಲ್ಲಿ 20 ವಾಟ್ಸ್ಆಪ್ ಬಳಕೆದಾರರ ಮಾಹಿತಿ ಕದಿಯುವಲ್ಲಿ ಯಶಸ್ಸು ಸಾಧಿಸಲಾಗಿತ್ತು ಎಂದು ಸ್ವತಃ ವಾಟ್ಸ್ಆಪ್ ಸಂಸ್ಥೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಮೂಲಕ ತಾನು ಸುರಕ್ಷಿತವಲ್ಲ ಎಂಬುದನ್ನು ವಾಟ್ಸ್ಆಪ್ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ .

ವಾಟ್ಸ್ಆಪ್

ಹೌದು, 20 ಭಾರತೀಯ ವಾಟ್ಸ್ಆಪ್ ಬಳಕೆದಾರರ ಮಾಹಿತಿ ಕದಿಯುವಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ. ಆದರೆ, ಬಳಕೆದಾರರ ಯಾವೆಲ್ಲಾ ಮಾಹಿತಿಗಳನ್ನು ಕದ್ದಿರಬಹುದು ಅಥವಾ ಹಾನಿಯಾಗಿರಬಹುದು ಎನ್ನುವುದನ್ನು ನಿರ್ಧರಿಸುವುದು ಅಥವಾ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ ಎಂದು ವಾಟ್ಸ್ಆಪ್ ತಿಳಿಸಿದೆ. ಈ ಮೂಲಕ ನಮ್ಮದು ಎಂಡ್‌-ಟು-ಎಂಡ್ ಎನ್ ಕ್ರಿಪ್ಟೆಡ್ ವ್ಯವಸ್ಥೆ, ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಕೊಟ್ಟಿದ್ದೇವೆ ಎಂದೆಲ್ಲಾ ಬೀಗುತ್ತಿದ್ದ ವಾಟ್ಸ್ಆಪ್ ಇದೇ ಮೊದಲ ಬಾರಿಗೆ ಬಳಕೆದಾರರು ಮತ್ತು ಸರ್ಕಾರದ ಮುಂದೆ ತಲೆಬಾಗಿದೆ.

ಪೆಗಾಸಸ್

ಗ್ರೀಕ್ ಪುರಾಣಗಳಲ್ಲಿ ಪ್ರಚಲಿತವಾಗಿರುವ ಹಾರುವ ಕುದುರೆಗಳಿಗೆ 'ಪೆಗಾಸಸ್' ಎಂಬ ಹೆಸರಿದೆ. ಇದೇ ಹೆಸರು ಟೆಕ್ ಲೋಕದಲ್ಲಿ ತಲ್ಲಣ ಸೃಷ್ಟಿಸಿತ್ತು. ಕಳೆದ ತಿಂಗಳು ಜಗತ್ತಿನಾದ್ಯಂತ ಪ್ರಭಾವಿ ಹಾಗೂ ಗಣ್ಯರ ಫೋನ್‌ಗಳಲ್ಲಿರುವ ಮಾಹಿತಿಯನ್ನು ವಾಟ್ಸ್ಆಪ್ ಮೂಲಕ ಕದಿಯುತ್ತಿರುವ ಕೃತ್ಯ ಬಯಲಾಗಿತ್ತು. 'ಪೆಗಾಸಸ್' ಎಂಬುದು ಅತ್ಯಾಧುನಿಕ ಸ್ಪೈಯಿಂಗ್ ಟೂಲ್ ಆಗಿದ್ದು, ಇದನ್ನು ಕೆಲವರ ವಾಟ್ಸ್ಆಪ್ ಖಾತೆಯಲ್ಲಿ ಸಕ್ರಿಯಗೊಳಿಸಿ, ಅವರ ಮೇಲೆ ಗೂಢಚರ್ಯ ಮಾಡಲಾಗಿತ್ತು ಮತ್ತು ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕದಿಯಲಾಗಿತ್ತು.

ಕಾಲಿಂಗ್ ಸೇವೆ

ವಾಟ್ಸ್ಆಪ್ ನೀಡುತ್ತಿರುವ ಕಾಲಿಂಗ್ ಸೇವೆಯಲ್ಲಿರುವ ತಾಂತ್ರಿಕ ದೌರ್ಬಲ್ಯವನ್ನು ಬಳಸಿಕೊಂಡು ಪೆಗಾಸಸ್ ಎಂಬ ಸ್ಪೈಯಿಂಗ್ ಟೂಲ್ ವಾಟ್ಸ್ಆಪ್ ಖಾತೆಗಳಿಗೆ ಕಳ್ಳತನದಿಂದ ನುಗ್ಗುತ್ತಿತ್ತು.. ಕುತಂತ್ರದ ಮೂಲಕ ವಾಟ್ಸ್ಆಪ್ ಸಹಾಯದಿಂದ ಫೋನ್‌ ಪ್ರವೇಶಿಸುವ ಈ ಸ್ಪೈವೇರ್ ಅಲ್ಲಿರುವ ಎಲ್ಲಮಾಹಿತಿಯನ್ನು ಕದಿಯುತ್ತಿತ್ತು. ಇದು ಒಮ್ಮೆ ಬಳಕೆದಾರರ ಫೋನ್ ಸೇರಿಕೊಂಡರೆ ಕೂಡಲೇ ಬಳಕೆದಾರರ ಕರೆಗಳು, ವಿಡಿಯೊ, ಚಾಟ್‌, ಫೋಟೊ, ಕಾರ್ಯಕ್ರಮಗಳು, ಚಲನವಲನಗಳೆಲ್ಲವೂ ಬೇರೊಂದು ಕಡೆ ದಾಖಲಾಗುತ್ತಾ ಹೋಗುತ್ತಿದ್ದವು ಎನ್ನಲಾಗಿದೆ.

ಎನ್‌ಎಸ್‌ಒ ಗ್ರೂಪ್‌

ಮತ್ತೊಂದು ವಿಷಯ ಎಂದರೆ ಈ ಪೆಗಾಸಸ್ ಕೃತ್ಯ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಲು ಮತ್ತೊಂದು ಕಾರಣವಿದೆ. ಎನ್‌ಎಸ್‌ಒ ಗ್ರೂಪ್‌ ಹೇಳುವಂತೆ ಅದು ಕೇವಲ ಸರಕಾರಗಳಿಗಾಗಿ ಮಾತ್ರವೇ ಈ ಗೂಡಚರ್ಯ ಕೆಲಸವನ್ನು ಮಾಡುವುದಾಗಿ ಹೇಳಿಕೊಂಡಿದೆ. ಪೆಗಾಸಸ್ ಕುತಂತ್ರಾಂಶವನ್ನು ಪನಾಮಾ ಮತ್ತು ಮೆಕ್ಸಿಕೊ ಸರಕಾಗಳು ಬಳಸುತ್ತಿರುವುದು ತೀರಾ ರಹಸ್ಯವಾಗಿಯೇನೂ ಉಳಿದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗಾದರೆ, ಭಾರತದಲ್ಲಿ ಇಂತಹ ಕೆಲಸ ಮಾಡಿರುವುದು ಯಾರು? ಎಂಬ ಪ್ರಶ್ನೆಗಳು ಸಹ ಮೂಡಿವೆ. ಆದರೆ, ಉತ್ತರವಿಲ್ಲ.!

Most Read Articles
Best Mobiles in India

English summary
In the reply to the notice by the Indian Computer Emergency Response Team (CERT-In), WhatsApp said that it has plugged-in certain vulnerabilities in the mobile application which allowed malware to monitor chats.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X