ಕರೆ ಮಾಡಿದ ಕೂಡಲೇ ನಿಮಗೂ ಇದೇ ಕಾಲರ್ ಟ್ಯೂನ್ ಕೇಳಿ ಬರ್ತಾ ಇದೀಯಾ?
ನೀವು ಯಾರಿಗೆ ಕರೆ ಮಾಡಿದ್ರೂ ಇದೇ ಕಾಲರ್ ಟ್ಯೂನ್ ಕೇಳಿ ಬರ್ತಾ ಇದೀಯಾ. ಯಾರು ಇದು ಹರ್‌ಘರ್ ತಿರಂಗ ಅಂತಾ ಮಾತನಾಡ್ತಾ ಇದ್ದಾರೆ ಅನ್ನೋ ಕನ್ಪ್ಯೂಸ್‌ನಲ್ಲಿದ್ದೀರಾ. ಕೆಲವರಂತೂ ಅರೆ ನಾವು ಯಾರೋ ಬೇರೆಯವರ ಸಂಖ್ಯೆಗೆ ಕರೆ ಮಾಡಿದ್ದೀವಾ ಅಂತಾ ಪರಿಶೀಲಿಸುವ ಮಟ್ಟಿಗೆ ಆಗೋಗಿದೆ. ಅಷ್ಟಕ್ಕೂ ಈ ಕಾಲರ್ ಟ್ಯೂನ್‌ನಲ್ಲಿ ಹೇಳ್ತಾ ಇರೋದೇನು ನಿಮಗೆ ಗೊತ್ತಾ.
ಹೌದು, ಕಳೆದ ಎರಡು ದಿನಗಳಿಂದ ಯಾರಿಗೆ ಕರೆ ಮಾಡಿದರೂ ಕೂಡ ಮೊದಲು ಹರ್ ಘರ್ ತಿರಂಗ ಕಾಲರ್ ಟ್ಯೂನ್ ಕೇಳಿ ಬರುತ್ತಿದೆ. ಇದು 2023 ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಕಾಲರ್ ಟ್ಯೂನ್ ಅನ್ನು ಪ್ಲೇ ಮಾಡಲಾಗ್ತಿದೆ. ಇನ್ನು ಈ ಕಾಲರ್ ಟ್ಯೂನ್‌ನಲ್ಲಿ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗವಹಿಸುವಂತೆ ಹೇಳಲಾಗ್ತಿದೆ. ಹಾಗಾದ್ರೆ ಹರ್ ಘರ್ ತಿರಂಗ ಕಾಲರ್ ಟ್ಯೂನ್ ಉದ್ದೇಶ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶದ ಪ್ರತಿಯೊಬ್ಬ ದೇಶವಾಸಿಯು ಕೂಡ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದಕ್ಕಾಗಿ ತಮ್ಮ ಸೊಶೀಯಲ್ ಮೀಡಿಯಾ ಡಿಪಿಗಳಲ್ಲಿ ರಾಷ್ಟ್ರದ್ವಜದ ಚಿತ್ರವನ್ನು ಹಾಕುವಂತೆ ಹೇಳಿದ್ದಾರೆ. ಅದರಂತೆ ದೇಶವಾಸಿಗಳು ಕೂಡ ತಮ್ಮ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿನ ಡಿಪಿಗಳನ್ನು ಬದಲಾಯಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಹರ್‌ಘರ್ ತಿರಂಗಾ ವೆಬ್‌ಸೈಟ್‌ಗೆ ನೀವು ತ್ರಿವರ್ಣ ಧ್ವಜವನ್ನು ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡುವಂತೆ ಹೇಳಲಾಗಿದೆ.
ಇದೇ ಮಾತನ್ನು ನಿಮಗೆ ಕೇಳಿ ಬರುತ್ತಿರುವ ಹರ್‌ಘರ್ ತಿರಂಗ ಕಾಲರ್ ಟ್ಯೂನ್‌ನಲ್ಲಿಯು ಸಹ ಹೇಳಲಾಗಿದೆ. ರಾಷ್ಟ್ರಧ್ವಜವನ್ನು ಹಾರಿಸುವ ಹಾಗೂ ಅದನ್ನು ಉತ್ತೇಜಿಸುವ ಕೇಂದ್ರ ಸರ್ಕಾರ ಉಪಕ್ರಮದ ಭಾಗವಾಗಿ ಈ ಕಾಲರ್ ಟ್ಯೂನ್‌ಗಳನ್ನು ಮಾರ್ಪಡಿಸಲಾಗಿದೆ. ಕೇಂದ್ರ ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಮೋಹನ್ ನೀಡಿದ ಹೇಳಿಕೆಯ ಪ್ರಕಾರ, 2023 ರ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ಈ ಕಾಲರ್ ಟ್ಯೂನ್ ಅನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.
ಅದರಂತೆ ಎಲ್ಲಾ ಭಾರತೀಯರು ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ "ಹರ್ ಘರ್ ತಿರಂಗ" ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಈ ಮೂಲಕ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಮತ್ತು ದೇಶ ಮತ್ತು ನಮ್ಮ ನಡುವೆ ಬಲವಾದ ಸಂಬಂಧವನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅದರಂತೆ ನೀವು ಕೂಡ ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿಯನ್ನು ಹಂಚಿಕೊಳ್ಳುವ ಮೂಲಕ ನೀವು ಡಿಜಿಟಲ್ ತಿರಂಗಾ ಆರ್ಟ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಇದಲ್ಲದೆ ಈಗಾಗಲೇ "ಹರ್ ಘರ್ ತಿರಂಗ" ಆಂದೋಲನವನ್ನು ಬೆಂಬಲಿಸುವ ಸಲುವಾಗಿ 2.5 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಅಂಚೆ ಕಚೇರಿಗಳಿಗೆ ಮಾರಾಟಕ್ಕೆ ವಿತರಿಸಲಾಗಿದೆ. ಈ ಮೂಲಕ ದೇಶದ ಸ್ವಾತಂತ್ರ್ಯ ಸಂಭ್ರಮವನ್ನು ಇನ್ನಷ್ಟು ಸಂಭ್ರಮಗೊಳಿಸುವ ಹಾಗೂ ರಾಷ್ಟ್ರೀಯತೆಯ ಪ್ರಜ್ಞೆ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸದ್ಯ ನೀವು ನಾವೆಲ್ಲಾ ಕೇಳುತ್ತಿರುವ ಹರ್ ಘರ್ ತಿರಂಗ ಕಾಲರ್ ಟ್ಯೂನ್ ಆಗಸ್ಟ್ 15 ರ ವರೆಗೆ ಮಾತ್ರ ಕೇಳಿ ಬರಲಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಈ ಕಾಲರ್ ಟ್ಯೂನ್ ತಂತಾನೇ ಬದಲಾಗಲಿದೆ. ಆದರಿಂದ ಯಾರು ಕೂಡ ಏನಿದು ಕಾಲರ್ ಟ್ಯೂನ್ ಅಂತಾ ಯೋಚಿಸಬೇಕಾದ ಅನಿವಾರ್ಯತೆಯಿಲ್ಲ. ಬದಲಿಗೆ ಕಾಲರ್ ಟ್ಯೂನ್‌ನಲ್ಲಿ ಹೇಳಿದಂತೆ ನಾವು ನೀವೆಲ್ಲಾ ಹರ್‌ಘರ್ ತಿರಂಗಾ ಅಭಿಯಾನವನ್ನು ಬೆಂಬಲಿಸೋಣ. ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಪ್ರೇಮವನ್ನು ಇನ್ನಷ್ಟು ಪಸರಿಸುವ ಕೆಲಸ ಮಾಡೋಣ.


Click it and Unblock the Notifications








