ಸಿಕ್ಕಾಪಟ್ಟೆ ಟ್ರೆಂಡ್​ ಆಗಿದೆ 'ಬೇಬಿ ಫೇಸ್​ ಫಿಲ್ಟರ್' ಫೀಚರ್!

|

ಇಂಟರ್ನೆಟ್‌ನಲ್ಲಿ ಯಾವಾಗ ಏನು ಜನಪ್ರಿಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈಗಂತೂ ಸ್ನ್ಯಾಪ್​ಚಾಟ್​​ ಬೇಬಿ ಫೇಸ್​ ಫಿಲ್ಟರ್​ ಸಿಕ್ಕಾಪಟ್ಟೆ ಟ್ರೆಂಡ್​ ಆಗಿದೆ. ಬೆಳಗ್ಗೆ ಎದ್ದು ಇಂಟರ್ನೆಟ್ ತೆರೆದರೆ ಸಾಕು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಮಕ್ಕಳಂತೆ ಕಾಣುವ ಚಿತ್ರಗಳು ಕಾಣಿಸುತ್ತವೆ. ಸೆಲೆಬ್ರಿಟಿಗಳ ಚಿತ್ರವಲ್ಲದೇ ಸಾಮಾನ್ಯರ ಚಿತ್ರಗಳು ಸಹ ಹರಿದಾಡುತ್ತಿವೆ.

ಹೌದು, ಸದ್ಯ ಈ ಸ್ನ್ಯಾಪ್​ಚಾಟ್​​ ಬೇಬಿ ಫೇಸ್​ ಫಿಲ್ಟರ್​ ಸಿಕ್ಕಾಪಟ್ಟೆ ಟ್ರೆಂಡ್​ ಆಗಿದ್ದು, ಜನರು ಬಾಲ್ಯಕ್ಕೆ ವಾಪಸ್​ ಹೋಗುವಂತಹ ಈ ಫೀಚರ್ ಮೂಲಕ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ, ​ಜನಪ್ರಿಯ ಸೆಲೆಬ್ರಿಟಿಗಳಿಗೆ ಹಾಗೂ ರಾಜಕಾರಣಿಗಳಿಗೂ ಕೂಡ ಈ ಬೇಬಿ ಫಿಲ್ಟರ್​ ಹಾಕಿದ್ರೆ ಹೇಗಿರುತ್ತೆ ಅಂತ ಟೆಸ್ಟ್​ ಮಾಡಿ ನೋಡಿ ಆನಂದ ಪಡುತ್ತಿದ್ದಾರೆ.

ಸಿಕ್ಕಾಪಟ್ಟೆ ಟ್ರೆಂಡ್​ ಆಗಿದೆ 'ಬೇಬಿ ಫೇಸ್​ ಫಿಲ್ಟರ್' ಫೀಚರ್!

ಆಪ್‌ಗಳಲ್ಲಿ ಹೊಸ ಫಿಲ್ಟರ್​​ ಪರಿಚಯಿಸಿದಾಗಲೆಲ್ಲಾ ಜನ ಅವನ್ನು ಟ್ರೈ ಮಾಡುತ್ತಾರೆ. ಅದರಲ್ಲಿ ಕೆಲವೊಂದು ಫಿಲ್ಟರ್​ಗಳು ಟ್ರೆಂಡ್​ ಆಗುತ್ತೆ. ಕೆಲವೊಂದು ಸಾಮಾನ್ಯವಾಗಿ ಕಾಣುತ್ತವೆ. ಈಗ ಆ ಲಿಸ್ಟ್​​​ಗೆ ಹೊಸ ಎಂಟ್ರಿ 'ಬೇಬಿ ಫೇಸ್​ ಫಿಲ್ಟರ್' ಸೇರಿದೆ​. ಈ ಹೊಸ ಫೀಚರ್ ದೊಡ್ಡವರನ್ನು ಬಾಲ್ಯದಲ್ಲಿ ಹೇಗಿರಬಹುದು ಎಂಬುದನ್ನು ಪಕ್ಕಾ ಲೆಕ್ಕ ಹಾಕಿ ತೋರಿಸುವುದು ಇದಕ್ಕೆ ಕಾರಣವಾಗಿದೆ.

ಸ್ನ್ಯಾಪ್‌ಚಾಟ್ ಆಪ್ ಅನ್ನು ಗೂಗಲ್‌ನಆಪರೇಟಿಂಗ್ ಸಿಸ್ಟಮ್‌ಗಾಗಿ ಹೊಸದಾಗಿ ಮರುನಿರ್ಮಿಸಲಾಗಿದ್ದು, ಹಳೆ ಆಪ್‌ಗೆ ಹೋಲಿಕೆ ಮಾಡಿದರೆ ದೋಷಮುಕ್ತವಾಗಿದೆ ಎಂದು ಸಂಸ್ಥೆ ತಿಳಿಸಿತ್ತು. ಅಂದರೆ ಆಪ್‍ ಬಳಸುವಾಗ ಬಳಕೆದಾರರಿಗೆ ಅದೇ ಹಳೆಯ ಅನುಭವ ದೊರೆತರೂ, ವೇಗ ವರ್ಧನೆ ಮತ್ತು ಹೆಚ್ಚಿನ ಆಯ್ಕೆ ದೊರೆಯುತ್ತದೆ ಸಾಧ್ಯವಾಗುತ್ತದೆ ಎಂದು ಸ್ನಾಪ್‍ಚಾಟ್ ಹೇಳಿತ್ತು.

ಸ್ನಾಪ್‍ಚಾಟ್‍ನಲ್ಲಿ ಕೆಲ ನೂತನ ಫೀಚರ್ ಪರಿಚಯಿಸಲಾಗಿದೆ. ಗ್ರಾಹಕ ಬಳಕೆ ಸ್ನೇಹಿಯಾಗಿ ರೂಪಿಸಲಾಗಿದೆ ಎಂದು ಸ್ನಾಪ್‌ಚಾಟ್ ಹೇಳಿಕೊಂಡಿದೆ. ದೇಶದಲ್ಲಿ ಚಾಟಿಂಗ್ ಆಪ್‌ಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿರುವ ಸಮಯದಲ್ಲೇ ಸ್ನ್ಯಾಪ್‌ಚಾಟ್ಬದಲಾವಣೆಗಳನ್ನು ತಂದುಕೊಂಡು ಗ್ರಾಹಕರ ಬಳಿ ಬಂದಿದೆ. ಆದರೆ, ಈ ಆಪ್ ಯಶಸ್ವಿಯಾಗುವುದೇ?, ಕಾದು ನೋಡಬೇಕು.!

Best Mobiles in India

Read more about:
English summary
People are Trying Snapchat Baby Filter on Indian Celebrities and the Results are Adorable. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X