Home
ಸುದ್ದಿಜಾಲ

ಇಂಟರ್ನೆಟ್ ಗೂಗಲ್‌ ಕೈಯಲ್ಲಿ ಇರಬಾರದು: ಪರ್ಪ್ಲೆಕ್ಸಿಟಿ CEO ಅರವಿಂದ್ ಶ್ರೀನಿವಾಸ್!

ಭಾರತೀಯ ಮೂಲದ ಅಮೆರಿಕನ್ ಸಂಜಾತ, ಪರ್ಪ್ಲೆಕ್ಸಿಟಿ ಕಂಪನಿಯ CEO ಅರವಿಂದ್ ಶ್ರೀನಿವಾಸ್ ಇತ್ತೀಚೆಗೆ ಗೂಗಲ್‌ ವಿರುದ್ಧ ತೀವ್ರ ಟೀಕೆ ಮಾಡಿದ್ದು, ಇಂಟರ್ನೆಟ್ ಮೇಲಿನ ಕಂಪನಿಯ ಪ್ರಭಾವವನ್ನು ಪ್ರಶ್ನಿಸಿದ್ದಾರೆ. ತಮ್ಮ ಹೊಸ AI ಆಧಾರಿತ ಬ್ರೌಸರ್ Comet‌ ಪ್ರಚಾರ ಮಾಡುವ ವೇಳೆ, ಅವರು ''ಇಂಟರ್ನೆಟ್ ತುಂಬಾ ಮುಖ್ಯ, ಅದನ್ನು ಗೂಗಲ್ ಕೈಯಲ್ಲಿ ಬಿಡಬಾರದು(Internet is too important to be left in Google's hands) ಎಂದು ಹೇಳಿ ಚರ್ಚೆಗೆ ಕಾರಣರಾಗಿದ್ದಾರೆ. ಹಾಗಾದರೆ, ಪರ್ಪ್ಲೆಕ್ಸಿಟಿ ಕಂಪನಿಯ CEO ಅರವಿಂದ್ ಶ್ರೀನಿವಾಸ್ ಅವರು ಹೀಗೆ ಹೇಳಿದ್ದೇಕೆ ಎಂಬುದನ್ನು ನೊಡೋಣ ಬನ್ನಿ.

ಈ ಹೇಳಿಕೆಯ ಹಿನ್ನೆಲೆ ಎಂದರೆ, ಅರವಿಂದ್ ಶ್ರೀನಿವಾಸ್ ಅವರು ತಮ್ಮ X (ಹಳೆಯ Twitter) ಖಾತೆಯಲ್ಲಿ Comet ಅಥವಾ Chrome ಯಾವುದು ಉತ್ತಮ?" ಎಂಬ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯಲ್ಲಿ ಗೂಗಲ್ ಕ್ರೋಮ್ 51% ಮತಗಳನ್ನು ಪಡೆದು ಸ್ವಲ್ಪ ಮುನ್ನಡೆ ಸಾಧಿಸಿದರೂ, ಪರ್ಪ್ಲೆಕ್ಸಿಟಿ CEO ಇದನ್ನು ಒಳ್ಳೆಯ ಪ್ರಾರಂಭ ಎಂದು ವಿಶ್ಲೇಷಿಸಿದರು. "Comet ಬ್ರೌಸರ್ ಅನ್ನು ಇನ್ನಷ್ಟು ಸುಧಾರಿಸಲು ನಾವು ಬಹಳ ಕೆಲಸ ಮಾಡಬೇಕಿದೆ. ಇದು ಉತ್ತಮ ಆರಂಭ" ಎಂದು ಅವರು ಹೇಳಿದರು. ಜೊತೆಗೆ ಇಂಟರ್ನೆಟ್ ಗೂಗಲ್‌ನ ಕೈಯಲ್ಲಿ ಇರಬಾರದು ಎಂದು ಹೇಳುವ ಮೂಲಕ ಬಹುಚರ್ಚಿತ ವಿಷಯವನ್ನು ಕೆದಕಿದರು.

ಪರ್ಪ್ಲೆಕ್ಸಿಟಿ ಕಂಪನಿಯು 2022ರ ಡಿಸೆಂಬರ್‌ನಲ್ಲಿ ತನ್ನ AI ಆಧಾರಿತ answer engine ಪ್ಲಾಟ್‌ಫಾರ್ಮ್‌ನ್ನು ಬಿಡುಗಡೆ ಮಾಡಿತು. ಆ ದಿನದಿಂದಲೂ ಗೂಗಲ್‌ನ ಸರ್ಚ್ ಮಾರುಕಟ್ಟೆಗೆ ನೇರ ಸ್ಪರ್ಧೆ ನೀಡುವ ಗುರಿಯನ್ನು ಹೊಂದಿದೆ. ಈ ವರ್ಷ, ಸಂಸ್ಥೆಯು Comet ಎಂಬ AI ಶಕ್ತಿಯ ಬ್ರೌಸರ್‌ನ್ನು ಬಿಡುಗಡೆ ಮಾಡಿ ತನ್ನ ತಂತ್ರಜ್ಞಾನ ಹಾದಿಯನ್ನು ಮತ್ತಷ್ಟು ಬಲಪಡಿಸಿದೆ. ಕಂಪನಿಯ ಪ್ರಕಾರ, 2025ರ ಜೂನ್ ವೇಳೆಗೆ 2.2 ಕೋಟಿ ಸಕ್ರಿಯ ಬಳಕೆದಾರರು ಮತ್ತು ತಿಂಗಳಿಗೆ 780 ಕೋಟಿ ಹುಡುಕಾಟಗಳು ದಾಖಲಾಗಿವೆ. ಈ ಅಂಕಿ-ಅಂಶಗಳು ಪರ್ಪ್ಲೆಕ್ಸಿಟಿ ವೇಗವಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತವೆ.

ಇನ್ನು ಗೂಗಲ್‌ನ ಪ್ರಭಾವದ ಬಗ್ಗೆ ಪ್ರಶ್ನೆ ಎತ್ತಿರುವವರು ಪರ್ಪ್ಲೆಕ್ಸಿಟಿ CEO ಮಾತ್ರವಲ್ಲ. 2025ರ ಸೆಪ್ಟೆಂಬರ್‌ನಲ್ಲಷ್ಟೇ ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಗೂಗಲ್‌ನ ಇಂಟರ್ನೆಟ್ ಉತ್ಪನ್ನ ವಿತರಣೆ ಕ್ರಮವನ್ನು "ಅನ್ಯಾಯಕರ" ಎಂದು ಘೋಷಿಸಿತ್ತು. ಗೂಗಲ್ ವಿರುದ್ಧ ನಡೆಯುತ್ತಿರುವ ಅಂಟಿಟ್ರಸ್ಟ್ ಪ್ರಕರಣದಲ್ಲಿ DOJ ಗೆದ್ದ ನಂತರ ಈ ಹೇಳಿಕೆ ಹೊರಬಂದಿತ್ತು.ಇದೀಗ ಅರವಿಂದ್ ಶ್ರೀನಿವಾಸ್ ಅವರುಇಂಟರ್ನೆಟ್ ಗೂಗಲ್‌ನ ಕೈಯಲ್ಲಿ ಇರಬಾರದು ಎಂದು ಹೇಳುವ ಮೂಲಕ ಬಹುಚರ್ಚಿತ ವಿಷಯವನ್ನು ಕೆದಕಿದ್ದಾರೆ. ಇದು ಇಂಟರ್‌ನೆಟ್‌ ಮೇಲೆ ಗೂಗಲ್‌ನ ಏಕಸ್ವಾಮ್ಯತೆ ಇರುವುದನ್ನು ಸೂಚಿಸುತ್ತಿದೆ.

ಇತ್ತೀಚಿಗೆ ಪರ್ಪ್ಲೆಕ್ಸಿಟಿ ಪರಿಚಯಿಸಿರುವ Comet ಬ್ರೌಸರ್ ಒಳನಿರ್ಮಿತ AI ಸಹಾಯಕ ಮತ್ತು agentic ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚು ಬುದ್ಧಿವಂತ ಅನುಭವವನ್ನು ನೀಡುವ ಭರವಸೆಯನ್ನು ತಂದಿದೆ. ಅದರೆ, ಗೂಗಲ್ ಕ್ರೋಮ್ ಈಗಲೂ 63.83% ಮಾರುಕಟ್ಟೆ ಹಂಚಿಕೆಯನ್ನು (Similarweb - ಸೆಪ್ಟೆಂಬರ್ 2025) ಕಾಯ್ದುಕೊಂಡು ವಿಶ್ವದ ಅತ್ಯಂತ ಜನಪ್ರಿಯ ಬ್ರೌಸರ್ ಆಗಿದೆ. ಈಗ ಬಳಕೆದಾರರು ಹೆಚ್ಚುವರಿಯಾಗಿ AI ಆಧಾರಿತ, ವೇಗವಾದ ಮತ್ತು ಗೌಪ್ಯತೆಯನ್ನು ಕಾಪಾಡುವ ಬ್ರೌಸರ್‌ಗಳತ್ತ ತಿರುಗುತ್ತಿದ್ದಾರೆ. ಇದು ಭವಿಷ್ಯದಲ್ಲಿ ಗೂಗಲ್ ಕ್ರೋಮ್‌ನ ಪ್ರಭಾವಕ್ಕೆ ಸವಾಲು ನೀಡುವ ಸಾಧ್ಯತೆಯಿದೆ.

ಇಂಟರ್ನೆಟ್ ಗೂಗಲ್‌ ಕೈಯಲ್ಲಿ ಇರಬಾರದು: ಪರ್ಪ್ಲೆಕ್ಸಿಟಿ CEO ಅರವಿಂದ್ ಶ್ರೀನಿವಾಸ್

ಇತ್ತೀಚಿನ AI ಆಧಾರಿತ, ವೇಗವಾದ ಮತ್ತು ಗೌಪ್ಯತೆಯನ್ನು ಕಾಪಾಡುವ ಬ್ರೌಸರ್‌ಗಳು ಭವಿಷ್ಯದಲ್ಲಿ ಗೂಗಲ್‌ ಸರ್ಚ್ ಅನ್ನು ಮೀರಿಸಬಹುದೇ ಎಂಬ ಕುತೂಹಲ ನನ್ನಲ್ಲಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು?. ಇಂತಹದೊಂದು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದೀರಾ? ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Arvind Srinivas, CEO of Perplexity, has raised concerns about Google's role in shaping the internet, expressing the opinion that "the internet is too important to be left in Google's hands." Perplexity is actively competing with Chrome through its AI-driven Comet browser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+