ಟ್ವಿಟರ್ ಟ್ರೋಲ್: ಪೆಟ್ರೋಲ್ ಬೆಲೆ ರೂ.99.99 ದಾಟಲ್ಲ ಚಾಲೆಂಜ್...!

|

ಭಾರತದಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವುದು ಪೆಟ್ರೋಲ್ ಬೆಲೆ ಏರಿಕೆ. ದಿನದಿಂದ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಬೆಲೆ ಟ್ವಿಟರ್‌ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೇ ಮಾದರಿಯಲ್ಲಿ ಕಾಲೆಳೆಯುವ ಸಲುವಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ ರೂ.99.99 ದಾಟಲ್ಲ ಎಂದು ಟ್ವಿಟರ್‌ನಲ್ಲಿ ಹೊಸ ಚಾಲೆಂಜ್ ಅನ್ನು ಶುರು ಮಾಡಿದ್ದಾರೆ.

ಟ್ವಿಟರ್ ಟ್ರೋಲ್: ಪೆಟ್ರೋಲ್ ಬೆಲೆ ರೂ.99.99 ದಾಟಲ್ಲ ಚಾಲೆಂಜ್...!

ಇದಕ್ಕೆ ಕಾರಣ ಸಹ ಇದೆ. ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್‌/ಡೀಸೆಲ್‌ ದರವನ್ನು 99.99ಕ್ಕಿಂತ ಹೆಚ್ಚು ಸಂಖ್ಯೆಯನ್ನು ತೋರಿಸುವ ಸಾಮಾರ್ಥ್ಯವನ್ನು ಹೊಂದಿಲ್ಲ ಎನ್ನಲಾಗಿದೆ. ಇದನ್ನು ತಿಳಿದ ಕೆಲವರು ಟ್ವಿಟರ್‌ನಲ್ಲಿ ಈ ಕುರಿತು ಕಾಲೆಳೆಯುತ್ತಿದ್ದಾರೆ. ಇದಕ್ಕಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ ರೂ.99.99 ದಾಟಲ್ಲ ಎಂದು ಟ್ವಿಟರ್‌ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ರೂಪಾಯಿ ಮೌಲ್ಯ ಕುಸಿತ:

ರೂಪಾಯಿ ಮೌಲ್ಯ ಕುಸಿತ:

ದಿನೇ ದಿನೇ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆಯೂ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಹ ಕುಸಿಯುತ್ತಿದೆ. ಇದರಡು ಒಂದೇ ಸಮಯದಲ್ಲಿ ಸೇರಿಕೊಂಡಿರುವ ಹಿನ್ನಲೆಯಲ್ಲಿ ಪೆಟ್ರೋಲ್‌ ದರ ಶತಕವನ್ನು ದಾಟಲಿದೆ. ಈ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಈ ಕುರಿತು ಟ್ರೋಲ್ ಮಾಡಲಾಗುತ್ತಿದೆ.

ಪಂಪ್‌ಗಳು ಸಪೋರ್ಟ್ ಮಾಡುತ್ತಿಲ್ಲ:

ಈಗಾಗಲೇ ಬೆಂಗಳೂರಲ್ಲಿ ಪೆಟ್ರೋಲ್‌ ದರ ರೂ.84 ದಾಟಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ರೂ. 90ಕ್ಕೆ ಲಭ್ಯವಿದೆ. ಈ ಹಿನ್ನಲೆಯಲ್ಲಿ ಟ್ವಿಟಿಗರು ಮಾರುಕಟ್ಟೆಯಲ್ಲಿ ಪೆಟ್ರೋಲ್‌ ದರ ಶತಕ ಬಾರಿಸುತ್ತದೆ ಆದರೆ ಇದಕ್ಕೆ ಪೆಟ್ರೋಲ್‌ ಪಂಪ್‌ಗಳು ಸಪೋರ್ಟ್ ಮಾಡುತ್ತಿಲ್ಲ, ಅವು ಬಂದ್ ಮಾಡುತ್ತಿವೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ರೂ.0.33ಕ್ಕೆ ಲೀಟರ್ ಪೆಟ್ರೋಲ್:

ರೂ.0.33ಕ್ಕೆ ಲೀಟರ್ ಪೆಟ್ರೋಲ್:

ಈಗಾಗಲೇ ಮಾರುಕಟ್ಟೆಯಲ್ಲಿ ಆಕ್ಟೇನ್‌ ಗುಣಮಟ್ಟದ ಪೆಟ್ರೋಲ್‌ ದರ ಸೆಪ್ಟಂಬರ್‌ 8ರಂದೇ ರೂ.100 ಅನ್ನು ಮೀರಿಸಿದೆ. ಸದ್ಯದ ದರ ರೂ.100.33 ಇದೆ. ಆದರೆ ಪೆಟ್ರೋಲ್ ಪಂಪ್‌ಗಳಲ್ಲಿ ರೂ.0.33 ಎಂದು ತೋರಿಸುತ್ತದೆ. ಈ ಹಿನ್ನಲೆಯಲ್ಲಿ ಲೀಟರ್ ಪೆಟ್ರೋಲ್ ರೂ.0.33ಕ್ಕೆ ಎಂದು ಕಾಲೆಳೆಯುತ್ತಿದ್ದಾರೆ.

Best Mobiles in India

English summary
petrol prices can't be raised above rs 99.99/litre, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X